ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ; ಮದುವೆ ಮಾಡುವ ಬಗ್ಗೆ ಬಿಬಿಎಂಪಿ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಕೊರೊನಾ ಭೀತಿ ಹಿನ್ನಲೆಯಲ್ಲಿ ಒಂದು ವಾರ ಸಾರ್ವಜನಿಕ ಸಮಾರಂಭ, ವಿವಾಹ ಮುಂತಾದವುಗಳನ್ನು ಕರ್ನಾಟಕ ಸರ್ಕಾರ ಬಂದ್ ಮಾಡಿದೆ. ಮಾರ್ಚ್ 14ರಿಂದಲೇ ಇದು ರಾಜ್ಯಾದ್ಯಂತ ಜಾರಿಗೆ ಬಂದಿದೆ.

ಬೆಂಗಳೂರು ನಗರದಲ್ಲಿ ಮಾಲ್, ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದು, ಮಾಲ್ ತೆರೆದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

ಬಿಬಿಎಂಪಿಯ ಕೆಲವು ಅಧಿಕಾರಿಗಳು ಮದುವೆ ಸಮಾರಂಭವೊಂದರ ಅಲಂಕಾರ ಮತ್ತು ಪೆಂಡಾಲ್ ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ, 100 ರಿಂದ 150 ಜನರು ಸೇರುವ ಇಂತಹ ಕಾರ್ಯಕ್ರಮಗಳನ್ನು ಯಾರೂ ತಡೆಯುವಂತಿಲ್ಲ ಎಂದು ಪಾಲಿಕೆ ಆಯುಕ್ತರು ಹೇಳಿದ್ದಾರೆ.

 ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್ ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್

BBMP

ಪಾಲಿಕೆ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಕರುತು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ತಡೆಯಬೇಡಿ, ಗೊಂದಲಗಳಿದ್ದರೆ ನನ್ನನ್ನು ಅಥವ ಎಲ್ಲ ವಲಯಗಳ ವಿಶೇಷ ಆಯುಕ್ತರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಿರಿ ಎಂದು ಹೇಳಿದ್ದಾರೆ.

ಕೊರೊನಾ; ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಸೂಚನೆಕೊರೊನಾ; ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮುಖ್ಯ ಸೂಚನೆ

ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳ ತಂಡದ ನಡವಳಿಕೆ ಕುರಿತು ದೂರುಗಳಿದ್ದರೆ, ಪಾಲಿಕೆಯ ಕಂಟ್ರೋಲ್ ರೂಂ, ಸಹಾಯವಾಣಿಗೆ ಕರೆ ಮಾಡಬಹುದು ಎಂದು ಫೇಸ್‌ಬುಕ್‌ನಲ್ಲಿ ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

English summary
BBMP clarified that marriages are part of our cultural heritage & none should stop or obstruct ceremonies where 100-150 people are attending. Officials have been instructed to allow small marriage gatherings as they would have been planned well in advance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X