ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್‌; ಮನೆಯೊಳಗೆಯೇ ಮೂಡಿಬಂದ 'ಮಾಮ್‌ ರೋನಾ‌’...!

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕೊರೊನಾ ವೈರಸ್ ಇಡೀ ಜಗತ್ತನ್ನೇ ಕಂಗೆಡಿಸಿದೆ. ನಮ್ಮ ದೇಶದಲ್ಲೂ ಬಹುತೇಕರು ಮನೆಯೊಳಗೆ ಇದ್ದಾರೆ. ಇಂಥ ಸಂದರ್ಭದಲ್ಲಿ ಮನೆಯೊಳಗಿದ್ದೇ ಅಭಿನಯಿಸಿ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿರುವ 'ಮಾಮ ರೋನಾ' ಕಿರುಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ.

Recommended Video

ಒಂದೇ ಕುಟುಂಬದ 31 ಮಂದಿಗೆ ಕೊರೊನ ಸೋಂಕು , ಆಸ್ಪತ್ರೆ ನೋಡಿ ಸಂಭ್ರಮಿಸಿದ ಕುಟುಂಬ | Oneindia Kannada

ಕಿರುಚಿತ್ರ ತಯಾರಿಕೆಯಲ್ಲಿ ಆಸಕ್ತಿ ಹೊಂದಿರುವ ಯುವಕರೇ ಕಟ್ಟಿಕೊಂಡಿರುವ ಮಿಡಿಯಾ ಮೈಂಡ್ ಕ್ರಿಯೇಷನ್ಸ್ ವತಿಯಿಂದ ಈ ಕಿರುಚಿತ್ರ ನಿರ್ಮಿಸಲಾಗಿದೆ. ನಟರೆಲ್ಲರೂ ಹೊಸಬರೇ ಆಗಿದ್ದು, ಅದು ಗೊತ್ತಾಗದ ರೀತಿಯಲ್ಲೇ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ.

ಲಾಕ್‌ಡೌನ್‌ನಿಂದ ಇಂದು ಪ್ರತಿಯೊಬ್ಬರು ಮನೆಯೊಳಗೆ ಇದ್ದಾರೆ. ವರ್ಕ್ ಫ್ರಾಮ್ ಹೋಂ ಕಲ್ಪನೆಯೂ ಮಿತಿಮೀರಿದೆ. ಮನೆಯವರೆಲ್ಲರ ಪೋಷಣೆ ಜವಾಬ್ದಾರಿ ಮಹಿಳೆ ಮೇಲೆ ಬಿದ್ದಿದೆ. ಮಕ್ಕಳಿಗೆ ತಾಯಿಯಾಗಿ, ಗಂಡನಿಗೆ ಪತ್ನಿಯಾಗಿ, ಅತ್ತೆ-ಮಾಮರಿಗೆ ಸೊಸೆಯಾಗಿ, ಸಂಬಂಧಿಕರಿಗೆ ಪೋಷಕಿಯಾಗಿ ಮಹಿಳೆ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾಳೆ. ಲಾಕ್‌ಡೌನ್‌ನಿಂದ ಎಲ್ಲವೂ ಬಂದ್ ಆಗಿದ್ದರೂ ಮನೆಯ ಅಡುಗೆ ಮನೆ ಮಾತ್ರ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ಹೀಗೆ, ಮನೆಯಲ್ಲಿ ಮಹಿಳೆಯ ಕಷ್ಟ ಹಾಗೂ ಆಕೆಯ ತಾಳ್ಮೆ ಕುರಿತ ವಿಷಯವನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ.

ಕುಟುಂಬಗಳಲ್ಲಿ ಸಾಕಷ್ಟು ಬದಲಾವಣೆ

ಕೊರೊನಾ ವೈರಸ್ ಸಮಾಜದಲ್ಲಿ ಹತ್ತು ಹಲವು ಬದಲಾವಣೆ ತಂದಿದ್ದು ಈಗ ಜನಜನಿತ. ಹಲವರಿಗೆ ವರ್ಕ ಫ್ರಾಮ್ ಹೋಂ ಅವಕಾಶ ಇದ್ದರೆ ಇನ್ನು ಕೆಲವರಿಗೆ ಅನಿವಾರ್ಯವಾಗಿ ಹೊರಗಡೆ ಕೆಲಸಕ್ಕೆ ಹೋಗಬೇಕಿದೆ. ಈ ಅನಿರೀಕ್ಷಿತ ಸ್ಥಿತಿ ಸಮಾಜದಲ್ಲಿ ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಮಾನಸಿಕ ಹಾಗೂ ದೈಹಿಕ ತಲ್ಲಣಗಳಿಗೆ ಎಡೆ ಮಾಡಿಕೊಟ್ಟಿದೆ. ಇಂತಹ ಒಂದು ವಸ್ತು ಸ್ಥಿತಿಯನ್ನು ಇಟ್ಟುಕೊಂಡು ಒಂದು ಮಧ್ಯಮ ವರ್ಗದ ಕುಟುಂಬದ ಬಗ್ಗೆ ಇರುವ ಸಂಪನ್ಮೂಲ ಅಂದರೆ ಮೊಬೈಲ್‌ನಲ್ಲೇ ಸ್ಪಷ್ಟ ಹಾಗೂ ನಿಖರ ಪರಿಕಲ್ಪನೆಯೊಂದಿಗೆ ಮೀಡಿಯಾ ಮೈಂಡ್ 24x7 ಯೂ ಟ್ಯೂಬ್ ಚಾನೆಲ್ ನಿರ್ಮಿಸಿರುವ ಕುರಿಚಿತ್ರ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಕೊರೊನಾ ತಂದ ಸೈಡ್ ಎಫೆಕ್ಟ್‌ನ್ನೂ ಮಾಮರೊನಾ ಹೆಸರಿನಲ್ಲಿ ಚಿತ್ರೀಕರಿಸಿದ ಪರಿ ಅನನ್ಯ.

ಲಾಕ್‌ಡೌನ್ ಜಿಗುಪ್ಸೆ ತರಿಸಿದೆ

ಲಾಕ್‌ಡೌನ್ ಜಿಗುಪ್ಸೆ ತರಿಸಿದೆ

ವರ್ಕ ಫ್ರಾಂ ಹೋಂ ಪರಿಕ್ಲಪನೆ ಅರ್ಥೈಸಿಕೊಳ್ಳದೇ ಹಲವು ಗೃಹಿಣಿಯರು ಗಂಡನ ಕೆಲಸ ಹೋಯಿತು ಎಂದು ಗೊಣಗಿದ್ದೂ ಆಯ್ತು. ಮನೆ ನಿರ್ವಹಣೆ ಹೇಗೆ ಎಂಬ ಆತಂಕದಿಂದ ಕಣ್ಣೀರಿಟ್ಟಿದ್ದು ಆಯ್ತು. ಮಕ್ಕಳಿಗೆ ಇದೀಗ ಲಾಕ್‌ಡೌನ್ ಜಿಗುಪ್ಸೆ ತರಿಸಿದೆ. ಗೃಹಿಣಿಗೆ ಮನೆಯಲ್ಲಿ ಇರುವವರ ಬೇಡಿಕೆಗಳನ್ನು ಈಡೇರಿಸುವುದೇ ಒಂದು ದೊಡ್ಡ ಕೆಲಸವಾಗಿದೆ. ಪ್ರತಿಯೊಬ್ಬರ ಭಿನ್ನ ಬೇಡಿಕೆ ಮತ್ತು ಅಭಿರುಚಿ ಪೂರೈಸುವುದರಲ್ಲಿ ಮನೆ ಹೆಣ್ಣುಮಗಳು ಹಣ್ಣಾಗಿದ್ದಂತೂ ಸತ್ಯ. ಸಂಭವನೀಯ ಆರ್ಥಿಕ ಸಂಕಷ್ಟದ ಸಂಕಟ ಒಂದಡೆಯಾದರೆ ಇನ್ನೊಂದಡೆ ಹೆಚ್ಚಿದ ಭೌತಿಕ ಪರಿಶ್ರಮದಿಂದ ಯಜಮಾನತಿ ಸಹನೆ ಕಳೆದುಕೊಳ್ಳುತ್ತಿದ್ದಾಳೆ. ಇದು ಕೇವಲ ಒಂದು ಮನೆಯ ಚಿತ್ರಣವಲ್ಲ. ಪ್ರತಿ ಒಂದು ಮನೆಯಲ್ಲಿ ಸದ್ಯಕ್ಕೆ ನಡೆಯುತ್ತಿರುವ ವಾಸ್ತವ ಸಂಗತಿ. ಇದೆಲ್ಲದಕ್ಕೂ ಮತ್ತೆ ಕೊರೊನಾವನ್ನೇ ಶಪಿಸುವಂತಾಗಿರೋದು ಸತ್ಯ. ಮನೆಯ ಯಜಮಾನತಿ ಎದುರಿಸುತ್ತಿರುವ ಸವಾಲುಗಳ ಸ್ಪಷ್ಟ ಚಿತ್ರಣ ಕಟ್ಟಿಕೊಡುವಲ್ಲಿ ಮೀಡಿಯಾ ಮೈಂಡ್ ಕ್ರಿಯೇಷನ್ಸ್ ಯಶಸ್ವಿಯಾಗಿದೆ.

ಪ್ರತಿಯೊಬ್ಬರ ಮನೆಯ ಚಿತ್ರಣವೇ

ಪ್ರತಿಯೊಬ್ಬರ ಮನೆಯ ಚಿತ್ರಣವೇ

ನೋಡಿದ ಕೂಡಲೇ ಇದು ಪ್ರತಿಯೊಬ್ಬರ ಮನೆಯ ಚಿತ್ರಣವೇ ಎನ್ನುವಷ್ಟರ ಮಟ್ಟಿಗೆ ಅನುಭೂತಿ ಕೊಡುತ್ತಿರುವುದು ಚಾನೆಲ್‌ನ ಸೃಜನಶೀಲತೆ ಮತ್ತು ತಾಂತ್ರಿಕ ನೈಪುಣ್ಯತೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ತಾರಾಗಣದಲ್ಲಿರುವ ಶ್ರೀಭವಾನಿ ರಾಕೇಶ್, ಮಿಥುನ ಶಿಂಧೆ, ಮಯೂರ್ ಶಿವಣ್ಣನವರ, ಧನ್ಯಾ, ಪ್ರೇಮಾ ನಡುವಿನಮನಿ, ಹರ್ಷಿಕಾ ಸಂಪಂಗಿ, ಆರ್‌.ಎಂ.ಗೋಗೇರಿ, ಅಶೋಕ ನಿಂಗೋಲಿ ಅವರು ಯಾವ ಪ್ರಬುದ್ಧ ನಟರಿಗಿಂತ ತಾವು ಕಡಿಮೆ ಇಲ್ಲ ಎಂಬುದನ್ನು ನಟನೆ ಮೂಲಕ ಸಾರಿದ್ದಾರೆ. ಪ್ರತಿಯೊಬ್ಬರೂ ಅವರ ಮನೆಯಲ್ಲಿದ್ದುಕೊಂಡೇ ಅಭಿನಯಿಸಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಯಾರೊಬ್ಬರೂ ಮನೆಯಿಂದ ಹೊರಗೆ ಬಂದಿಲ್ಲವೆಂಬುದೇ ವಿಶೇಷ. ನಿರ್ದೇಶನ ಹೊಣೆ ಹೊತ್ತ ಸಂತೋಷ್.ಎಫ್‌.ಜಿ ಅವರ ಪರಿಕಲ್ಪನೆ ಇಂದಿನ ದಿನಕ್ಕೆ ಸ್ತುತ್ಯರ್ಹ. ಕಿರುಚಿತ್ರದ ಸಂಕಲವನ್ನು ಅವರೇ ವಹಿಸಿಕೊಂಡಿದ್ದರಿಂದ, ಕಿರುಚಿತ್ರವು ಅರ್ಥಪೂರ್ಣವಾಗಿ ಮೂಡಿಬಂದಿದೆ.

ಯೂಟ್ಯೂಬ್ ಚಾನೆಲ್‌ನಲ್ಲಿ

ಯೂಟ್ಯೂಬ್ ಚಾನೆಲ್‌ನಲ್ಲಿ

"Media mind 24x7" ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕಿರುಚಿತ್ರವನ್ನು ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೂ ಸಾವಿರಾರು ಮಂದಿ ಈ ಕಿರುಚಿತ್ರ ವೀಕ್ಷಿಸಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರ ಕೆಲಸಕ್ಕೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

English summary
Corona Lockdown Effect: Mom Rona Kannada Short Film Attractive On Socia Media. This Short Film Makes By Media Mind Creations. All Artist they own shoot their home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X