ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೊರೊನಾ ಸೋಂಕಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆ

|
Google Oneindia Kannada News

ಬೆಂಗಳೂರು, ಮಾರ್ಚ್ 3: ಕೊರೊನಾ ಸೋಂಕು ತಗುಲಿರುವ ಬೆಂಗಳೂರು ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆ ನೀಡಲಾಗಿದೆ.

ತೆಲಂಗಾಣ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ಆಡಳಿತ ಮಂಡಳಿಯು ತಾತ್ಕಾಲಿಕ ರಜೆ ನೀಡಿದ್ದು, ಎಲ್ಲರೂ ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿದೆ.

ಆದರೆ ಆತ ಎಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆತನ ಸ್ನೇಹಿತನಿಗೂ ಸೋಂಕು ತಗುಲಿರುವ ಸಾಧ್ಯತೆ ಇರುವ ಕಾರಣ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊರೊನಾ ಸೋಂಕಿತ ಟೆಕ್ಕಿಯ ಜೊತೆ ಇಬ್ಬರೂ ರೂಮ್‍ಮೇಟ್ ಇದ್ದರು. ಈಗಾಗಲೇ ಒಬ್ಬ ಟೆಕ್ಕಿ ಸಿಕ್ಕಿದ್ದು, ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗಿದೆ.

ಮತ್ತೊಬ್ಬನಿಗಾಗಿ ಆರೋಗ್ಯ ಇಲಾಖೆಯಿಂದ ಹುಡುಕಾಟ ನಡೆಯುತ್ತಿದೆ. ಇಂದು ಬೆಳಗ್ಗೆ ಟೆಕ್ಕಿ ನಿವಾಸಕ್ಕೆ ಹೋದಾಗ ಆತ ಸಿಕ್ಕಿರಲಿಲ್ಲ. ಆತ ಸಿಕ್ಕ ಬಳಿಕ ಆತನಿಗೂ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುತ್ತದೆ.

ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್

ಸೋಂಕು ಪೀಡಿತ ಇಬ್ಬರೂ ಟೆಕ್ಕಿಗಳಿಗೂ 28 ದಿನ ಮನೆ ಬಿಟ್ಟು ಹೊರಬಾರದಂತೆ ಸೂಚನೆ ನೀಡಲಾಗಿದೆ. ಜೊತೆಗೆ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗ್ರಾದಲ್ಲಿ ಆರು ಮಂದಿಗೆ ಕೊರೊನಾ ಸೋಂಕು

ಆಗ್ರಾದಲ್ಲಿ ಆರು ಮಂದಿಗೆ ಕೊರೊನಾ ಸೋಂಕು

ಆಗ್ರಾದಲ್ಲಿ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ದೆಹಲಿ, ತೆಲಂಗಾಣ, ಜೈಪುರದಲ್ಲಿ ಒಂದೊಂದು ಪ್ರಕರಣ ದಾಖಲಾಗಿದೆ. ದೆಹಲಿಯ ಕೊರೊನಾ ಸೋಂಕಿತ ವ್ಯಕ್ತಿ ಆಗ್ರಾದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡಿದ್ದ, ಅವರಿಂದ ಆ ಆರು ಮಂದಿಗೆ ಕೊರೊನಾ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

ಟೆಕ್ಕಿ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪರಿಶೀಲನೆ

ಟೆಕ್ಕಿ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪರಿಶೀಲನೆ

ಕೊರೊನಾ ವೈರಸ್ ಸೋಂಕು ಪೀಡಿತ ಟೆಕ್ಕಿ ವಾಸವಿದ್ದ ಅಪಾರ್ಟ್‌ಮೆಂಟ್‌ನ 90 ಮನೆಗಳಿಗೂ ಮುಂಜಾಗೃತವಾಗಿ ನೋಟಿಸ್ ನೀಡಲಾಗಿದೆ.

ಟೆಕ್ಕಿ ಇದ್ದ ಅಪಾರ್ಟ್‌ಮೆಂಟ್ ಯಾವುದು

ಟೆಕ್ಕಿ ಇದ್ದ ಅಪಾರ್ಟ್‌ಮೆಂಟ್ ಯಾವುದು

ಸರ್ಜಾಪುರ ರಸ್ತೆಯ ಜೈನ್ ಹೈಟ್ ಅಲ್ಟ್ರಾ ಅಪಾರ್ಟ್‌ಮೆಂಟ್‌ಗೆ ನೋಟಿಸ್ ನೀಡಲಾಗಿದೆ. ಕೊರೊನಾ ಸೋಂಕು ಪೀಡಿತ ಟೆಕ್ಕಿ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದನು. ಟೆಕ್ಕಿ ತನ್ನ ಮೂರು ಜನ ಸ್ನೇಹಿತರ ಜೊತೆ ಪ್ಲ್ಯಾಟ್ ನಂಬರ್ ಸಿ 7 ನಲ್ಲಿ ವಾಸವಿದ್ದನು. ಹೀಗಾಗಿ ಈ ಅಪಾರ್ಟ್‌ಮೆಂಟ್‌ಗೆ ನೋಟಿಸ್ ನೀಡಲಾಗಿದೆ.

ಅಪಾರ್ಟ್‌ಮೆಂಟ್ ಅಧ್ಯಕ್ಷರಿಗೆ ಆರೋಗ್ಯ ಇಲಾಖೆ ಪತ್ರ

ಅಪಾರ್ಟ್‌ಮೆಂಟ್ ಅಧ್ಯಕ್ಷರಿಗೆ ಆರೋಗ್ಯ ಇಲಾಖೆ ಪತ್ರ

ಅಪಾರ್ಟ್‌ಮೆಂಟ್‌ ಅಧ್ಯಕ್ಷರಿಗೆ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಈ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಒಟ್ಟು ಈ ಅಪಾರ್ಟ್‌ಮೆಂಟ್‌ನಲ್ಲಿ 90 ಮನೆಗಳಿವೆ. ಹೀಗಾಗಿ ಎಲ್ಲಾ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ಪರಿಶೀಲನೆ ಮಾಡಲಿದ್ದಾರೆ.

ಸದ್ಯಕ್ಕೆ ಕೊರೊನಾ ಸೋಂಕು ಪೀಡಿತ ಅಪಾರ್ಟ್‌ಮೆಂಟ್‌ ನಿವಾಸಿಗಳ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗಾದರೂ ಜ್ವರ ಶೀತ ಕಾಣಿಸಿಕೊಂಡರೆ ತಕ್ಷಣ ಕೊರೊನಾ ಟೆಸ್ಟ್ ಮಾಡಿಸಲು ಸೂಚನೆ ನೀಡಲಾಗುವುದು.

English summary
Techie who has been infected with Coronavirus The Company Has Issued Leave For All employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X