ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Sorry, ಬೆಂಗಳೂರಿನಲ್ಲಿ ಏರುತ್ತಿದೆ ಕೊರೊನಾ ಹೊಸ ಪ್ರಕರಣಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 1: ಕೊರೊನಾ ಎರಡನೇ ಹಿಮ್ಮುಖವಾಗಿ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದ ಎನ್ನುವಷ್ಟರಲ್ಲಿ ಹೊಸ ಪ್ರಕರಣಗಳು ಏರಿಕೆಯಾಗುತ್ತಿರುವುದು ಚಿಂತೆಯ ವಿಚಾರವಾಗಿದೆ.

ಇದ್ದ ಎಲ್ಲಾ ನಿರ್ಬಂಧಗಳನ್ನು ಸರಕಾರ ಬಹುತೇಕ ತೆರವುಗೊಳಿಸಿದ ನಂತರ, ಎಲ್ಲಡೆ ಮಾಮೂಲಿ ಸ್ಥಿತಿಯಾಗಿತ್ತು. ಜನರು ಕೋವಿಡ್ ಮಾರ್ಗಸೂಚಿಯ ಬಗ್ಗೆ ತಲೆಕೆಡಿಸಿಕೊಳ್ಳದ ನಿದರ್ಶನಗಳು ಹೆಚ್ಚಾಗುತ್ತಾ ಸಾಗುತ್ತಿದ್ದಂತೆ, ಹೊಸ ಕೇಸುಗಳಲ್ಲಿ ಏರಿಕೆ ಕಂಡು ಬರುತ್ತಿರುವುದು ಆತಂಕಕಾರಿ ವಿಚಾರ.

ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯ

ವಾರಾಂತ್ಯಗಳಲ್ಲಿ ಪ್ರವಾಸೀ ತಾಣಗಳು ಹಾಟ್ ಸ್ಪಾಟ್ ಆಗುತ್ತಿರುವುದು ಒಂದೆಡೆಯಾದರೆ, ದೇವಸ್ಥಾನಗಳಲ್ಲಿಯೂ ತೀರ್ಥ, ಪ್ರಸಾದಕ್ಕೆ ಸರಕಾರ ಅನುಮತಿ ನೀಡಿದ್ದರಿಂದ ಅಲ್ಲೂ ಜನಜಂಗುಳಿ ಜಾಸ್ತಿಯಾಗುತ್ತಿದೆ.

 ಆಟೋ ಚಾಲಕರಿಗೆ 15 ದಿನಗಳ ಡೆಡ್‌ಲೈನ್ ಕೊಟ್ಟಿದ್ಯಾಕೆ ದಾವಣಗೆರೆ ಎಸ್ಪಿ? ಆಟೋ ಚಾಲಕರಿಗೆ 15 ದಿನಗಳ ಡೆಡ್‌ಲೈನ್ ಕೊಟ್ಟಿದ್ಯಾಕೆ ದಾವಣಗೆರೆ ಎಸ್ಪಿ?

ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಪ್ರತೀದಿನವೂ ಜಾಸ್ತಿಯಾಗುತ್ತಿರುವುದರಿಂದ, ಗಡಿ ಭಾಗದ ಜಿಲ್ಲೆಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಗಳು ಈ ಸಂಬಂಧ ಎಂಟು ಜಿಲ್ಲಾಡಳಿತದ ಜೊತೆ ಮಾತುಕತೆಯನ್ನು ನಡೆಸಿದ್ದಾರೆ.

 293 ಸೋಂಕಿತರ ಬಿಡುಗಡೆ ಹೊಂದಿದ್ದರೆ ಮೃತ ಪಟ್ಟವರ ಸಂಖ್ಯೆ ಮೂರು

293 ಸೋಂಕಿತರ ಬಿಡುಗಡೆ ಹೊಂದಿದ್ದರೆ ಮೃತ ಪಟ್ಟವರ ಸಂಖ್ಯೆ ಮೂರು

ಕಳೆದ ಒಂದು ವಾರದ ಅಂದರೆ ಜುಲೈ 25-31ರ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನ ಡೇಟಾ ಅವಲೋಕಿಸಿದಾಗ, ಕೊರೊನಾ ಹೊಸ ಪ್ರಕರಣಗಳು ಮತ್ತೆ ಸ್ಟಡಿಯಾಗಿ ಹೆಚ್ಚಾಗುತ್ತಿರುವುದು ವಿಷಾದದ ವಿಷಯವಾಗಿದೆ. ಜುಲೈ 25ರ ಭಾನುವಾರದಂದು ಹೊಸ ಪ್ರಕರಣ ವರದಿಯಾಗಿದ್ದು 165. 293 ಸೋಂಕಿತರ ಬಿಡುಗಡೆ ಹೊಂದಿದ್ದರೆ ಮೃತ ಪಟ್ಟವರ ಸಂಖ್ಯೆ ಮೂರು.

 ಸಾವಿನ ಸಂಖ್ಯೆ ಹೆಚ್ಚಾಗದೇ ಇರುವುದು ತುಸು ಸಮಾಧಾನಕರ ಅಂಶವಾಗಿದೆ

ಸಾವಿನ ಸಂಖ್ಯೆ ಹೆಚ್ಚಾಗದೇ ಇರುವುದು ತುಸು ಸಮಾಧಾನಕರ ಅಂಶವಾಗಿದೆ

ಸೋಮವಾರದಿಂದ (ಜುಲೈ 26) ಇದು ನಿಧಾನವಾಗಿ ಏರಿಕೆಯಾಗುತ್ತಲೇ ಬರುತ್ತಿದೆ. ಒಂದು ದಿನದ ಹಿಂದೆ 165 ಇದ್ದ ಸಂಖ್ಯೆ 467ಕ್ಕೆ ಏರಿದೆ. ಇನ್ನು, ಅಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಸಂಖ್ಯೆ 497. ಇನ್ನು ಮೃತ ಪಟ್ಟವರ ಸಂಖ್ಯೆ ಮೂರು. ಸಾವಿನ ಸಂಖ್ಯೆ ಹೆಚ್ಚಾಗದೇ ಇರುವುದು ತುಸು ಸಮಾಧಾನಕರ ಅಂಶವಾಗಿದೆ.

 ಬಿಡುಗಡೆಯಾದವರ ಸಂಖ್ಯೆ 484. ಮೃತ ಪಟ್ಟವರ ಸಂಖ್ಯೆ ಐದು

ಬಿಡುಗಡೆಯಾದವರ ಸಂಖ್ಯೆ 484. ಮೃತ ಪಟ್ಟವರ ಸಂಖ್ಯೆ ಐದು

ಇನ್ನು ಮಂಗಳವಾರದಂದು (ಜುಲೈ 27) ಈ ಸಂಖ್ಯೆ ತುಸು ಇಳಿಕೆಯಾಗಿತ್ತು. ಅಂದು 354 ಕೇಸುಗಳು ವರದಿಯಾಗಿದ್ದವು. ಬಿಡುಗಡೆಯಾದವರ ಸಂಖ್ಯೆ 484. ಮೃತ ಪಟ್ಟವರ ಸಂಖ್ಯೆ ಐದು. ಹೊಸ ಕೇಸುಗಳಿಗಿಂತ ಬಿಡುಗಡೆ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳು ಇಳಿಮುಖಗೊಳ್ಳುತ್ತಿವೆ.

 376 ಹೊಸ ಪ್ರಕರಣಗಳು ದಾಖಲಾಗಿದ್ದವು. ಇನ್ನು, ಬಿಡುಗೊಡೆಗೊಂಡವರ ಸಂಖ್ಯೆ 244

376 ಹೊಸ ಪ್ರಕರಣಗಳು ದಾಖಲಾಗಿದ್ದವು. ಇನ್ನು, ಬಿಡುಗೊಡೆಗೊಂಡವರ ಸಂಖ್ಯೆ 244

ಬುಧವಾರದಂದು (ಜುಲೈ 28) ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿತ್ತು. ಅಂದು 376 ಹೊಸ ಪ್ರಕರಣಗಳು ದಾಖಲಾಗಿದ್ದವು. ಇನ್ನು, ಬಿಡುಗೊಡೆಗೊಂಡವರ ಸಂಖ್ಯೆ 244. ಇದು ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಕಮ್ಮಿ. ಇನ್ನು ಅಂದು ಮೃತ ಪಟ್ಟವರ ಸಂಖ್ಯೆ ಮೂರು.

 ಇದು ಕಮ್ಮಿಯಾಗಿರುವುದು ಸಕ್ರಿಯ ಪ್ರಕರಣ ಹೆಚ್ಚಾಗುವಂತೆ ಮಾಡಿದೆ

ಇದು ಕಮ್ಮಿಯಾಗಿರುವುದು ಸಕ್ರಿಯ ಪ್ರಕರಣ ಹೆಚ್ಚಾಗುವಂತೆ ಮಾಡಿದೆ

ಗುರುವಾರದಂದು (ಜುಲೈ 29) 506 ಹೊಸ ಪ್ರಕರಣಗಳು ದಾಖಲಾಗುವ ಮೂಲಕ, ಕಳೆದ ಕೆಲವು ದಿನಗಳಿಂದ ಅತಿಹೆಚ್ಚು ಹೊಸ ಕೇಸುಗಳು ದಾಖಲಾದಂತಾಗಿದೆ. ಅಂದು ಬಿಡುಗಡೆಯಾದವರ ಸಂಖ್ಯೆ 257. ಇದು ಕೂಡಾ ಕಮ್ಮಿಯಾಗಿರುವುದು ಸಕ್ರಿಯ ಪ್ರಕರಣ ಹೆಚ್ಚಾಗುವಂತೆ ಮಾಡಿದೆ. ಅಂದು ಮೃತ ಪಟ್ಟವರ ಸಂಖ್ಯೆ ಒಂಬತ್ತು.

Recommended Video

ಗಡ್ಡ ಹಾಗೂ ತಿಲಕಾನೆ ನನ್ನ IDENTITY !! C T RAVI | Oneindia Kannada
 ಬಿಡುಗಡೆ ಹೊಂದಿದವರು 366 ಮತ್ತು ಮೃತ ಪಟ್ಟವರ ಸಂಖ್ಯೆ ಒಂಬತ್ತು

ಬಿಡುಗಡೆ ಹೊಂದಿದವರು 366 ಮತ್ತು ಮೃತ ಪಟ್ಟವರ ಸಂಖ್ಯೆ ಒಂಬತ್ತು

ಶುಕ್ರವಾರದಂದು (ಜುಲೈ 30) 426 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನು, ಬಿಡುಗಡೆ ಹೊಂದಿದವರು 366 ಮತ್ತು ಮೃತ ಪಟ್ಟವರ ಸಂಖ್ಯೆ ಒಂಬತ್ತು. ಶನಿವಾರದಂದು (ಜುಲೈ 31) 450ಹೊಸ ಪ್ರಕರಣಗಳು ವರದಿಯಾಗಿದ್ದು, 377 ಜನರು ಡಿಸ್ಚಾರ್ಜ್ ಆಗಿದ್ದು ಹನ್ನೊಂದು ಮಂದಿ ಮೃತ ಪಟ್ಟಿದ್ದಾರೆ.

English summary
Corona New Cases Steadily Increasing Day By Day In Bengaluru From July 25 to July 31. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X