ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ಬೆಂಗಳೂರಿನ ಗೂಗಲ್ ಟೆಕ್ಕಿಯ ಮಾವ, ಪತ್ನಿ ವಿರುದ್ಧ ಪ್ರಕರಣ

|
Google Oneindia Kannada News

ಲಕ್ನೋ, ಮಾರ್ಚ್ 16: ಕೊರೊನಾಗೆ ತುತ್ತಾಗಿರುವ ಬೆಂಗಳೂರಿನ ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಯ ಮಾವ ಹಾಗೂ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.

Recommended Video

54% Of indian companies don’t have the means to work from home | Work From Home

ಟೆಕ್ಕಿಗೆ ಸೋಂಕು ದೃಢಪಟ್ಟ ಕೆಲವು ದಿನಗಳಲ್ಲೇ ಪತ್ನಿಗೂ ಸೋಂಕು ದೃಢಪಟ್ಟಿತ್ತು.ಹೀಗಾಗಿ ರೈಲ್ವೆ ಆಸ್ಪತ್ರೆಯ ಪ್ರತ್ಯೇಕಿಸಿದ ಚಿಕಿತ್ಸಾ ಘಟಕದಲ್ಲಿ ಆಕೆಯನ್ನು ದಾಖಲಿಸಲಾಗಿತ್ತು.

ಆದರೆ ಮಹಿಳೆ ಯಾರಿಗೂ ಮಾಹಿತಿ ನೀಡದೆ ಅಲ್ಲಿಂದ ಪರಾರಿಯಾಗಿದ್ದಳು. ಬಳಿಕ ಆಗ್ರಾದಲ್ಲಿ ತನ್ನ ತಂದೆಯ ಮನೆಯಲ್ಲಿದ್ದಾಳೆ ಎನ್ನುವ ಮಾಹಿತಿ ಲಬ್ಯವಾಗಿತ್ತು. ಆದರೆ ಮಗಳು ಎಲ್ಲಿದ್ದಾಳೆ ಎಂದು ಹೇಳಲು ನಿರಾಕರಿಸಿದ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯ ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯ

ಟೆಕ್ಕಿ ಇತ್ತೀಚೆಗೆ ಗ್ರೀಸ್ ದೇಶಕ್ಕೆ ಭೇಟಿ ನೀಡಿದ್ದರು, ಬಳಿಕ ದೇಶಕ್ಕೆ ಮರಳಿದ್ದರು. ರೈಲ್ವೆ ಉದ್ಯೋಗಿಯೂ ಆಗಿರುವ ಈ ಮಹಿಳೆ ತಂದೆ , ಮಗಳ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವ ಆರೋಪವೂ ಇದೆ.

ತಮಗೆ ಕೊರೊನಾ ಸೋಂಕಿದೆ ಎಂದು ತಿಳಿದಿದ್ದರೂ ಬೇರೆಯವರ ಜೀವದ ಬಗ್ಗೆ ಯೋಚನೆ ಮಾಡದೆ ಓಡಿಹೋಗಿರುವ ಟೆಕ್ಕಿ ಪತ್ನಿಯ ವಿರುದ್ಧವೂ ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಟೆಕ್ಕಿ ಪತ್ನಿಗೂ ಕೊರೊನಾ ವೈರಸ್

ಟೆಕ್ಕಿ ಪತ್ನಿಗೂ ಕೊರೊನಾ ವೈರಸ್

ಪತ್ನಿಗೆ ಕೊರೊನಾ ವೈರಸ್ ಬಂದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಗೂಗಲ್ ಟೆಕ್ಕಿಯ ಪತ್ನಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ದಂಪತಿ ಹನಿಮೂನ್‍ಗಾಗಿ ಗ್ರೀಸ್ ದೇಶಕ್ಕೆ ಭೇಟಿ ನೀಡಿ ಮಾರ್ಚ್ ಮೊದಲ ವಾರದಲ್ಲಿ ಅಲ್ಲಿಂದ ವಾಪಸ್ ಬಂದಿದ್ದರು.

ಹನಿಮೂನ್ ಮುಗಿಸಿ ಪತಿ ಕೆಲಸಕ್ಕೆ ಸೇರಿಕೊಂಡಿದ್ದರು

ಹನಿಮೂನ್ ಮುಗಿಸಿ ಪತಿ ಕೆಲಸಕ್ಕೆ ಸೇರಿಕೊಂಡಿದ್ದರು

ಹನಿಮೂನ್ ಮುಗಿಸಿ ಬಂದ ಟೆಕ್ಕಿ ಬೆಂಗಳೂರಿನಲ್ಲಿ ತನ್ನ ಉದ್ಯೋಗಕ್ಕೆ ಸೇರಿಕೊಂಡಿದ್ದರೆ, ಇತ್ತ ಪತ್ನಿ ತನ್ನ ಹುಟ್ಟೂರು ಆಗ್ರಾಕ್ಕೆ ಹೋಗಿದ್ದಳು. ಟೆಕ್ಕಿಯ ರಕ್ತದ ಮಾದರಿಯಲ್ಲಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ರಕ್ತದ ಮಾದರಿ ಪಡೆಯಲಾಗಿತ್ತು

ರಕ್ತದ ಮಾದರಿ ಪಡೆಯಲಾಗಿತ್ತು

ಕೇವಲ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಈಕೆಯನ್ನು ಸಂಪರ್ಕಿಸಿ ರಕ್ತದ ಮಾದರಿಯನ್ನು ಪಡೆದು ಪ್ರತ್ಯೇಕ ನಿಗಾದಲ್ಲಿ ಇಡಲಾಗಿತ್ತು. ಆದರೆ ವೈದ್ಯಕೀಯ ವರದಿ ಬರುವುದರ ಒಳಗಡೆ ಆಕೆ ಯಾರಿಗೂ ತಿಳಿಸದೇ ಆಸ್ಪತ್ರೆಯಿಂದ ತೆರಳಿದ್ದಳು.

ಲ್ಯಾಬ್ ವರದಿ ಏನು ಹೇಳಿತ್ತು

ಲ್ಯಾಬ್ ವರದಿ ಏನು ಹೇಳಿತ್ತು

ಲ್ಯಾಬ್ ವರದಿಯಲ್ಲಿ ಆಕೆಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಆಕೆಯ ಪೋಷಕರನ್ನು ಸಂಪರ್ಕಿಸಿದಾಗ ದೆಹಲಿಯನ್ನು ಮಗಳು ತೊರೆದಿದ್ದಾಳೆ ಎಂದು ತಿಳಿಸಿದ್ದರು. ಬಳಿಕ ಆಗ್ರಾಕ್ಕೆ ಪೊಲೀಸರ ಜೊತೆ ವೈದ್ಯರ ತಂಡ ತೆರಳಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
A case has been registered against Techie's father-in-law and his wife, who works at a Google firm in Bengaluru which has been hit by Corona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X