ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 102 ಕೇಂದ್ರಗಳಲ್ಲಿ ಇಂದು ಕೊರೊನಾ ಲಸಿಕಾ ಅಭಿಯಾನ

|
Google Oneindia Kannada News

ಬೆಂಗಳೂರು,ಜನವರಿ 18: ಬೆಂಗಳೂರಿನ 102 ಕೇಂದ್ರಗಳಲ್ಲಿ ಇಂದು ಕೊರೊನಾ ಲಸಿಕೆ ಅಭಿಯಾನ ನಡೆಯಲಿದೆ.

ಬಿಬಿಎಂಪಿಯ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಾಲ್ಕು ಸಾವಿರ ಆರೋಗ್ಯ ಸಿಬ್ಬಂದಿಗೆ ಸೋಮವಾರ ಕೊರೊನಾ ಲಸಿಕೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ದೆಹಲಿ: ಕೊರೊನಾ ಲಸಿಕೆ ಪಡೆದ 51 ಮಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮದೆಹಲಿ: ಕೊರೊನಾ ಲಸಿಕೆ ಪಡೆದ 51 ಮಂದಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ

ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರದ 7,300 ಆರೋಗ್ಯ ಸಿಬ್ಬಂದಿ,106 ಖಾಸಗಿ ಆಸ್ಪತ್ರೆಯ 42,000 ಸಿಬ್ಬಂದಿ ಹಾಗೂ ಒಂಬತ್ತು ವೈದ್ಯಕೀಯ ಕಾಲೇಜುಗಳ 28 ಸಾವಿರ ಆರೋಗ್ಯ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಜನವರಿ 17 ರಂದು 3,659 ಮಂದಿಗೆ ಕೊರೊನಾ ಲಸಿಕೆ

ಜನವರಿ 17 ರಂದು 3,659 ಮಂದಿಗೆ ಕೊರೊನಾ ಲಸಿಕೆ

ಭಾನುವಾರ ನಗರದ ಮಣಿಪಾಲ್ ಆಸ್ಪತ್ರೆ, ಕಾಕ್ಸ್‌ಟೌನ್ ಪಾಲಿಕೆಯ ಹೆರಿಗೆ ಆಸ್ಪತ್ರೆ, ಸೆಂಟ್ ಫಿಲೋಮಿನಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಯಿತು. ಒಟ್ಟು 6277 ಮಂದಿ ಕೊವಿಡ್ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಈ ಪೈಕಿ 3659 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಈಗಲೂ ನೋಂದಣಿಗೆ ಅವಕಾಶವಿದೆ

ಈಗಲೂ ನೋಂದಣಿಗೆ ಅವಕಾಶವಿದೆ

ಲಸಿಕೆ ಪಡೆಯುವುದಕ್ಕೆ ನೋಂದಣಿ ಕಡ್ಡಾಯವಾಗಿದೆ. ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಳ್ಳಲು ಈಗಲೂ ಅವಕಾಶವಿದ್ದು, ಕೋವಿನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈವರೆಗೆ ಬೆಂಗಳೂರಿನಲ್ಲಿ 1.82 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ 1.05 ಲಕ್ಷ ಲಸಿಕೆಯನ್ನು ಬಿಬಿಎಂಪಿಗೆ ನೀಡಿದೆ.

ಲಸಿಕೆ ಪಡೆದ ಸಿಬ್ಬಂದಿಗೆ ತಲೆನೋವು,ಸುಸ್ತು

ಲಸಿಕೆ ಪಡೆದ ಸಿಬ್ಬಂದಿಗೆ ತಲೆನೋವು,ಸುಸ್ತು

ಮಲ್ಲಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಕೊರೊನಾ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಯೊಬ್ಬರಿಗೆ ತಲೆನೋವು, ಸುಸ್ತು ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯ ವಿಶ್ರಾಂತಿ ಪಡೆದ ಬಳಿಕ ಆರೋಗ್ಯ ಸುಧಾರಿಸಿದೆ.ನಂತರ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ.

ಜನವರಿ 17 ರಂದು ಲಸಿಕೆ ಹಾಕಿದ ವಿವಿರ

ಜನವರಿ 17 ರಂದು ಲಸಿಕೆ ಹಾಕಿದ ವಿವಿರ

ಮಣಿಪಾಲ್ ಆಸ್ಪತ್ರೆ-41 ಕೇಂದ್ರ, ಲಸಿಕೆ ಪಡೆದವರು-2704
ಕಾಕ್ಸ್‌ಟೌನ್ ಹೆರಿಗೆ ಆಸ್ಪತ್ರೆ-1 ಲಸಿಕೆ ಕೇಂದ್ರ, ಲಸಿಕೆ ಪಡೆದವರು 32
ಸೇಂಟ್ ಫಿಲೋಮಿನಾ- ಲಸಿಕೆ ಕಂದ್ರ 7, ಲಸಿಕೆ ಪಡೆದವರು 165
ಬ್ಯಾಪ್ಟಿಸ್ಟ್ ಆಸ್ಪತ್ರೆ-ಕೇಂದ್ರ 14, ಲಸಿಕೆ ಪಡೆದವರು 758 ಮಂದಿ.

Recommended Video

ಬೆಂಗಳೂರು: ಸಿಲಿಕಾನ್‌‌ ಸಿಟಿಯ ಈ ಆಸ್ಪತ್ರೆಗಳಲ್ಲಿ ಇಂದಿನಿಂದ ಕೊರೊನಾ ವ್ಯಾಕ್ಸಿನೇಶನ್‌ ಆರಂಭ | Oneindia Kannada

English summary
Corona Vaccine campaign will be held today at 102 centers in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X