ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿ.ಆರ್. ಮಿಲ್ ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಿದ ಸಿಬ್ಬಂದಿ !

|
Google Oneindia Kannada News

ಬೆಂಗಳೂರು, ಮೇ. 03: ಬೆಂಗಳೂರಿನಲ್ಲಿ ಕೊರೊನಾ ಸಾವುಗಳಿಗೆ ನಿರ್ಮಿಸಿರುವ ಸ್ಮಶಾನಗಳು ಕೂಡ ಹೌಸ್ ಫುಲ್ ಬೋರ್ಡ್ ಆಗಿವೆ. ಚಾಮರಾಜಪೇಟೆಯಲ್ಲಿರುವ ಟಿ.ಆರ್. ಮಿಲ್ ಸೇರಿದಂತೆ ನಗರದಲ್ಲಿರುವ ಪ್ರಮುಖ ಸ್ಮಶಾನಗಳು ಕೂಡ ಸಿನಿಮಾ ಚಿತ್ರಮಂದಿರಗಳ ಮಾದರಿಯಲ್ಲಿ ಹೌಸ್ ಫುಲ್ ನಾಮ ಫಲಕ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದಡೆ ನಗರದ ಹೊರವಲಯದಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಸ್ಮಶಾನಗಳಲ್ಲಿ ಮೃತ ದೇಹಗಳನ್ನು ಸುಡದ ಕಾರಣ ಹದ್ದು ಮತ್ತು ನಾಯಿಗಳು ಎಳೆದು ಕೊಂಡು ಹೋಗಿ ತಿನ್ನುವಂತಾಗಿದೆ.

ಭಾರತವನ್ನು 'ಚುಚ್ಚು'ತ್ತಿರುವ ಕೊರೊನಾವೈರಸ್ 'ಮದ್ದಿ'ನ ಸುತ್ತಲು ಒಂದು ವರದಿ! ಭಾರತವನ್ನು 'ಚುಚ್ಚು'ತ್ತಿರುವ ಕೊರೊನಾವೈರಸ್ 'ಮದ್ದಿ'ನ ಸುತ್ತಲು ಒಂದು ವರದಿ!

ಚಾಮರಾಜಪೇಟೆಯಲ್ಲಿರುವ ಟಿ.ಆರ್. ಮಿಲ್ ರುದ್ರಭೂಮಿಯಲ್ಲಿ ದಿನಕ್ಕೆ ಕೇವಲ 20 ಮೃತ ದೇಹಗಳನ್ನಷ್ಟೇ ಸುಡಲಿಕ್ಕೆ ಅವಕಾಶವಿದೆ. ಆದರೆ ಭಾನುವಾರ ಒಂದೇ ದಿನ ಇಲ್ಲಿ 40 ಕೊವಿಡ್ ಮೃತದೇಹಗಳನ್ನು ಸಾಗಿಸಲಾಗಿದೆ. ಇಷ್ಟು ಮೃತ ದೇಹಗಳನ್ನು ದಹನ ಮಾಡಲು ಎರಡು ದಿನ ಬೇಕಾಗಿದ್ದು, ಮೃತ ದೇಹ ಇಡಲು ಜಾಗವಿಲ್ಲ. ಹೀಗಾಗಿ ಹೌಸ್ ಫುಲ್ ಬೋರ್ಡ್ ಹಾಕುವ ಮೂಲಕ ಸೋಮವಾರ ಮೃತ ದೇಹ ಸ್ವೀಕರಿಸಲು ಸ್ಮಶಾನ ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಟಿ.ಆರ್ ಮಿಲ್ ಚಿತಾಗಾರಕ್ಕೆ ಬರುತ್ತಿರುವ ಮೃತ ದೇಹಗಳನ್ನು ಬೇರಡೆಗೆ ವಾಪಸು ರವಾನಿಸಲಾಗುತ್ತಿದೆ. ಒಂದೆಡೆ ಆಕ್ಸಿಜನ್, ಬೆಡ್‌ಗೆ ಪರದಾಡುತ್ತಿರುವ ಜನರು ಇದೀಗ ಸ್ಮಶಾನ ಜಾಗಕ್ಕೂ ಒದ್ದಾಡುವಂತಾಗಿದೆ.

corona deaths : T.R Mill Graveyard doors closed with House Full board display

ಇನ್ನು ಬೆಂಗಳೂರಿನ ಹೊರ ವಲಯದಲ್ಲಿ ನಿರ್ಮಿಸಿರುವ ಸಾಮೂಹಿಕ ಸ್ಮಶಾನಗಳಲ್ಲಿ ಬೇರೆಯದ್ದೇ ಸಮಸ್ಯೆ ಎದುರಾಗಿದೆ. ತಾವರೆಕೆರೆ ಹಾಗೂ ಎಲಚಿಕುಪ್ಪೆ ಸಮೀಪದ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲಿಕ್ಕೆ ಸೂಕ್ತವಾದ ಸೌದೆ ಸಿಗುತ್ತಿಲ್ಲ. ಹೀಗಾಗಿ ಪೆಟ್ರೊಲ್ ಹಾಕಿ ಸುಡುತ್ತಿರುವ ಆರೋಪ ಕೇಳಿ ಬಂದಿದೆ. ಮಿಗಿಲಾಗಿ, ಕೆಲವು ಮೃತ ದೇಹಗಳನ್ನು ಸರಿಯಗಿ ಸುಡದ ಕಾರಣ ನಾಯಿಗಳು ಎಳೆದುಕೊಂಡು ಬಂದು ತಿನ್ನುವ ಭಯಾನಕ ಸಂಗತಿಯ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಹದ್ದುಗಳು ಮತ್ತು ನಾಯಿಗಳು ಅರೆ ಬೆಂದ ಮೃತ ದೇಹಗಳ ತುಣಕುಗಳನ್ನು ಎಳೆದು ಸಮೀಪದ ಮನೆಗಳ ಮುಂದೆ ಹಾಕುತ್ತಿವೆ. ಹೀಗಾಗಿ ಸ್ಮಶಾನದ ಅಕ್ಕ ಪಕ್ಕದಲ್ಲಿರುವ ಮನೆಯವರು ಈ ಭಯಾನಕ ದೃಶ್ಯಗಳನ್ನು ನೋಡಲಾಗದೇ ಮನೆಗಳನ್ನು ಖಾಲಿ ಮಾಡಿದ್ದಾರೆ.

English summary
Inside story of Graveyards condition in Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X