ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ ಉಗ್ರ ತಾಂಡವ: ಭಯ ಹುಟ್ಟಿಸುವ ಅಂಕಿಅಂಶ!

|
Google Oneindia Kannada News

ಬೆಂಗಳೂರು, ಜುಲೈ 2: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ನಾಗಾಲೋಟ ಸತತ ಐದನೇ ದಿನವೂ ಮುಂದುವರಿದಿದೆ. ಜುಲೈ ಒಂದಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 5,290 ಮತ್ತು ಸಾವನ್ನಪ್ಪಿದವರು 97.

Recommended Video

TikTok ban,China lost 6B$?ಟಿಕ್‌ ಟಾಕ್ ಬ್ಯಾನ್‌ನಿಂದಾಗಿ ಕಂಪನಿಗೆ 45000 ಕೋಟಿ ನಷ್ಟ ಸಾಧ್ಯತೆ|Oneindia Kannada

ಕಳೆದೆರಡು ವಾರಗಳ ಹಿಂದೆ, ಕೊರೊನಾ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಂತಿದ್ದ ಬೆಂಗಳೂರು ನಗರ, ಈಗ, ಮುಂಬೈ, ದೆಹಲಿ, ಚೆನ್ನೈ ನಗರಕ್ಕೆ ಪೈಪೋಟಿ ನೀಡುವತ್ತ ಸಾಗುತ್ತಿರುವುದು ಭಯ ಪಡುವಂತಹ ವಿಚಾರ.

ಕೋವಿಡ್ ಸೋಂಕಿತರನ್ನು ಬಿಬಿಎಂಪಿಯೇ ಕರೆದುಕೊಂಡು ಹೋಗಲಿದೆಕೋವಿಡ್ ಸೋಂಕಿತರನ್ನು ಬಿಬಿಎಂಪಿಯೇ ಕರೆದುಕೊಂಡು ಹೋಗಲಿದೆ

ಕೆಲವು ರೋಗಿಗಳು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡಿದ ಪ್ರಕರಣ ವ್ಯಾಪಕ ಟೀಕೆಗೆ ಗುರಿಯಾದ ನಂತರ, ಸೋಂಕಿತರನ್ನು ಮನೆಗೆ ಬಂದು, ಬಿಬಿಎಂಪಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ. ಈ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'

ಕಳೆದ ಐದು ದಿನಗಳಿಂದ ಕೊರೊನಾ ಸೋಂಕು ಸ್ಫೋಟಗೊಂಡಿರುವುದು ಒಂದು ಕಡೆ, ಈ ರೀತಿ ಸೋಂಕು ಹೆಚ್ಚಾಗಲು ಮೂಲ ಕಾರಣವೇನು ಎನ್ನುವುದು, ಇನ್ನೂ ಕಂಡು ಬಂದಿಲ್ಲ. ಈ ನಡುವೆ, ಹತ್ತು ದಿನದ (ಬೆಂಗಳೂರು ನಗರ) ಅಂಕಿಅಂಶ ನಿಜಕ್ಕೂ ಕಳವಳ ಪಡುವಂತದ್ದಾಗಿದೆ.

 ಸೋಂಕಿತರ ಸಂಖ್ಯೆಯಲ್ಲಿ 1,398 ಇದ್ದದ್ದು 5,290ಕ್ಕೆ ಏರಿದೆ

ಸೋಂಕಿತರ ಸಂಖ್ಯೆಯಲ್ಲಿ 1,398 ಇದ್ದದ್ದು 5,290ಕ್ಕೆ ಏರಿದೆ

ಹತ್ತು ದಿನಗಳ ಹಿಂದೆ 100-170ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ, ಕಳೆದ ಐದು ದಿನಗಳಿಂದ 600-750 ಹಂತಕ್ಕೆ ಬಂದು ನಿಂತಿದೆ. ಅಲ್ಲದೇ, ಜೂನ್ 22ರಿಂದ ಜುಲೈ 1ರ ಅವಧಿಯಲ್ಲಿ ಒಟ್ಟು ಮೂವತ್ತು ಜನ ಮೃತ ಪಟ್ಟಿದ್ದಾರೆ. ಜೂನ್ 22-ಜುಲೈ 1ರ ಅವಧಿಯಲ್ಲಿ, ಸೋಂಕಿತರ ಸಂಖ್ಯೆಯಲ್ಲಿ 1,398 ಇದ್ದದ್ದು 5,290ಕ್ಕೆ ಏರಿದೆ.

 ಸಕ್ರಿಯ ಪ್ರಕರಣಗಳು 919 ರಿಂದ 4,649ಕ್ಕೆ ಏರಿದೆ

ಸಕ್ರಿಯ ಪ್ರಕರಣಗಳು 919 ರಿಂದ 4,649ಕ್ಕೆ ಏರಿದೆ

ಇನ್ನು ಒಟ್ಟು ಸಕ್ರಿಯ ಪ್ರಕರಣಗಳು ಜೂನ್ 22-ಜುಲೈ 1ರ ಅವಧಿಯಲ್ಲಿ 919 ರಿಂದ 4,649ಕ್ಕೆ ಏರಿದೆ. ಬಿಡುಗಡೆಯಾದವರ ಸಂಖ್ಯೆ 411 ರಿಂದ 543 ಆಗಿದೆ. ಅಂದರೆ, ಕಳೆದ ಹತ್ತು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಕೇವಲ 132 ಜನ.

 ಜೂನ್ 22 ರಿಂದ 26ರವರೆಗೆ ಬಿಡುಗಡೆಯಾದವರು

ಜೂನ್ 22 ರಿಂದ 26ರವರೆಗೆ ಬಿಡುಗಡೆಯಾದವರು

ಜೂನ್ 22 ರಿಂದ 26ರವರೆಗೆ ಬಿಡುಗಡೆಯಾದವರ ಸಂಖ್ಯೆ:
ಜೂನ್ 22 - 0
ಜೂನ್ 23 - 24
ಜೂನ್ 24 - 41
ಜೂನ್ 25 - 30
ಜೂನ್ 26 - 21
ಒಟ್ಟು: 116

 ಬಿಡುಗಡೆಯಾಗುತ್ತಿರುವವರ ಸಂಖ್ಯೆ ಗಣನೀಯ ಕುಸಿತ

ಬಿಡುಗಡೆಯಾಗುತ್ತಿರುವವರ ಸಂಖ್ಯೆ ಗಣನೀಯ ಕುಸಿತ

ಜೂನ್ 26 ರಿಂದ ಜುಲೈ 1ರವರೆಗೆ ಬಿಡುಗಡೆಯಾದವರ ಸಂಖ್ಯೆ:
ಜೂನ್ 27 - 07
ಜೂನ್ 28 - 00
ಜೂನ್ 29 - 00
ಜೂನ್ 30 - 10
ಜುಲೈ 1 - 00
ಒಟ್ಟು: 17

ಕಳೆದ ಐದು ದಿನಗಳಿಂದ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ನಿಜಕ್ಕೂ ಕಳವಳಕಾರಿ ಅಂಶವಾಗಿದೆ.

English summary
Coronavirus Spreading Heavily In Bengaluru, Count On Total Discharge Also Reducing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X