ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು 1268 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು !

|
Google Oneindia Kannada News

ಬೆಂಗಳೂರು, ಮೇ. 12: ರೂಪಾಂತರಿ ಕೊರೊನಾ ವೈರೆಸ್ ಎರಡನೇ ಅಲೆಗೆ ಬೆಂಗಳೂರು ಪೊಲೀಸರು ಕೂಡ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ 1268 ಪೊಲೀಸ್ ಸಿಬ್ಬಂದಿ ಕೊರೊನಾ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಅದರಲ್ಲಿ ಹನ್ನೆರಡು ಮಂದಿ ಪೊಲೀಸ್ ಸಿಬ್ಬಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಾರ್ಯಾಲಯದಿಂದ ಬಿಡುಗಡೆ ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 1268 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 736 ಮಂದಿ ಮನೆಗಳಲ್ಲಿ ಕ್ವಾರೆಂಟೈನ್ ಒಳಗಾಗಿದ್ದಾರೆ. ಹದಿನಾಲ್ಕು ಮಂದಿ ಸಿಬ್ಬಂದಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ವಾರ್ಡ್‌ನಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 493 ಮಂದಿ ಈಗಾಗಲೇ ಸೋಂಕು ಮುಕ್ತರಾಗಿ ಚೇತರಿಸಿಕೊಂಡಿದ್ದಾರೆ.

ಮೇ. 11 ರಂದು ಬೆಂಗಳೂರಿನಲ್ಲಿ 47 ಮಂದಿಗೆ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದೆ. ಹದಿನೇಳು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದು, ಕೊರೊನಾ ಎರಡನೇ ಅಲೆಗೆ ಹನ್ನೆರಡು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಅಂತೂ ಕೊರೊನಾ ಎರಡನೇ ಅಲೆ ಪೊಲೀಸ್ ವಲಯದಲ್ಲೂ ಭೀತಿ ಹುಟ್ಟಿಸಿದೆ.

Coronavirus infects 1268 police personnel in Bengaluru

Recommended Video

ಕರೋನಾ ಕಂಟ್ರೋಲ್ ಮಾಡ್ದೆ ಇರೋ ಸರ್ಕಾರಕ್ಕೆ ನಾಚಿಕೆ ಆಗಬೇಕು | Jayaraj | Oneindia Kannada

ಹೀಗಾಗಿ ಬೆಂಗಳೂರಿನ ಎಲ್ಲಾ ವಿಭಾಗಗಳಲ್ಲೂ ಪೊಲೀಸರೇ ಸ್ವತಃ ಕಾಳಜಿ ವಹಿಸಿ ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುವ ಮೂಲಕ ಸಿಬ್ಬಂದಿ ರಕ್ಷಣೆಗೆ ಒತ್ತು ನೀಡಿದ್ದಾರೆ. ಜನರನ್ನೇ ಕಾಪಾಡದ ಸರ್ಕಾರ ಇನ್ನು ಪೊಲೀಸರನ್ನು ಕಾಪಾಡಲು ಸಾಧ್ಯವೇ ? ಕೊರೊನಾ ಪರಿಸ್ಥಿತಿ ನೋಡಿದ ಪೊಲೀಸರು ಇದೀಗ ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ತಾವೇ ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿಭಾಗಗಳಲ್ಲೂ ಪೊಲೀಸ್ ಕೋವಿಡ್ ಕೇರ್ ಸೆಂಟರ್ ತೆರೆಯುತ್ತಿದ್ದಾರೆ. ಈಗಾಗಲೇ ನಾಲ್ಕು ವಿಭಾಗದಲ್ಲಿ ಪೊಲೀಸರ ಕೋವಿಡ್ ಕೇರ್ ಸೆಂಟರ್ ತೆರೆದಿದ್ದಾರೆ.

English summary
Coronavirus infects 1268 police personnel and 12 police staff died in Bengaluru know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X