• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Coronavirus: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳು ವಿದೇಶಕ್ಕೆ ಹೋಗುವಂತಿಲ್ಲ

|

ಬೆಂಗಳೂರು, ಮಾರ್ಚ್.12: ಕೊರೊನಾ ವೈರಸ್ ಕಾಟಕ್ಕೆ ಕರ್ನಾಟಕ ಕೂಡಾ ಕಂಗಾಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಸೋಂಕು ಹರಡುವಿಕೆ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಿದೇಶಗಳಿಗೆ ಕಳುಹಿಸುವಂತಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಮಂಗಳವಾರ ರಾಜ್ಯದಲ್ಲಿ ಮೂವರು ಕೊರನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಹೊರತುಪಡಿಸಿದಂತೆ ಅಸೈನ್ ಮೆಂಟ್ ನೆಪದಲ್ಲಿ ಐಟಿ ಉದ್ಯೋಗಿಗಳನ್ನು ಯಾವುದೇ ಕಾರಣಕ್ಕೂ ವಿದೇಶಗಳಿಗೆ ಕಳುಹಿಸುವಂತಿಲ್ಲ ಎಂದು ಸಲಹೆ ನೀಡಲಾಗಿದೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

10,290 ಕೋಟಿ ವಹಿವಾಟು ನಡೆಸುವ ಸಾಫ್ಟ್ ವೇರ್ ರಫ್ತು ಉದ್ಯಮದಲ್ಲಿ ಬೆಂಗಳೂರಿನ ಕಂಪನಿಗಳು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಈ ಹಿನ್ನೆಲೆ ಸಾಫ್ಟ್ ವೇರ್ ವಲಯಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆಗಳಿವೆ.

ಐಟಿ ಕಂಪನಿಗಳಿಗೆ ಮಾಹಿತಿ ಕೋರಿದ ಆರೋಗ್ಯ ಇಲಾಖೆ

ಐಟಿ ಕಂಪನಿಗಳಿಗೆ ಮಾಹಿತಿ ಕೋರಿದ ಆರೋಗ್ಯ ಇಲಾಖೆ

ಕೆಳದ ಫೆಬ್ರವರಿ.21ಕ್ಕಿಂತ ಮೊದಲು ಬೆಂಗಳೂರಿನಲ್ಲಿ ಇರುವ ಐಟಿ ಕಂಪನಿಗಳ ಉದ್ಯೋಗಿಗಳು ಕೊರೊನಾ ವೈರಸ್ ಸೋಂಕಿತ ದೇಶಗಳಿಗೆ ಭೇಟಿ ನೀಡಿದ್ದಲ್ಲಿ ಅಂಥ ಉದ್ಯೋಗಿಗಳ ಪಟ್ಟಿಯನ್ನು ನೀಡುವಂತೆ ಕಂಪನಿಗಳಿಗೆ ಕರ್ನಾಟಕ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

"ಆರೋಗ್ಯ ಇಲಾಖೆಯಿಂದ ನಮಗೆ ನೋಟಿಸ್ ಬಂದಿಲ್ಲ"

ಇನ್ನು, ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಿದೇಶಕ್ಕೆ ಕಳಿಸದಂತೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ ಎಂದು ರಾಜ್ಯ ಐಟಿಬಿಟಿ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ತಿಳಸಿದ್ದಾರೆ. ಒಂದು ವೇಳೆ ಆರೋಗ್ಯ ಇಲಾಖೆ ಈ ಬಗ್ಗೆ ಸೂಚಿಸಿದರೆ ಅದನ್ನು ಪಾಲಿಸಲು ನಾವು ಸಿದ್ಧ ಎಂದು ಅವರು ತಿಳಿಸಿದ್ದಾರೆ.

2019ರಲ್ಲಿ ವಿದೇಶ ಪ್ರವಾಸ ಕೈಗೊಂಡ ಐಟಿ ಉದ್ಯೋಗಿಗಳೆಷ್ಟು?

2019ರಲ್ಲಿ ವಿದೇಶ ಪ್ರವಾಸ ಕೈಗೊಂಡ ಐಟಿ ಉದ್ಯೋಗಿಗಳೆಷ್ಟು?

ಬೆಂಗಳೂರಿನಲ್ಲಿ ಇಂಟೆಲ್, ಡೆಲ್, ಮೈಕ್ರೋಸಾಫ್ಟ್ಸ, ಗೂಗಲ್, ಸಾಪ್ ಲ್ಯಾಬ್ ನಂತಾ ಬಹುರಾಷ್ಟ್ರೀಯ ಕಂಪನಿಗಳಿವೆ. ಈ ಕಂಪನಿಗಳ ಕಾರ್ಯ ನಿರ್ವಹಣಾಧಿಕಾರಿಗಳು, ಇಂಜಿಯರ್ಸ್ ಪ್ರತಿ ವರ್ಷ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಸಭೆ ಹಾಗೂ ಅಲ್ಪಾವಧಿ ಯೋಜನೆಗಳಿಗಾಗಿ ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಾರೆ. ಕಳೆದ 2019ರಲ್ಲಿ 40 ಲಕ್ಷ 87 ಸಾವಿರ ಐಟಿ ಉದ್ಯೋಗಿಗಳು ವಿದೇಶ ಪ್ರವಾಸ ಕೈಗೊಂಡಿದ್ದರು ಎಂದು ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

ಬೆಂಗಳೂರಿನ ಎರಡು ಐಟಿ ಕಂಪನಿ ಉದ್ಯೋಗಿಗಳಿಗೆ ಸೋಂಕು

ಬೆಂಗಳೂರಿನ ಎರಡು ಐಟಿ ಕಂಪನಿ ಉದ್ಯೋಗಿಗಳಿಗೆ ಸೋಂಕು

ಬೆಂಗಳೂರಿನಲ್ಲಿ ಇದುವರೆಗೂ ನಾಲ್ವರಿಗೆ ಮಾತ್ರ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ಸ್ಪಷ್ಟವಾಗಿದೆ. ಇದರ ಮಧ್ಯ ಡೆಲ್ ಕಂಪನಿ ಕೂಡಾ ತಮ್ಮ ಕಂಪನಿಯ ಒಬ್ಬ ಉದ್ಯೋಗಿಯಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದಿದ್ದು, ಸೋಂಕಿತ ವ್ಯಕ್ತಿ ಹಾಗೂ ಕುಟುಂಬದವರನ್ನು ಗೃಹ ದಿಗ್ಬಂಧನದಲ್ಲಿ ಇರಿಸಿರುವ ಬಗ್ಗೆ ಆಂತರಿಕ ನೋಟಿಸ್ ಜಾರಿಗೊಳಿಸಿದೆ. ಈ ಹಿಂದೆ ಕಳೆದ ಮಾರ್ಚ್.01ರಂದು ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ ಟೆಕ್ಕಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಟೆಕ್ಕಿಯ ಪತ್ನಿ, ಮಗಳು ಹಾಗೂ ಕಾರ್ ಚಾಲಕನಿಗೂ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿತ್ತು. ಇದೀಗ ಮಾರ್ಚ್.10ರಂದು ಬೆಂಗಳೂರಿಗೆ ವಾಪಸ್ ಆದ ಡೆಲ್ ಕಂಪನಿಯ ಉದ್ಯೋಗಿಯಲ್ಲೂ ಸೋಂಕು ಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಆದರೆ, ಇದುವರೆಗೂ ಅಧಿಕೃತವಾಗಿ ಸೋಂಕು ಇರುವ ಬಗ್ಗೆ ಯಾವುದೇ ಮಾಹಿತಿಯು ಹೊರ ಬಿದ್ದಿಲ್ಲ ಎಂದು ತಿಳಿದು ಬಂದಿದೆ.

English summary
Coronavirus: Health Department Advised ITBT Companies To Avoid Sending Employees To Affected Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X