ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಇಲ್ಲಿವೆ ಶಿಸ್ತುಕ್ರಮಗಳು

|
Google Oneindia Kannada News

ಬೆಂಗಳೂರು, ಜುಲೈ.12: ಕೊರೊನಾವೈರಸ್ ಹರಡುವಿಕೆ ಮತ್ತು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದರು.
ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಕ್ತರ್, ಶಾಲಿನಿ ರಜನೀಶ್, ಎಲ್.ಎ.ಆತೀಕ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಪಾಂಡೆ ಮತ್ತು ಇತರೆ ಹಿರಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು.

ಕರ್ನಾಟಕದಲ್ಲಿ 2627 ಸ್ಕೋರ್ ಮಾಡಿದ ಕೊರೊನಾವೈರಸ್!
ಬೆಂಗಳೂರು ನಗರದಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ಕೇಂದ್ರೀಕೃತ ವ್ಯವಸ್ಥೆ ಕಲ್ಪಿಸಿವುದು. ಲಾಕ್ ಡೌನ್ ಸಂದರ್ಭದಲ್ಲಿ ಸೋಂಕಿತರ ಸಂಪರ್ಕ ಪತ್ತೆಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಬಳಕೆ ಮಾಡಿಕೊಳ್ಳುವುದರ ಬಗ್ಗೆ ಚರ್ಚಿಸಲಾಯಿತು.

Coronavirus: Highlights of Minister Dr.Sudhakar Video Conference With senior Officers

ವೈದ್ಯಕೀಯ ಶಿಕ್ಷಣ ಸಚಿವರ ಸಭೆಯಲ್ಲಿ ಚರ್ಚಿಸಿದ ಪ್ರಮುಖ ಅಂಶಗಳು:
*ಕೊರೊನಾವೈರಸ್ ಸೋಂಕು ಧೃಢಪಟ್ಟವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಗಳಿಗೆ ಮಾಹಿತಿ ನೀಡುವುದು.
* ರೋಗದ ಲಕ್ಷಣವಿರುವ ಸೋಂಕಿತರ ಪತ್ತೆ ಹಾಗೂ ರೋಗದ ಲಕ್ಷಣವಿಲ್ಲದ ಸೋಂಕಿತರ ತಪಾಸಣೆಗೆ ಕೋವಿಡ್ ಕೇರ್ ಸೆಂಟರ್
* ರೋಗದ ಲಕ್ಷಣವಿದ್ದವರನ್ನು ಮಾತ್ರ ಆಸ್ಪತ್ರೆಗೆ ರವಾನಿಸುವುದು
* ಕೊವಿಡ್-19 ಸೋಂಕಿತರರನ್ನು ಆಸ್ಪತ್ರೆಗೆ ರವಾನಿಸಲು ಅಂಬುಲನ್ಸ್ ವ್ಯವಸ್ಥೆ
* ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾಹಾಯವಾಣಿ ಕಲ್ಪಿಸುವುದು
* ರಾಪಿಡ್ ಆಂಟಿಜೆನ್ ಟೆಸ್ಟ್ ಅವಶ್ಯಕತೆ ಇರುವ ಕ್ಲಸ್ಟರ್ ಗಳನ್ನು ಗುರುತಿಸುವುದು
* ರೋಗಿಗಳನ್ನು ದಾಖಲಿಸಿಕೊಳ್ಳಲು ಇರುವ ಗೊಂದಲ ನಿವಾರಿಸಲು ಆಸ್ಪತ್ರೆಗಳಲ್ಲಿ ಆಂಟಿಜೆನ್ ಟೆಸ್ಟ್ ವ್ಯವಸ್ಥೆ ಕಲ್ಪಿಸುವುದು
* RT-PCR ಪರೀಕ್ಷೆಯ ಸ್ಯಾಂಪಲ್ ಗಳನ್ನು ಸರ್ಕಾರಿ ಮತ್ತು ಖಾಸಗಿ ಲ್ಯಾಬ್ ಗಳಿಗೆ ಸಮರ್ಪಕವಾಗಿ ಹಂಚುವ ಮೂಲಕ ವರದಿ ವಿಳಂಬವಾಗದಂತೆ ಕ್ರಮ ಕೈಗೊಳ್ಳುವುದು
* ಆಂಬ್ಯುಲೆನ್ಸ್ ಲಭ್ಯತೆ ಹೆಚ್ಚಿಸುವುದು ಮತ್ತು ರಾಪಿಡ್ ಆಂಟಿಜೆನ್ ಟೆಸ್ಟ್ ಗಾಗಿ ಮೊಬೈಲ್ ಟೆಸ್ಟಿಂಗ್ ವಾಹನ ಸಜ್ಜುಗೊಳಿಸುವುದು

English summary
Coronavirus: Highlights of Minister Dr.Sudhakar Video Conference With senior Officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X