ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್19: ಕೆಲಸದಿಂದ ವಜಾಗೊಂಡ ಟೆಕ್ಕಿ ದೀಪಾ ಬರೆದ ಪತ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ದೇಶದ ಐಟಿ ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೊನಾವೈರಸ್ ದೆಸೆಯಿಂದ ಉದ್ಯೋಗ ಕಡಿತ ಆರಂಭವಾಗಿದೆಯೇ? ಯಾವುದೇ ಕಾರಣವಿಲ್ಲದೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಟೆಕ್ಕಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತಿದೆಯೇ? ಈ ರೀತಿ ಸುದ್ದಿ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಹಲವು ಟೆಕ್ಕಿಗಳಿಗೆ ಆಘಾತ ಮೂಡಿಸಿದೆ. ಎಕೋಸ್ಪೇಸ್ ನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರ ಮಹಿಳಾ ಸಾಫ್ಟ್ ವೇರ್ ಉದ್ಯೋಗಿ ವಜಾಗೊಂಡ ಬಳಿಕ ಬರೆದ ಪತ್ರ ಈಗ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದೆ.

Recommended Video

ಅಯ್ಯೊ ಪಾಪ,ಮನೆಯಿಂದ ಹೊರಗಡೆ ಬಂದಿದಕ್ಕೆ ಮುಂಬೈನಲ್ಲಿ ಈ ಯುವಕರ ಸ್ಥಿತಿ ಏನಾಯ್ತು ನೋಡಿ

ಬಹುಮುಖ್ಯವಾಗಿ ಐಟಿ-ಬಿಟಿ ಉದ್ಯೋಗಿಗಳ ಕಷ್ಟ ನಷ್ಟಕ್ಕೆ ಕಾರ್ಮಿಕ ಇಲಾಖೆ ಬಳಿ ಉತ್ತರವಿಲ್ಲವೇ? ಐಟಿ ಕೂಲಿಗಳು ಎಂದೇ ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುವ ಟೆಕ್ಕಿಗಳನ್ನು "ಕಾರ್ಮಿಕ" ಎಂದು ಇಲಾಖೆ ಪರಿಗಣಿಸುವುದಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ.

ಲಾಕ್ಡೌನ್ ಸಂದರ್ಭದಲ್ಲಿ ಸಿಬ್ಬಂದಿಗೆ ಪೂರ್ತಿ ಸಂಬಳ ನೀಡಿ: FKCCIಲಾಕ್ಡೌನ್ ಸಂದರ್ಭದಲ್ಲಿ ಸಿಬ್ಬಂದಿಗೆ ಪೂರ್ತಿ ಸಂಬಳ ನೀಡಿ: FKCCI

ಇದೆಲ್ಲದರ ನಡುವೆ ಕಾಡುಗೋಡಿ ನಿವಾಸಿ ದೀಪಾ ವೆಂಕಟೇಶ್ ರೆಡ್ಡಿ ಎಂಬುವರು ತಾವು ಕಾರ್ಯ ನಿರ್ವಹಿಸುತ್ತಿದ್ದ ಬಹುರಾಷ್ಟ್ರೀಯ ಕಂಪನಿಯಿಂದ ನ್ಯಾಯಕೋರಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಉದ್ಯೋಗ, ಸಂಬಳವಿಲ್ಲದೆ ಹೇಗೆ ಬದುಕುವುದು ಎಂದು ಪ್ರಶ್ನಿಸಿ, ನೆರವು ಕೋರಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಮುಂದೇನಾಯ್ತು. ಓದಿ...

ಟೆಕ್ಕಿ ಬರೆದ ಪತ್ರದ ಸಾರಾಂಶ

ಟೆಕ್ಕಿ ಬರೆದ ಪತ್ರದ ಸಾರಾಂಶ

ಸಾಂಕ್ರಾಮಿಕ ಪಿಡುಗು ಕಾಡುತ್ತಿರುವ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನಾನು ಬೆಳ್ಳಂದೂರು ರಸ್ತೆ ಎಕೋಸ್ಪೇಸ್ ನಲ್ಲಿರುವ ಎಂಎನ್ ಸಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನನ್ನನ್ನು ಸೇರಿ 15 ಮಂದಿ ನಮ್ಮ ಬ್ಯಾಚ್ ಮೇಟ್ಸ್ ಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸಾಂಕ್ರಾಮಿಕ ಪಿಡುಗು ಇರುವ ಸಂದರ್ಭದಲ್ಲಿ ಅನುಸರಿಸಬೇಕಾದ ಅಗತ್ಯಕ್ರಮವನ್ನು ಅನುಸರಿಸಿಲ್ಲ ಎಂದಿದ್ದಾರೆ.

ಎಲ್ಲರಿಗೂ 5600 ರು ಸೆಟ್ಲ್ ಮೆಂಟ್

ಎಲ್ಲರಿಗೂ ಒಂದೇ ರೀತಿ ಮಾನದಂಡ ಅನುಸರಿಸಲಾಗಿದೆ. ಎಲ್ಲರಿಗೂ 5600 ರು ಫೈನಲ್ ಸೆಟ್ಲ್ ಮೆಂಟ್ ಮೊತ್ತ ಎಂದು ನೀಡಲಾಗಿದ್ದು, ರಿಲೀವಿಂಗ್ ಲೆಟರ್ ಕೂಡಾ ನೀಡಿ ಎಲ್ಲಾ ಪ್ರಕ್ರಿಯೆ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಆಹಾರ, ವಸತಿ ನೋಡಿಕೊಂಡು ಬದುಕುವುದು ಕಷ್ಟ, ನಾವು 16 ಮಂದಿ ಮಾತ್ರ ಕೆಲಸ ಕಳೆದುಕೊಂಡಿದ್ದೇವೆ. ಮಿಕ್ಕ 5 ಮಂದಿ ಇನ್ನೂ ಕೆಲಸ ಮಾಡುತ್ತಿದ್ದಾರೆ.

ಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ

ಐಟಿ ಕಂಪನಿಯೇ ಎಂದು ಪ್ರಶ್ನಿಸಿದ ಮಣಿವಣ್ಣನ್

ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ನಿಮ್ಮದು ಐಟಿ ಕಂಪನಿಯೇ, ನಿಮ್ಮನ್ನು ಕಾರ್ಮಿಕ ವರ್ಗಕ್ಕೆ ಸೇರುವುದಿಲ್ಲ, ನಿಮ್ಮ ಸಂಸ್ಥೆಯ ಒಪ್ಪಂದ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಆದರೆ, ಕೊನೆಯಲ್ಲಿ ಕಾರ್ಮಿಕ ಸಹಾಯವಾಣಿಗೆ ಟ್ಯಾಗ್ ಮಾಡಿ ಸ್ಥಳೀಯ ಕಾರ್ಮಿಕ ಅಧಿಕಾರಿಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

ಜನಸ್ನೇಹಿಯಿಂದ ಪ್ರತ್ಯುತ್ತರ

ಕಾರ್ಮಿಕ ಇಲಾಖೆಯ ಸಹಾಯವಾಣಿ(9333333684)ಯಿಂದ ಪ್ರತ್ಯುತ್ತರ ಬಂದಿದ್ದು, ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗೆ ದೂರು ಮುಟ್ಟಿಸಲಾಗಿದೆ. ಕಾರ್ಮಿಕ ಸಹಾಯವಾಣಿ(https://twitter.com/Karmika_Sahaya) ಟೆಕ್ಕಿಯನ್ನು ಸಂಪರ್ಕಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಸರಣಿ ಟ್ವೀಟ್ ಮುಂದುವರೆದಿದೆ

ಈ ಟ್ವೀಟ್ ಸರಣಿಗೆ ಇನ್ನಷ್ಟು ಮಂದಿ ತಮ್ಮನ್ನು ಇದೇ ರೀತಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ದೂರಿದ್ದಾರೆ.

English summary
Coronavirus Pandemic: A Bengaluru Techie's letter after getting terminated reaches Karnataka labour department. Janasnehi helpline has taken the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X