ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಷ್ಟೇ positive ಕೇಸ್ ಬಂದ್ರೂ ನಾವು ಎದುರಿಸಲು ಸಿದ್ಧ: ಶ್ರೀರಾಮುಲು

|
Google Oneindia Kannada News

ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಿನ ಮಂದಿಗೆ ಹರಡದಂತೆ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ ಎಂದುವಿಧಾನಸೌಧದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗೊಷ್ಠಿಯಲ್ಲಿಂದು ಮಾತನಾಡುತ್ತಾ, ಈ ವರೆಗೆ 1,2253 ವ್ಯಕ್ತಿಗಳನ್ನು ಕರ್ನಾಟಕದಲ್ಲಿ ತಪಾಸಣೆ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86,231 ಜನರ ತಪಾಸಣೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 30,606 ಜನರ ತಪಾಸಣೆ ಮಾಡಲಾಗಿದೆ. ಕಾರವಾರ ಹಾಗೂ ಮಂಗಳೂರು ಬಂದರುಗಳಲ್ಲಿ 5,695 ಜನ ತಪಾಸಣೆ ನಡೆಸಲಾಗಿದೆ ಎಂದರು.

ಕರ್ನಾಟಕದಲ್ಲಿ ಕೊರೊನಾ ಪತ್ತೆಗೆ ಎರಡು ಲ್ಯಾಬ್‌ಗಳು ಆರಂಭಕರ್ನಾಟಕದಲ್ಲಿ ಕೊರೊನಾ ಪತ್ತೆಗೆ ಎರಡು ಲ್ಯಾಬ್‌ಗಳು ಆರಂಭ

ಕರ್ನಾಟಕದಲ್ಲಿ ಈಗ (ಮಾರ್ಚ್ 20) ಬೆಳಗ್ಗೆಒಟ್ಟು 15 ಮಂದಿ ಕೊರೋನಾ ಸೋಂಕಿತರು ಇದ್ದಾರೆ. ಬೆಂಗಳೂರಿನಲ್ಲಿ 13 ಜನ, ಕಲಬುರ್ಗಿಯಲ್ಲಿ 3 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮಡಿಕೇರಿಯಲ್ಲಿ ಒಬ್ಬರಿಗೆ ದೃಢಪಟ್ಟಿದೆ. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ಒಟ್ಟು 5 Positive ಬಂದ ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ವಿವರ ನೀಡಿದರು.

 ಇಬ್ಬರು ಇವತ್ತು‌ Discharge ಆಗ್ತಾ ಇದ್ದಾರೆ

ಇಬ್ಬರು ಇವತ್ತು‌ Discharge ಆಗ್ತಾ ಇದ್ದಾರೆ

ಇಬ್ಬರು ಕೋವಿಡ್19 ಮುಕ್ತರಾಗಿದ್ದು, ಡಿಸ್ಟಾರ್ಜ್ ಆಗುತ್ತಿದ್ದಾರೆ. ಒಟ್ಟು ಇಲ್ಲಿಯ ವರೆಗೆ 1143 ಜನರ ರಕ್ತ ಹಾಗೂ ಕಫ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 915 ಜನರ ವರದಿ ಬಂದಿದ್ದು ಎಲ್ಲವೂ Negative ಬಂದಿವೆ. ಉಳಿದ ಪರೀಕ್ಷಾ ವರದಿಗಳು ಬರಬೇಕಿದೆ. ಸುಮಾರು‌ 2280 ಜನರನ್ನು Home Quarantine ನಲ್ಲಿ ಇಡಲಾಗಿದೆ. ಸುಮಾರು 97 ಜನರನ್ನ Hospital Quarantine ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂಕಿ ಅಂಶ ನೀಡಿದರು. ಕೊರೋನಾ ಭಯಾನಕ ಕಾಯಿಲೆ ಅಲ್ಲ. ಯಾರೂ ಗಾಬರಿ ಪಡುವುದು ಬೇಡ. ನಿನ್ನೆ ಒಂದೇ ದಿನ 3000 ಜನ ಮತ್ತೆ ತಾವಾಗಿಯೇ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ ಎಂದರು

 ಜನತಾ ಕರ್ಫ್ಯೂಗೆ ಸಹಕಾರ ನೀಡಿ

ಜನತಾ ಕರ್ಫ್ಯೂಗೆ ಸಹಕಾರ ನೀಡಿ

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಕರೆ ನೀಡಿದ್ದಾರೆ. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾರೂ ಹೊರಗೆ ಬಾರದ ರೀತಿಯಲ್ಲಿ ಪ್ರಧಾನಿ ಸೂಚನೆ ನೀಡಿದ್ದಾರೆ. ಪ್ರಧಾನಿ ಕರೆಗೆ ನಾವೆಲ್ಲ ಒಟ್ಟುಗೂಡಿ ಕೈ ಜೋಡಿಸಿ ಸ್ಪಂದಿಸೋಣ. ಮಾರ್ಚ್ 22 ರಿಂದ ಮಕ್ಕಳು ಹಾಗೂ ವೃದ್ಧರು ಮನೆಯಲ್ಲಿರುವಂತೆ ಸೂಚಿಸಲಾಗಿದೆ. ಈ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ ಎಂದು ಕೋರಿದರು.

 ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ

ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ

ಈಗಾಗಲೇ 15 ದಿನ ನಮ್ಮ‌ ರಾಜ್ಯ ಸರ್ಕಾರ ಮಾಲ್, ಸಿನಿಮಾ ಮಂದಿರ, ಸಾರ್ವಜನಿಕ ಸ್ಥಳಗಳನ್ನು ನಿರ್ಬಂಧಿಸಲಾಗಿದೆ. ಸರ್ಕಾರದ ನಿಯಮಗಳನ್ನ ರಾಜ್ಯದ ಜನ ಪಾಲಿಸಬೇಕು. ಜನತೆಯ ಸಹಕಾರ ಇಲ್ಲದೆ ಸರ್ಕಾರ ಏನೂ ಮಾಡೋಕೆ ಆಗೊಲ್ಲ.ರಾಜ್ಯದ ಜನ ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಜೊತೆಗೆ ನಾನಿದ್ದೇನೆ. ನಮ್ಮ ಸರ್ಕಾರ,‌ ಮುಖ್ಯಮಂತ್ರಿಗಳು‌ ಇದ್ದಾರೆ ಎಂದರು.

 ವಿಮಾನಗಳ ಹಾರಾಟಕ್ಕೆ ನಿರ್ಬಂಧ

ವಿಮಾನಗಳ ಹಾರಾಟಕ್ಕೆ ನಿರ್ಬಂಧ

ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನೂ ಬಂದ್ ಮಾಡಿದ್ದೇವೆ. ಕೇಂದ್ರ ಸರ್ಕಾರ ಕೂಡಾ ಮುಂದಿನ ವಾರ ಯಾವುದೇ ವಿದೇಶಿ ವಿಮಾನ ಲ್ಯಾಂಡ್ ಆಗುವುದಿಲ್ಲ ಎಂದಿದೆ. ಬೇರೆ ರಾಜ್ಯಗಳಿಂದ ಬರುವವರನ್ನೂ ಕೂಡ Home Quarantine ಮಾಡಲಾಗುತ್ತಿದೆ. ಸಾರ್ವಜನಿಕರು ದಯಮಾಡಿ ಸ್ವಚ್ಛತೆ ಕಾಪಾಡಿ ಎಂದರು.

ಆಸ್ಪತ್ರೆಗಳ ವಿವರ, ಟಾಸ್ಕ್ ಫೋರ್ಸ್

ವಿಕ್ಟೋರಿಯಾ 2000 ಬೆಡ್ ಹೊಂದಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ‌ 400, ಜಯನಗರ ಆಸ್ಪತ್ರೆ 400, ಕಿಮ್ಸ್ ಆಸ್ಪತ್ರೆಯಲ್ಲಿ 1000 ಬೆಡ್ ಸಿಗುತ್ತೆ. ಈ ಆಸ್ಪತ್ರೆಗಳನ್ನು ಸಂಪೂರ್ಣ ಕೋರೋನಾ ವೈರಸ್ ಚಿಕಿತ್ಸೆಗೆ ಇಡಲು ಸಲಹೆ ಬಂದಿವೆ. ಟಾಸ್ಕ್ ಫೋರ್ಸ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಕೋರೋನಾ ಗೆ ವಿಶೇಷ ಆಸ್ಪತ್ರೆ ಬೇಕು ಎಂಬುದು ಹಲವರ ವಾದ ಹೀಗಾಗಿ ಟಾಸ್ಕ್ ಫೋರ್ಸ್ ಕಮಿಟಿ‌ಸಭೆಯಲ್ಲಿ ಚರ್ಚೆ ಮಾಡ್ತೀನಿ. ಎಷ್ಟೇ positive ಕೇಸ್ ಬಂದ್ರೂ ನಾವು ಎದುರಿಸಲು ಸಿದ್ಧವಾಗಬೇಕಿದೆ, ಹಾಗಾಗಿ ನಾನು ಇವತ್ತು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಡ್ತೀನಿ. ಇದು ಮುಂದಾಲೋಚನೆಗಾಗಿ ಈ ಚಿಂತನೆ ನಡೆಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಬಿ.‌ಶ್ರೀರಾಮುಲು ಹೇಳಿದರು.

English summary
Coronavirus outbreak: Karnataka ready to take care Covid19 positive cases said health minister B Sriramulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X