ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ ವಾರ್ ರೂಮ್; ವಿಶೇಷತೆ ಏನು?

|
Google Oneindia Kannada News

ಬೆಂಗಳೂರು, ಮಾರ್ಚ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿಗಾ ವಹಿಸಲು ವಾರ್ ರೂಮ್‌ ಆರಂಭಿಸಿದೆ. ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ವಾರ್ ರೂಮ್‌ಗೆ ಸೋಮವಾರ ಚಾಲನೆ ನೀಡಿದರು.

ಬಿಬಿಎಂಪಿ ಸ್ಥಾಪಿಸಿರುವ "ವಾರ್ ರೂಂ"ನಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ವಹಿಸಲು, ಹೋಮ್ ಕ್ವಾರಂಟೈನ್ ಸೀಲ್(ಗೃಹ ನಿರ್ಬಂಧ ಮುದ್ರೆ) ಹಾಕಿದವರ ಮೇಲೆ ನಿಗಾ ವಹಿಸಲಾಗುತ್ತಿದೆ.

ಕೊರೊನಾ: ರಾಜ್ಯ ಸರಕಾರ ಎಡವುತ್ತಿರುವುದು ಈ 3 ವಿಚಾರದಲ್ಲಿ, ತುರ್ತಾಗಿ ಗಮನಕೂಡಬೇಕಿದೆಕೊರೊನಾ: ರಾಜ್ಯ ಸರಕಾರ ಎಡವುತ್ತಿರುವುದು ಈ 3 ವಿಚಾರದಲ್ಲಿ, ತುರ್ತಾಗಿ ಗಮನಕೂಡಬೇಕಿದೆ

ಇನ್ನಿತರೆ ಮಾಹಿತಿಗಾಗಿ ವಲಯವಾರು ನಕ್ಷೆ ಸಿದ್ದಪಡಿಸಿ ಟ್ರ್ಯಾಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಮೇಯರ್ ತಿಳಿಸಿದರು. ವಾರ್‌ ರೂಮ್‌ನ ವಿಶೇಷತೆ ಮುಂದೆ ಓದಿ..

ಪ್ರತಿ ನಿತ್ಯ ಕರೆ

ಪ್ರತಿ ನಿತ್ಯ ಕರೆ

ವಾರ್ ರೂಂ ಅನ್ನು 24 ಗಂಟೆಯಲ್ಲಿ ಸ್ಥಾಪಿಸಲಾಗಿದ್ದು, ವಿದೇಶದಿಂದ ಆಗಮಿಸಿದ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಿ, ಅವರು 14 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಕ್ರಮ ವಹಿಸಲು ಹಾಗೂ ಅವರ ಮೇಲೆ ನಿಗಾ ಇರಿಸುವ ಕೆಲಸವನ್ನು ಮಾಡಲಾಗುತ್ತದೆ. ವಾರ್ ರೂಂನಲ್ಲಿ ನಿಯೋಜನೆ ಮಾಡಿರುವ ಸಿಬ್ಬಂದಿಯು ಪ್ರತಿ ನಿತ್ಯ ಅವರಿಗೆ ಕರೆ ಮಾಡಿ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ.

ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ

ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ

ಆಸ್ಪತ್ರೆಗಳಲ್ಲಿ ಎಷ್ಟು ಆಸನಗಳಿವೆ, ಸೋಂಕು ಹೆಚ್ಚಾದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು. ನಗರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು, ಸೋಂಕು ದೃಢಪಟ್ಟ ಪ್ರದೇಶ ನಕ್ಷೆ ಸಿದ್ಧಪಡಿಸುವುದು, ಪಾಲಿಕೆ ಕೈಗೊಂಡ ಕ್ರಮಗಳು ವಲಯ ಮಟ್ಟದಲ್ಲಿ ಜಾರಿಯಾಗಿವೆಯೇ ಎಂಬುದನ್ನು ವಾರ್ ರೂಂನಲ್ಲಿ ದಿನದ 24x7 ಮೂರು ಪಾಳಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ದತ್ತಾಂಶ ಸಂಗ್ರಹಣೆ, ಸೋಂಕು ದೃಢಪಟ್ಟ ಪ್ರದೇಶದಲ್ಲಿ ಎಷ್ಟು ಕುಟುಂಬಗಳಿವೆ, ಎಷ್ಟು ಮಂದಿ ವಾಸವಾಗಿದ್ದಾರೆ ಎಂಬ ಮಾಹಿತಿ ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಇತರೆ ಕಾರ್ಯ ನಡೆಯಲಿದೆ

300 ತಂಡಗಳನ್ನು ನಿಯೋಜನೆ

300 ತಂಡಗಳನ್ನು ನಿಯೋಜನೆ

ಕೊರೋನಾ ವೈರೆಸ್ ಎದುರಿಸಲು ಪಾಲಿಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ವಿದೇಶದಿಂದ ನಗರಕ್ಕೆ ಬಂದಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ, ಅವರ ಮನೆಗೆ ತೆರಳಿ ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಮಂದಿಗೆ, ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದ್ದು, ಅದಕ್ಕಾಗಿ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿಯ 300 ತಂಡಗಳನ್ನು ನಿಯೋಜನೆ ಮಾಡಿ, ಈಗಾಗಲೇ 6 ಸಾವಿರ ಮಂದಿಗೆ ಮುದ್ರೆ ಹಾಕಲಾಗಿದೆ. ಇಂದು 6 ಸಾವಿರ ಮಂದಿಗೆ ಮುದ್ರೆ ಹಾಕಲಿದ್ದು, ಹೆಚ್ಚುವರಿಯಾಗಿ 200 ತಂಡಗಳನ್ನು ನಿಯೋಜನೆ ಮಾಡಿ ಎಲ್ಲಾರಿಗೂ ಮುದ್ರೆ ಹಾಕಿ, ಮುಂಜಾಗ್ರತೆ ವಹಿಸಲು ಸೂಚನೆ ನೀಡಲಾಗುತ್ತಿದೆ.

ಮೂರು ಬಣ್ಣಗಳಲ್ಲಿ

ಮೂರು ಬಣ್ಣಗಳಲ್ಲಿ

ನಕ್ಷೆಯನ್ನು ವಲಯವಾರು ನಿರ್ಮಿಸಿದ್ದು, ಕೊರೋನಾ ವೈರೆಸ್ ಸೋಂಕಿತರು, ಶಂಕಿತರು, ಆಸ್ಪತ್ರೆಗಳನ್ನು ಬಣ್ಣಗಳ ಆಧಾರದ ಮೇಲೆ ಗುರುತಿಸಲಾಗಿದೆ. ಕೊರೋನಾ ಸೋಂಕಿತರನ್ನು ಕೆಂಪು ಬಣ್ಣ, ಕೊರೋನಾ ಶಂಕಿತರಿರುವ ಪ್ರದೇಶವನ್ನು ಹಳದಿ ಬಣ್ಣ, ಆಸ್ಪತ್ರೆಗಳಿರುವ ಸ್ಥಳವನ್ನು ನೀಲಿ ಬಣ್ಣದಲ್ಲಿ ಗುರುತಿಸಲಾಗಿದೆ. ಸೋಂಕು ಪತ್ತೆ ಆದರೆ ಹತ್ತಿರ ಯಾವ ಆಸ್ಪತ್ರೆಗಳಿವೆ, ಎಷ್ಟು ಆಸನಗಳಿವೆ ಎಂಬುದರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

English summary
Coronavirus In Karnataka: BBMP Open War Room In Bengaluru. BBMP Mayor M Goutham Kumar Inugrates the coronavirus war room on monday in bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X