ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ನಿಯಮ ಉಲ್ಲಂಘನೆ: ಜೆಡಬ್ಲೂ ಮಾರಿಯೇಟ್ ಹೋಟೆಲ್ ವಿರುದ್ಧ ಎಫ್ಐಆರ್ !

|
Google Oneindia Kannada News

ಬೆಂಗಳೂರು, ಮಾರ್ಚ್ 12: ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮೂರು ಪ್ರತಿಷ್ಠಿತ ಹೋಟೆಲ್ ವಿರುದ್ಧ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಯಾವುದೇ ಒಂದು ಪಾರ್ಟಿ ಆಯೋಜನೆ ಮಾಡಬೇಕಾದರೆ ಇಷ್ಟೇ ಮಂದಿ ಮೀರಿ ಇರಬಾರದು ಎಂಬ ನಿಯಮವಿದೆ. ಆದರೆ, ಡಿಜೆ ಪಾರ್ಟಿಗಳು ಕೋವಿಡ್ ನಿಯಮ ಉಲ್ಲಂಘಿಸಿ ಆಯೋಜನೆ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೂರು ಪ್ರತ್ಯೇಕ ಕೇಸು ದಾಖಲಾಗಿವೆ.

ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲೂ ಮಾರಿಯಟ್ , ಇಂಡಿಗೋ ಎಕ್ಷ್ ಪಿ, ಹಾಗೂ ಕೋನ್ರಾಡ್ ಹೋಟೆಲ್ ಗಳ ವಿರುದ್ಧ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಮೂರು ಹೋಟೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿವೆ. ತಡರಾತ್ರಿ ಮೂರು ಗಂಟೆ ವರೆಗೂ ಡಿಜೆ ಪಾರ್ಟಿ ನಡೆಸಿರುವ ಆರೋಪ ಕೇಳಿ ಬಂದಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಾರುತಿ ಅವರು ಗಸ್ತಿನಲ್ಲಿದ್ದಾಗ ಈ ಸಂಗತಿ ಹೊರ ಬಂದಿದೆ.

Corona lock down rules violation: FIR Registered against J.W. Marriott and two other hotels

ಪರವಾಗನಿ ಇಲ್ಲದೇ ಅವಧಿ ಮೀರಿ ಡಿಜೆ ಮ್ಯೂಜಿಕ್ ಶೋ ನಡೆಸುತ್ತಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ಸಿಬ್ಬಂದಿ ಜತೆ ಭೇಟಿ ಮಾಡಿ ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಡಿಜೆ ಆಯೋಜಕ ಎಸ್‌. ಫರ್ನಾಂಡೀಸ್ ಮತ್ತು ನಿರ್ದೇಶಕ ಮನೋಜ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Recommended Video

ಕೋರೋನ ಹಾವಳಿ ಜಾಸ್ತಿ ಆದ ಕಾರಣ ! ಲಾಕ್ ಡೌನ್ | Oneindia Kannada

English summary
FIR has been lodged against three hotels, including a JW Marriott, on charges of violating the Covid rules know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X