• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೈಟ್ ಕರ್ಫ್ಯೂ ಸರ್ಕಾರದ ನಿಯಮಗಳ ಬಗ್ಗೆ ಜನ ಸಾಮಾನ್ಯರ ಕಿಡಿ !

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಕೊರೋನಾ ಎರಡನೇ ಅಲೆ ಆರಂಭವಾಗಿದೆ. ಈ ಕುರಿತು ಜನರಲ್ಲಿ ಭೀತಿ ಮೂಡಿಸಿದ ಬೆನ್ನಲ್ಲೇ ಇದೀಗ ನೈಟ್‌ ಕರ್ಫ್ಯೂ ಹೆಸರಿನಲ್ಲಿ ವಿಧಿಸಿರುವ ಷರತ್ತುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆ ವರೆಗೂ ಅಸ್ತಿತ್ವದಲ್ಲಿರುವ ನೈಟ್ ಕರ್ಫ್ಯೂ ನಿಯಮಗಳ ಬಗ್ಗೆ ದೊಟ್ಟ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

   ಇವತ್ತಿಂದ ರಾತ್ರಿ ಬೇಕಾಬಿಟ್ಟಿ ಓಡಾಡಿದ್ರೆ ಪೊಲೀಸ್ ಏನ್ ಮಾಡ್ತಾರೆ ಗೊತ್ತಾ..? | Oneindia Kannada

   ನೈಟ್ ಕರ್ಫೂ ವೇಳೆ ಹತ್ತು ಗಂಟೆ ಬಳಿಕ ಎಲ್ಲಾ ಅಂಗಡಿ ಮುಂಗಟ್ಟು ಮತ್ತು ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಆದರೆ, ಹೋಟೆಲ್ ಗಳ ಆಹಾರ ಪದಾರ್ಥಗಳನ್ನು ಮನೆಗಳಿಗೆ ಡೆಲಿವರಿ ಮಾಡುವ ಸ್ವಿಗ್ಗಿ ಜೊಮಾಟೋ ಆನ್‌ಲೈನ್ ಸೇವಾ ಕಂಪನಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂದರೆ, ಹೋಟೆಲ್ ಗಳಿಗೆ ಹೋಗುವ ಸ್ವಿಗ್ಗಿ ಜೊಮಾಟೋ ಡೆಲಿವರಿ ಕೆಲಸಗಾರರಿಗೆ ಕೊರೋನಾ ಬರುವುದಿಲ್ಲವೇ ? ಸ್ವಿಗ್ಗಿ , ಜೊಮಾಟೋ ಜತೆಗೆ ಕೊರೋನಾ ಸೋಂಕು ಒಡಂಬಡಿಕೆ ಮಾಡಿಕೊಂಡಿದೆಯಾ ? ಯಾಕೆ ಈ ರೀತಿಯ ತಾರತಮ್ಯ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.

   ಈ ಐಡಿಯಾ ಉಪಯೋಗಿಸಿದ್ರೆ ಸಂಚಾರಿ ಪೊಲೀಸರು ದಂಡ ಹಾಕೋಕೆ ಆಗಲ್ಲ !ಈ ಐಡಿಯಾ ಉಪಯೋಗಿಸಿದ್ರೆ ಸಂಚಾರಿ ಪೊಲೀಸರು ದಂಡ ಹಾಕೋಕೆ ಆಗಲ್ಲ !

   ಒಂದೆಡೆ ನಿಲ್ಲದೇ ಇಡೀ ಊರೇ ಸುತ್ತುವರು ಜೊಮಾಟೋ ಮತ್ತು ಸ್ವಿಗ್ಗಿಗಳು. ಎಲ್ಲಾ ಹೋಟೆಲ್ ಗಳಲ್ಲಿ ಆಹಾರ ಪದಾರ್ಥ ಸಂಗ್ರಹಿಸುತ್ತಾರೆ. ಆರ್ಡರ್ ಮಾಡಿದವರೆಲ್ಲರ ಮನೆಗಳಿಗೂ ಹೋಗಿ ಬರುತ್ತಾರೆ. ಕೊರೋನಾ ಹರಡಲು ಶುರುವಾದರೆ ಅವರಿಂದಲೇ ಜಾಸ್ತಿ ಹರಡುವ ಸಾಧ್ಯತೆಯಿದೆ. ಆದರೆ, ತುರ್ತು ಸೇವೆ ಎಂದು ಪರಿಗಣಿಸಿ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಗಳಿಗೆ ಅವಕಾಶ ನೀಡಿರುವುದು ವಿಪರ್ಯಾಸ. ಸ್ವಿಗ್ಗಿ , ಜೊಮಾಟೋ ಫುಡ್ ಡೆಲಿವರಿ ಮಾಡುವರಿಗೆ ಕೊರೋನಾ ಬರುದಿಲ್ಲವೇ ? ಇವರೊಂದಿಗೆ ಕೊರೋನಾ ಸೋಂಕು ಒಡಂಬಡಿಕೆ ಮಾಡಿಕೊಂಡಿದೆಯೇ ? ಎಂದು ಚಿಲ್ಲರೆ ಹೋಟೆಲ್ ಉದ್ಯಮ ನಡೆಸುವರು ಪ್ರಶ್ನೆ ಮಾಡಿದ್ದಾರೆ.

   ಇನ್ನು ರಾತ್ರಿ ಹತ್ತು ಗಂಟೆ ನಂತರ ಬೆಂಗಳೂರಿನಲ್ಲಿರುವ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತದೆ. ಕರೋನಾ ಸೋಂಕು ಅರಡುವಿಕೆಗೂ, ಮೇಲ್ಸೇತುವೆ ಮುಚ್ಚುವುದಕ್ಕೂ ಏನು ಸಂಬಂಧ ಅನ್ನೋದು ಈವರೆಗೂ ಗೊತ್ತಾಗಿಲ್ಲ. ಈ ಹಿಂದೆಯೂ ಕರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ಮೇಲ್ಸೇತುವೆಗಳ ಮೇಲಿನ ವಾಹನ ಪ್ರಯಾಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ರಾತ್ರಿ ಹತ್ತು ಗಂಟೆ ನಂತರ ಮೇಲ್ಸೇತುವೆಗಳ ಮೇಲಿನ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ರಾತ್ರಿವೇಳೆ ಕೊರೋನಾ ಸೋಂಕು ಮೇಲ್ಸೇತುವೆ ಮೇಲೆ ಇರುತ್ತದೆಯೇ ? ಯಾವ ಮಾನದಂಡ ಇಟ್ಟುಕೊಂಡು ಮೇಲ್ಸೇತುವೆಗಳನ್ನು ಸ್ಥಗಿಗತೊಳಿಸುತ್ತಿದ್ದಾರೆ ಎಂಬುದಕ್ಕೆ ಬಿಬಿಎಂಪಿ ಅಧಿಕಾರಿಗಳ ಬಳಿಯಾಗಲೀ, ಪೊಲೀಸರ ಬಳಿಯಾಗಲೀ ಉತ್ತರವಿಲ್ಲ. ನೈಟ್ ಕರ್ಫ್ಯೂ ಮಾಡುವುದರಿಂದ ಕೊರೋನಾ ನಿಯಂತ್ರಣಕ್ಕೆ ಬರಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

   ಪೊಲೀಸ್ ಆಯುಕ್ತರ ಸಭೆ : ನೈಟ್ ಕರ್ಪ್ಯೂ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ರಾತ್ರಿ ಹತ್ತು ಗಂಟೆ ನಂತರ ಅನಾವಶ್ಯಕವಾಗಿ ಓಡಾಡುವರ ವಿರುದ್ಧ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತದೆ. ಇನ್ನೂ ಕೆಲಸ ಮಾಡುವ ವರ್ಗ, ತುರ್ತು ಸೇವೆ ವರ್ಗ, ರಾತ್ರಿ ಪಾಳಿ ಕೆಲಸ ಮಾಡುವರ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಅನಾವಶ್ಯಕವಾಗಿ ಓಡಾಡುವರ ವಿರುದ್ಧ ಕೇಸು ದಾಖಲಿಸುವ ಜತೆಗೆ ವಾಹನ ಜಪ್ತಿ, ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರು ಕೂಡ ಫೇಸ್ ಶೀಲ್ಡ್ ಕಡ್ಡಾಯ ಧರಿಸಬೇಕು. ವೈಧ್ಯಕೀಯ ಮತ್ತು ತುರ್ತು ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ ಜನರು ಬೆಂಗಳೂರು ತೊರೆಯಲು ಮುಂದಾದರೂ ಬಸ್ ಗಳು ಇಲ್ಲದೇ ಪರದಾಡುವಂತಾಗಿದೆ.

   English summary
   Corona Curfew in Bengaluru: Only Essential services allowed to operate only during the night curfew.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X