• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏ.10ರಿಂದ ನೈಟ್ ಕರ್ಫ್ಯೂ: ಯಾವುದಕ್ಕೆಲ್ಲಾ ಅನುಮತಿ?

|

ಬೆಂಗಳೂರು, ಏಪ್ರಿಲ್ 10: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಮಾಡಲಾಗಿದೆ. ಬೆಂಗಳೂರು ನಗರ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಶನಿವಾರದಿಂದ ಕೊರೊನಾ ನೈಟ್‌ ಕರ್ಫ್ಯೂ ಜಾರಿಯಲ್ಲಿದೆ.

ಸಾರ್ವಜನಿಕರು ಸುಮ್ಮನೆ ಮನೆಯಿಂದ ಹೊರಬರುವಂತಿಲ್ಲ, ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ರೀತಿಯಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನೈಟ್ ಕರ್ಫ್ಯೂ ಸರ್ಕಾರದ ನಿಯಮಗಳ ಬಗ್ಗೆ ಜನ ಸಾಮಾನ್ಯರ ಕಿಡಿ !

ಅನಗತ್ಯ ಓಡಾಟಕ್ಕೆ ಮಾತ್ರ ನಿರ್ಬಂಧ ಹೇರಲಾಗಿದ್ದು ಉಳಿದಂತೆ ಅಗತ್ಯ ಸೇವೆಗೆ ಯಾವುದೇ ರೀತಿಯ ಅಡ್ಡಿ ಆತಂಕ ಎದುರಾಗುವುದಿಲ್ಲ. ಕೆಲವೊಂದು ರಿಯಾಯಿತಿಗಳನ್ನು ನೈಟ್‌ ಕರ್ಪ್ಯೂನಲ್ಲಿ ನೀಡಲಾಗಿದೆ.

*ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಕರ್ಫ್ಯೂ ಮುನ್ನವೇ ಕರ್ತವ್ಯಕ್ಕೆ ಹಾಜರಾಗಬೇಕು

*ಆಟೋ, ಬಸ್, ಟ್ಯಾಕ್ಸಿ ಸಂಚಾರಕ್ಕೆ ಅಡ್ಡಿ ಇಲ್ಲ

*ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅವಕಾಶ

*ರಾತ್ರಿ ಸಮಯದಲ್ಲಿ ವಿಮಾನ, ರೈಲು, ಬಸ್ಸು ಪ್ರಯಾಣಕ್ಕೆ ಅನುಮತಿ, ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್‌ಗಳ ಆಧಾರದ ಮೇಲೆ ಆಟೋ, ಕ್ಯಾಬ್‌ಗಳಲ್ಲಿ ಸಂಚರಿಸಲು ಅನುಮತಿ ಇದೆ.

*ಅಂತರ್ಜಾಲ, ದೂರಸಂಪರ್ಕ ಸೇವಾ ಸಂಸ್ಥೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳ ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಅಧಿಕೃತ ಕಚೇರಿ ಗುರುತಿನ ಚೀಟಿ ಹೊಂದಿ ಸಂಚರಿಸಲು ಅವಕಾಶ.

*ಅತ್ಯವಶ್ಯಕ ಸೇವೆ ಒದಗಿಸುವ ವಾಹನಗಳು, ಸರಕು ಸಾಗಣಿಕೆ ವಾಹನಗಳು ಹೋಂ ಡೆಲಿವರಿ, ಈ ಕಾಮರ್ಸ್‌ ವಾಹನಗಳ ಸಂಚಾರಕ್ಕೆ ಅನುಮತಿ

*ವೈದ್ಯಕೀಯ ಸೇವೆ, ತುರ್ತು ಚಟುವಟಿಕೆ ಹೊರತಾಗಿ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ

   ಇವತ್ತಿಂದ ರಾತ್ರಿ ಬೇಕಾಬಿಟ್ಟಿ ಓಡಾಡಿದ್ರೆ ಪೊಲೀಸ್ ಏನ್ ಮಾಡ್ತಾರೆ ಗೊತ್ತಾ..? | Oneindia Kannada

   English summary
   Beginning Saturday night, seven major cities of Karnataka including Bengaluru and Mysuru will have a night curfew from 10 pm to 5 am. Amid the surging number of COVID-19 cases in the state,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X