ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ, ಕಲಬುರಗಿ, ಬಾದಾಮಿಯಲ್ಲಿ ಇಂದು ತಲಾ 3 ಕೊರೊನಾ ಕೇಸ್

|
Google Oneindia Kannada News

ಬೆಂಗಳೂರು, ಮೇ 7: ಕರ್ನಾಟಕದಲ್ಲಿ ಇಂದು 12 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ.

Recommended Video

ಗ್ಯಾಸ್ ಸೋರಿಕೆಯನ್ನು ನಿಲ್ಲಿಸಲಾಗಿದೆ ಎಂದ ಅಧಿಕಾರಿ | Vizag | Oneindia Kannada

ದಾವಣಗೆರೆ, ಕಲಬುರಗಿ, ಬಾದಾಮಿಯಲ್ಲಿ ಇಂದು ತಲಾ ಮೂರು ಕೊರೊನಾ ಪ್ರಕರಣಗಳು ದಾಖಲಾಗಿವೆ. ಬೆಳಗಾವಿ, ಬೆಂಗಳೂರು ನಗರ ಹಾಗೂ ಧಾರವಾಡದಲ್ಲಿ ಒಂದೊಂದು ಕೇಸ್‌ಗಳು ಪತ್ತೆಯಾಗಿವೆ.

 ಕೊರೊನಾ ಎಫೆಕ್ಟ್; ಕಂಪನಿಗಳ workstations ವಿನ್ಯಾಸಕ್ಕೂ ಸುರಕ್ಷಾ ನಿಯಮಗಳಿಗೆ ಒತ್ತಾಯ ಕೊರೊನಾ ಎಫೆಕ್ಟ್; ಕಂಪನಿಗಳ workstations ವಿನ್ಯಾಸಕ್ಕೂ ಸುರಕ್ಷಾ ನಿಯಮಗಳಿಗೆ ಒತ್ತಾಯ

ಈ ಪೈಕಿ ಬಾದಾಮಿಯಲ್ಲಿ 80 ವರ್ಷದ ವೃದ್ಧೆಗೆ ಕೊರೊನಾ ಸೋಂಕು ಹರಡಿದೆ. ಈ ವೃದ್ಧೆ ರೋಗಿ ಸಂಖ್ಯೆ 607ರ ಜೊತೆಗೆ ಸಂಪರ್ಕ ಹೊಂದಿದ್ದರು. ಇಂದಿಗೆ ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಬಂದಿದೆ.

Coronavirus Cases Increased To 705 In Karnataka

ಒಂದು ಕಡೆ ಇಂದು 12 ಮಂದಿ ಸೋಂಕು ತಗುಲಿದೆ. ಮತ್ತೊಂದು ಕಡೆ 12 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೀದರ್ 3. ವಿಜಯಪುರ 2, ಬಳ್ಳಾರಿ 1, ಮೈಸೂರು 1, ಬಾಗಲಕೋಟೆ 1, ಕಲಬುರಗಿ 2, ಬೆಂಗಳೂರು ನಗರ 2 ಸೋಂಕಿತರು ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಈವರೆಗೆ 366 ಜನ ಆಸ್ಪತ್ರೆಯಿಂದ ಬಿಡುಗಡೆ ಪಡೆದಿದ್ದಾರೆ. 30 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಸೋಂಕಿತರು ಇದ್ದು, 156 ಮಂದಿಗೆ ಸೋಂಕು ತಗುಲಿದೆ.

English summary
Coronavirus cases increased to 705 in karnataka. 12 new people tested positive today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X