ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೊರೊನಾದಿಂದಾಗಿ ವಿಮಾನಯಾನ ಶೇ.66ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಜೂನ್ 26: ಕೊರೊನಾ ಸೋಂಕಿನಿಂದಾಗಿ ಕಳೆದ ಒಂದು ವರ್ಷದಿಂದ ದೇಶದಲ್ಲಿ ನಾಗರಿಕ ವಿಮಾನಯಾನ ಸೇವೆ ಸಮರ್ಪಕವಾಗಿ ನಡೆಯದ ಪರಿಣಾಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ 2020-2021ನೇ ಸಾಲಿನಲ್ಲಿ ಶೇ.66ರಷ್ಟು ಕಡಿಮೆಯಾಗಿದೆ.

ಪ್ರಯಾಣಿಕರು ಮತ್ತು ಪ್ರಯಾಣಿಕ ವಿಮಾನಗಳ ಸಂಚಾರ ಭಾರಿ ಇಳಿಕೆಯಾಗಿದೆ. ಆದರೆ, ಕೆಐಎ ಮೂಲಸರಕು ಸಾಗಣೆ ಮಾಡಿರುವ ಪ್ರಮಾಣದಲ್ಲಿ ಅಷ್ಟಾಗಿ ಕಡಿಮೆಯಾಗಿಲ್ಲ.

2019-20ರಲ್ಲಿ 3,74,181 ಟನ್ ಸರಕು ಸಾಗಿಸಲಾಗಿತ್ತು. ಆದರೆ, 2020-2021ರಲ್ಲಿ 3,26,643 ಟನ್ ಸರಕು ಸಾಗಣೆ ಮಾಡಲಾಗಿದೆ. ಜತೆಗೆ ಮಾರ್ಚ್ ತಿಂಗಳಲ್ಲಿ 34,401 ಟನ್ ಸರಕು ಸಾಗಿಸಲಾಗಿದ್ದು, ಹಿಂದಿನ 31 ತಿಂಗಳುಗಳಲ್ಲಿ ಅತಿ ಹೆಚ್ಚು ಸರಕು ಸಾಗಿಸಿದಂತಾಗಿದೆ.

Coronavirus Impact: Bengaluru Airport Traffic Down 66 Percent Amid COVID-19 Scare

ಕೆಐಎನಲ್ಲಿ ಕೊರೊನಾ ಸೋಂಕಿನ ಭೀತಿ ನಡುವೆಯೂ ವಿಮಾನಯಾನ ಸೇವೆ ಮುಂದುವರೆಸಲಾಗಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊರೊನಾದಿಂದಾಗಿ ಪ್ರಯಾಣಿಕರ ಕೊರತೆ ಉಂಟಾಗಿರುವ ಕಾರಣ ವಿಮಾನಗಳ ಹಾರಾಟದಲ್ಲೂ ಇಳಿಕೆಯಾಗಿದೆ. ಅದರಂತೆ 2019-2020ರಲ್ಲಿ ಏರ್ ಟ್ರಾಫಿಕ್ ಮೂವ್‌ಮೆಂಟ್ 2,31, 051 ಇತ್ತು. 2020-2021ರಲ್ಲಿ 1,13,993ನ್ನು ತಲುಪಿದೆ.

ಅದರಲ್ಲಿ ಸ್ವದೇಶಿ ಮಾರ್ಗಗಳಲ್ಲಿ 1,02,801 ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 11,192 ವಿಮಾನಗಳು ಸಂಚಾರ ಮಾಡಿವೆ. ಇನ್ನು ಕೆಐಎ 2019-20ರಲ್ಲಿ 32.3 ದಶಲಕ್ಷ ಜನರು ಪ್ರಯಾಣಿಕರ ನಿರ್ವಹಣೆ ಮಾಡಲಾಗಿತ್ತು.

Recommended Video

Rohini Sindhuriಗೆ IPS ಅಧಿಕಾರಿ D Roopa ರಿಂದ ಪ್ರಶ್ನೆಗಳ ಸುರಿಮಳೆ | Oneindia Kannada

ಅದರಂತೆ ದಾಖಲೆ ಪರಿಶೀಲನೆಗೆ ಸ್ಪರ್ಶರಹಿತ ವ್ಯವಸ್ಥೆ, ಕಾಗದ ರಹಿತ ಪ್ರಯಾಣಕ್ಕಾಗಿ ಡಿಜಿ ಯಾತ್ರಾ ಫೇಷಿಯಲ್ ಬಯೋಮೆಟ್ರಿಕ್ ತಂತ್ರಜ್ಞಾನ ಅಳವಡಿಸಲಾಗಿದೆ.

English summary
The passenger traffic at Kempegowda International Airport here (KIAB/BLR Airport) nosedived 66 per cent in the financial year 2020-21, with the Covid-19 pandemic dealing a major blow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X