ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ: ಬೆಂಗಳೂರು-ಚೀನಾ ನಡುವೆ ವಿಮಾನ ಸಂಚಾರ ರದ್ದು

|
Google Oneindia Kannada News

ಬೆಂಗಳೂರು, ಫೆಬ್ರವರಿ 04: ಕೊರೋನಾ ವೈರಸ್ ಭೀತಿಯಿಂದಾಗಿ ಚೀನಾ ಮತ್ತು ಬೆಂಗಳೂರು ನಡುವೆ ಸಂಚರಿಸುವ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಚೀನಾ-ಬೆಂಗಳೂರು ನಡುವಿನ ವಿಮಾನ ಸೇವೆ ಮಾತ್ರವೇ ಸ್ಥಗಿತಗೊಂಡಿದ್ದು, ಉಳಿದಂತೆ ಹಾಂಕಾಂಗ್, ಥೈಲ್ಯಾಂಡ್, ಸಿಂಗಪೂರ್ ನಡುವಿನ ಸಂಚಾರ ಮುಂದುವರೆದಿದೆ.

 ಚೀನಾದಲ್ಲಿ ಕೊರೊನಾ ವೈರಸ್: ಬಳ್ಳಾರಿ ಕೆಂಪು ಮೆಣಸಿನಕಾಯಿ ಮೇಲೆ ಭಾರೀ ಎಫೆಕ್ಟ್ ಚೀನಾದಲ್ಲಿ ಕೊರೊನಾ ವೈರಸ್: ಬಳ್ಳಾರಿ ಕೆಂಪು ಮೆಣಸಿನಕಾಯಿ ಮೇಲೆ ಭಾರೀ ಎಫೆಕ್ಟ್

ಕಳೆದ ವಾರದವರೆಗೂ ಚೀನಾದಿಂದ ವಿಮಾನಗಳು ಭಾರತಕ್ಕೆ ಆಗಮಿಸುತ್ತಿದ್ದವು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ನೇರವಾಗಿ ವಿಮಾನಗಳು ಸಂಚರಿಸುತ್ತಿದ್ದವು. ಆದರೆ ಕೊರೊನಾ ಭೀತಿ ಹೆಚ್ಚಾದ ಕಾರಣ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Coronavirus Effect: Bengaluru-China Flight Service Canceled

ಚೀನಾದಿಂದ ಭಾರತಕ್ಕೆ ಬರುವ ಪ್ರತಿಯೊಬ್ಬರ ಮೇಲೂ ತೀವ್ರ ನಿಗಾ ಇರಿಸಲಾಗಿದೆ. ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಹ ನಿಗಾ ವಹಿಸಲಾಗುತ್ತಿದ್ದು, ಚೀನಾ ಹಾದು ಬಂದವರು, ಚೀನಾದಿಂದ ಬೇರೆ ದೇಶಗಳ ಮೂಲಕ ಭಾರತ ಪ್ರವೇಶಿಸುವರು ಮಾತ್ರವೇ ಅಲ್ಲದೆ. ಕೊರೊನಾ ಪತ್ತೆಯಾಗಿರುವ ಯಾವುದೇ ದೇಶದಿಂದ ಬರುವವರ ಮೇಲೆ ಕಟ್ಟುನಿಟ್ಟಿನ ಕಣ್ಣಿಡಲಾಗಿದ್ದು, ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

English summary
Bengaluru-China flight service canceled due to coronavirus. All passengers have been checked by employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X