ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

US ನಿಂದ ಬಂದಿದ್ದ ಟೆಕ್ಕಿ ಬೆಂಗಳೂರಲ್ಲಿ ಎಲ್ಲೆಲ್ಲಿ ಓಡಾಡಿದ್ದ? ಕೊರೊನಾ ಗಂಡಾಂತರ ಯಾರ್ಯಾರಿಗೆ ಕಾದಿದೆ?

|
Google Oneindia Kannada News

ಬೆಂಗಳೂರು, ಮಾರ್ಚ್ 17: ಇಡೀ ವಿಶ್ವದಲ್ಲಿ ತಲ್ಲಣ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಕನ್ನಡಿಗರ ನೆಮ್ಮದಿಯನ್ನೂ ಹಾಳು ಮಾಡಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೂ ಒಟ್ಟು 10 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

Recommended Video

MS Dhoni leaves Chennai after IPL 2020 postponed till April 15 | IPL2020 | Dhoni Return to Home

ಆ 10 ಮಂದಿಯ ಪೈಕಿ ಪೇಷೆಂಟ್ ನಂಬರ್ 8 - 32 ವರ್ಷ ವಯಸ್ಸಿನ ಬೆಂಗಳೂರಿನ ಟೆಕ್ಕಿ (ಪುರುಷ). ಯು.ಎಸ್ ನಿಂದ ಲಂಡನ್ ಮಾರ್ಗವಾಗಿ ಮಾರ್ಚ್ 8 ರಂದು ಬೆಂಗಳೂರಿಗೆ ಬಂದ ಈ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ನಿನ್ನೆ (ಮಾರ್ಚ್ 16) ಪತ್ತೆಯಾಗಿದೆ.

ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!

ಹಾಗಾದ್ರೆ, ಮಾರ್ಚ್ 8 ರಿಂದ ಮಾರ್ಚ್ 15 ರವರೆಗೆ ಬೆಂಗಳೂರಿನಲ್ಲೇ ಇದ್ದ ಟೆಕ್ಕಿ ಎಲ್ಲೆಲ್ಲಿ ಓಡಾಡಿದ್ದ ಗೊತ್ತಾ.? ಈ ಟೆಕ್ಕಿಯಿಂದಾಗಿ ಯಾರಿಗೆಲ್ಲಾ ಕೊರೊನಾ ಕಂಟಕ ಕಾದಿದೆಯೋ ಗೊತ್ತಿಲ್ಲ. ಆದ್ರೆ, ಸದ್ಯದ ಮಟ್ಟಿಗೆ ಈ ಟೆಕ್ಕಿಯ ಟ್ರಾವೆಲ್ ಹಿಸ್ಟರಿಯನ್ನ ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ಕೊರೊನಾ ಪೀಡಿತನ ಟ್ರಾವೆಲ್ ಹಿಸ್ಟರಿ

ಕೊರೊನಾ ಪೀಡಿತನ ಟ್ರಾವೆಲ್ ಹಿಸ್ಟರಿ

* ಮಾರ್ಚ್ 6, 2020 ರಂದು ಅಮೇರಿಕನ್ ಏರ್ ವೇಸ್ ನಲ್ಲಿ ಸ್ಯಾನ್ ಆಂಟೋನಿಯೋದಿಂದ ಡಲ್ಲಾಸ್ ಗೆ 32 ವರ್ಷ ವಯಸ್ಸಿನ ಬೆಂಗಳೂರಿನ ಟೆಕ್ಕಿ ಪ್ರಯಾಣ.

* ಮಾರ್ಚ್ 7, 2020 ರಂದು ಅಮೇರಿಕನ್ ಏರ್ ವೇಸ್ ನಲ್ಲಿ ಡಲ್ಲಾಸ್ ನಿಂದ ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಪ್ರಯಾಣ.

* ಮಾರ್ಚ್ 8, 2020 ರಂದು ಬ್ರಿಟಿಷ್ ಏರ್ ವೇಸ್ ನಲ್ಲಿ ಬೆಂಗಳೂರಿಗೆ ಟೆಕ್ಕಿ ಬಂದಿಳಿದ.

* ಬಳಿಕ ಮನೆ ಮತ್ತು ಟೆನ್ನಿಸ್ ಕೋರ್ಟ್ ಗೆ ಬೆಂಗಳೂರಿನ ಟೆಕ್ಕಿ ವಿಸಿಟ್ ಹಾಕಿದ್ದ.

* ಮಾರ್ಚ್ 9, 10 ಮತ್ತು 11 ರಂದು ಟೆನ್ನಿಸ್ ಕೋರ್ಟ್ ನಲ್ಲಿ ಹಲವರ ಜೊತೆಗೆ ಟೆಕ್ಕಿ ಟೆನ್ನಿಸ್ ಆಟವಾಡಿದ್ದಾನೆ.

ಕಲಬುರಗಿಯ ವೃದ್ಧನ ಟ್ರಾವೆಲ್ ಹಿಸ್ಟರಿ ಬೆಚ್ಚಿಬೀಳಿಸುತ್ತೆಕಲಬುರಗಿಯ ವೃದ್ಧನ ಟ್ರಾವೆಲ್ ಹಿಸ್ಟರಿ ಬೆಚ್ಚಿಬೀಳಿಸುತ್ತೆ

ಕೊರೊನಾ ಸೋಂಕಿನ ಲಕ್ಷಣ

ಕೊರೊನಾ ಸೋಂಕಿನ ಲಕ್ಷಣ

ಮಾರ್ಚ್ 10, 2020 ರಂದು ಇಬ್ಬರು ಸ್ನೇಹಿತರನ್ನು ಬೆಂಗಳೂರು ಟೆಕ್ಕಿ ಭೇಟಿ ಮಾಡಿದ್ದಾನೆ. ಬಳಿಕ ಪತ್ನಿ ಜೊತೆಗೆ ಮಡಿವಾಳದ ಸಂಧ್ಯಾ ಥಿಯೇಟರ್ ನಲ್ಲಿ ರಾತ್ರಿ ಸಿನಿಮಾ ವೀಕ್ಷಿಸಿದ್ದಾನೆ. ಬಳಿಕ ಮಾರ್ಚ್ 11 ರಂದು ಆತನಿಗೆ ಶೀತ ಕಾಣಿಸಿಕೊಂಡಿದೆ. ಗೃಹಬಂಧನದಲ್ಲಿರುವಂತೆ ಆತನಿಗೆ ಸೂಚಿಸಲಾಗಿತ್ತು.

ಬಿಗ್ ಬ್ರೇಕಿಂಗ್: ಕರ್ನಾಟಕದಲ್ಲಿ ಒಟ್ಟು 10 ಮಂದಿಗೆ ಕೋವಿಡ್-19 ಪಾಸಿಟಿವ್ಬಿಗ್ ಬ್ರೇಕಿಂಗ್: ಕರ್ನಾಟಕದಲ್ಲಿ ಒಟ್ಟು 10 ಮಂದಿಗೆ ಕೋವಿಡ್-19 ಪಾಸಿಟಿವ್

ಚಿಕಿತ್ಸೆ ಆರಂಭ

ಚಿಕಿತ್ಸೆ ಆರಂಭ

ಮಾರ್ಚ್ 12 ಮತ್ತು 13 ರಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವಂತೆ ಆತನಿಗೆ ವೈದ್ಯಕೀಯ ತಂಡ ಸೂಚನೆ ನೀಡಿತ್ತು. ಆದ್ರೆ, ಅದನ್ನ ಧಿಕ್ಕರಿಸಿದ ಟೆಕ್ಕಿ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಮಾರ್ಚ್ 14 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಪತ್ನಿ ಜೊತೆಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ಟೆಕ್ಕಿ ಭೇಟಿ ನೀಡಿದ್ದಾನೆ. ಮಾರ್ಚ್ 15 ರಂದು ಟೆಕ್ಕಿಯನ್ನ ಪ್ರತ್ಯೇಕವಾಗಿ ಇರಿಸಿ, ಚಿಕಿತ್ಸೆ ನೀಡಲು ಆರಂಭಿಸಲಾಗಿದೆ.

ಯಾರ್ಯಾರಿಗೆ ಕಾದಿದೆ ಗಂಡಾಂತರ?

ಯಾರ್ಯಾರಿಗೆ ಕಾದಿದೆ ಗಂಡಾಂತರ?

ಟೆಕ್ಕಿ ಜೊತೆಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದವರು, ಟೆಕ್ಕಿಯ ಪತ್ನಿ ಮತ್ತು ಮನೆಗೆಲಸದಾಕೆ, ಸ್ನೇಹಿತರು ಮತ್ತು ಟೆನ್ನಿಸ್ ಕೋರ್ಟ್ ನಲ್ಲಿ ಆಡಿದವರ ಮೇಲೆ ಸದ್ಯ ಆರೋಗ್ಯ ಇಲಾಖೆ ಕಣ್ಣಿಟ್ಟಿದೆ. ಟೆಕ್ಕಿಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಕಾರ್ಯ ಚಾಲ್ತಿಯಲ್ಲಿದೆ.

ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ

English summary
Coronavirus Scare: Travel History of Karnataka's Patient No 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X