ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನ್ ವೆಜ್ ಪ್ರಿಯರ ಜೇಬಿಗೆ ಬರೆ: ಮಟನ್, ಫಿಶ್ ಬೆಲೆ ಗಗನಕ್ಕೆ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ವ್ಯಾಪಾರ-ವಹಿವಾಟಿನ ಮೇಲೆ ಭಾರಿ ಪ್ರಭಾವ ಬೀರಿದೆ. ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ತರಕಾರಿ ಬೆಲೆಗಳು ಪಾತಾಳಕ್ಕೆ ಕುಸಿದಿದೆ.

ಇದೀಗ ಮಾಂಸಾಹಾರ ಪ್ರಿಯರಿಗೆ ಕೊರೊನಾ ವೈರಸ್ ದೊಡ್ಡ ಶಾಕ್ ನೀಡಿದೆ. ಮಟನ್ ಮತ್ತು ಫಿಶ್ ಬೆಲೆ ಗಗನಕ್ಕೇರಿದೆ. ಕೊರೊನಾ ವೈರಸ್ ನಿಂದಾಗಿ ಚಿಕನ್ ಬೆಲೆ ಕಮ್ಮಿ ಆಗಿದ್ದರೆ, ಮಟನ್ ಮತ್ತು ಫಿಶ್ ಬೆಲೆ ಮಾತ್ರ ಜಾಸ್ತಿ ಆಗಿದೆ.

ಕೊರೊನಾ ಎಫೆಕ್ಟ್; ಮೈಸೂರಲ್ಲಿ ಶೇ.70 ಇಳಿದಿದೆ ತರಕಾರಿ ಬೆಲೆಕೊರೊನಾ ಎಫೆಕ್ಟ್; ಮೈಸೂರಲ್ಲಿ ಶೇ.70 ಇಳಿದಿದೆ ತರಕಾರಿ ಬೆಲೆ

ವಾರದ ಹಿಂದೆ ಮಟನ್ ಹಾಗೂ ಫಿಶ್ ಗೆ ಇದ್ದ ಬೆಲೆಗೂ ಮತ್ತು ಇವತ್ತಿನ ಬೆಲೆಗೂ ವ್ಯತ್ಯಾಸ ಇದೆ. ತಿಂಗಳಿಗೆ ಬಜೆಟ್ ಹಾಕಿ ಜೀವನ ಮಾಡುವವರ ಬಾಯಿಗೆ ಇನ್ಮುಂದೆ ಮಟನ್ ಮತ್ತು ಫಿಶ್ ತುಸು ಜಾಸ್ತಿ ಸುಡುವುದು ಪಕ್ಕಾ.

ಮಟನ್ ಮತ್ತು ಫಿಶ್ ಬೆಲೆ ಎಷ್ಟು.?

ಮಟನ್ ಮತ್ತು ಫಿಶ್ ಬೆಲೆ ಎಷ್ಟು.?

ಕಳೆದ ವಾರ ಕೆ.ಜಿ ಮಟನ್ ಗೆ 500 ರಿಂದ 550 ರೂಪಾಯಿವರೆಗೂ ಇತ್ತು. ಆದ್ರೆ, ಈಗ ಕೆ.ಜಿ ಮಟನ್ ಬೆಲೆ ಏಕ್ದಂ 700 ರೂಪಾಯಿಗೆ ಏರಿಕೆಯಾಗಿದೆ. ಇನ್ನೂ ಕಳೆದ ವಾರ ಫಿಶ್ ಬೆಲೆ ಕೆ.ಜಿ ಗೆ 120 ರೂಪಾಯಿ ಇತ್ತು. ಇದೀಗ ಫಿಶ್ ಬೆಲೆ ಕೆ.ಜಿಗೆ 200 ರೂಪಾಯಿ ದಾಟಿದೆ.

ಚಿಕನ್ ಬೆಲೆ ಕಮ್ಮಿ ಆಗೋಯ್ತು!

ಚಿಕನ್ ಬೆಲೆ ಕಮ್ಮಿ ಆಗೋಯ್ತು!

ಚಿಕನ್ ತಿಂದ್ರೆ ಕೊರೊನಾ ವೈರಸ್ ಹಬ್ಬುತ್ತೆ ಅಂತ ಅದ್ಯಾರು ಸುಳ್ಳು ಸುದ್ದಿ ಹಬ್ಬಿಸಿದ್ರೋ, ಗೊತ್ತಿಲ್ಲ. ಈ ಸುಳ್ಳು ಸುದ್ದಿಯಿಂದಾಗಿ ಚಿಕನ್ ತಿನ್ನುವವರ ಸಂಖ್ಯೆ ಕಡಿಮೆ ಆಗಿದೆ. ಪರಿಣಾಮ, ಡಿಮ್ಯಾಂಡ್ ಕಮ್ಮಿ ಆಗಿರುವ ಹಿನ್ನಲೆಯಲ್ಲಿ ಚಿಕನ್ ಬೆಲೆ ಕೂಡ ಕುಸಿದಿದೆ. ಈಗ 80 ರೂಪಾಯಿಗೆ ಕೆ.ಜಿ ಕೋಳಿ ಮಾಂಸ ಲಭ್ಯವಿದೆ.

ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

ನಾನ್ ವೆಜ್ ಪ್ರಿಯರ ನಾಲಿಗೆ ಸುಡಲಿದೆ

ನಾನ್ ವೆಜ್ ಪ್ರಿಯರ ನಾಲಿಗೆ ಸುಡಲಿದೆ

ಚಿಕನ್ ಬದಲು ಮಟನ್ ಮತ್ತು ಫಿಶ್ ತಿನ್ನುತ್ತಿದ್ದವರ ಜೇಬಿಗೆ ಇದೀಗ ಬೆಲೆ ಏರಿಕೆಯಿಂದಾಗಿ ಕತ್ತರಿ ಬೀಳುತ್ತಿದೆ. ಇಷ್ಟ ಪಟ್ಟು ಮಟನ್ ಮತ್ತು ಫಿಶ್ ತಿನ್ನುತ್ತಿದ್ದವರ ನಾಲಿಗೆಗೆ ಇನ್ಮೇಲೆ ಬೆಲೆ ಏರಿಕೆಯ ಬಿಸಿ ಸುಡಲಿದೆ.

ಬೆಂಗಳೂರಿಗೂ ಬಂದಿರುವ ಕೊರೊನಾ

ಬೆಂಗಳೂರಿಗೂ ಬಂದಿರುವ ಕೊರೊನಾ

ಡೆಡ್ಲಿ ಕೊರೊನಾ ವೈರಸ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಅಮೇರಿಕಾದಿಂದ ಬೆಂಗಳೂರಿಗೆ ಬಂದ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಾಗಿ, ಇಷ್ಟು ದಿನ ನೆಮ್ಮದಿಯಾಗಿ ಉಸಿರಾಡುತ್ತಿದ್ದ ಬೆಂಗಳೂರಿಗರಿಗೆ ಇದೀಗ ಕೊರೊನಾ ತೀವ್ರ ಆತಂಕ ಸೃಷ್ಟಿಸಿದೆ.

ಬೆಂಗಳೂರಲ್ಲಿ ಕೊರೊನಾ ಸೋಂಕು ಶಂಕೆ: ಭಯದಿಂದ ರಜೆ ಘೋಷಿಸಿದ ಶಾಲೆ!ಬೆಂಗಳೂರಲ್ಲಿ ಕೊರೊನಾ ಸೋಂಕು ಶಂಕೆ: ಭಯದಿಂದ ರಜೆ ಘೋಷಿಸಿದ ಶಾಲೆ!

English summary
Coronavirus effect: Mutton and Fish price hike in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X