ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭಯ ಇದ್ರೂ ಕಾಲೇಜ್‌ಗೆ ಬರ್ಬೇಕು: ವಿರೋಧಿಸಿದ್ರೆ ದಂಡ ಕಟ್ಬೇಕು

|
Google Oneindia Kannada News

ಬೆಂಗಳೂರು, ಮಾರ್ಚ್ 16: ಕೊರೊನಾ ವೈರಸ್ ನಿಂದ ಸುರಕ್ಷಿತವಾಗಿ ಇರಲು ಶಿಕ್ಷಣ ಇಲಾಖೆ ಕ್ರಮವನ್ನು ಕೈಗೊಂಡಿದೆ. ರಾಜ್ಯದ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ತಿಳಿಸಿದೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ವಾರಗಳ ಕಾಲ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.

ಆದರೆ, ಈ ರೀತಿ ಸರ್ಕಾರ ಆದೇಶ ನೀಡಿದರು, ಇಲ್ಲೊಂದು ಕಾಲೇಜ್ ವಿಧ್ಯಾರ್ಥಿಗಳಿಗೆ ರಜೆ ನೀಡಿಲ್ಲ. ಅಲ್ಲದೆ ಕಾಲೇಜಿಗೆ ಬರದೆ ಇದ್ದ ವಿಧ್ಯಾರ್ಥಿಗಳಿಗೆ ದಂಡ ಹಾಕುವಂತೆ ಕಾಲೇಜಿನ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಈ ಘಟನೆ ನಡೆದಿರುವುದು, ಚಿಕ್ಕಬಣಾವರ ಪಾಟಿಟೆಕ್ನಿಕ್ ಕಾಲೇಜಿನಲ್ಲಿ.

ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ

ಬೆಂಗಳೂರಿನ ಚಿಕ್ಕಬಣಾವರದ ಪಾಟಿಟೆಕ್ನಿಕ್ ಕಾಲೇಜಿನಲ್ಲಿ ಕೊರೊನಾ ವೈರಸ್ ಭೀತಿ ಇದ್ದರೂ, ರಜೆ ನೀಡಿಲ್ಲ. ಕೊರೊನಾ ಭಯದಿಂದ ಕಾಲೇಜ್ ಗೆ ಬಾರದೆ ಇದ್ದ ವಿಧ್ಯಾರ್ಥಿಗಳಿಗೆ ನೂರು ರೂಪಾಯಿ ದಂಡ ಹಾಕಿದೆ. ಕಾಲೇಜಿನ ಈ ನಿಯಮವನ್ನು ವಿಧ್ಯಾರ್ಥಿಗಳು ಪ್ರತಿಭಟನೆ ಮಾಡುವ ಮೂಲಕ ವಿರೋಧಿಸಿದ್ದಾರೆ.

 Coronavirus: Chikkabanavara Polytechnic College Student Protest

ವಿಧ್ಯಾರ್ಥಿಗಳ ವಿರೋಧ ಜಾಸ್ತಿಯಾದ ಹಿನ್ನಲೆ ಇಂದಿನಿಂದ ಕಾಲೇಜಿಗೆ ರಜೆ ನೀಡಲು ಸಮ್ಮತಿ ಸೂಚಿಸಿದೆ. ಸರ್ಕಾರ ಮುಂದಿನ ಆದೇಶ ಬರುವರೆಗೆ ರಜೆ ನೀಡಲು ಒಪ್ಪಿಕೊಂಡಿದೆ.

English summary
Coronavirus: Chikkabanavara polytechnic college student protest for not gaving holliday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X