ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜೋಕೆ ಸರಗಳ್ಳರಿದ್ದಾರೆ ಜೋಕೆ' ಪೇದೆಯ ಯೂಟ್ಯೂಬ್ ಸಾಂಗ್‌ ವೈರಲ್‌

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 18: ನಗರದಲ್ಲಿ ಹೆಚ್ಚಾಗಿರುವ ಸರಗಳ್ಳರ ಹಾವಳಿ ತಡೆಯಲು ಬೈಯಪ್ಪನಹಳ್ಳಿ ಪೊಲೀಸ್‌ ಕಾನ್‌ಸ್ಟೇಬಲ್‌ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಬೈಯಪ್ಪನಹಳ್ಳಿ ಠಾಣೆ ಪೋಲೀಸ್ ಕಾನ್‌ಸ್ಟೇಬಲ್‌ ಸುಬ್ರಹ್ಮಣ್ಯ ಶಾನುಭೋಗ ಸರಗಳ್ಳರ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲು ತಾವು ಖುದ್ದು ಹಾಡೊಂದನ್ನು ರಚಿಸಿ ಹಾಡಿರುವುದಲ್ಲದೆ ಅದನ್ನು ಯುಟ್ಯೂಬ್ ನಲ್ಲಿ ಅಪ್ ಮಾಡಿದ್ದಾರೆ.

ಪೊಲೀಸಪ್ಪನ ಪತ್ನಿ ಕೊರಳಿಗೆ ಕೈ ಹಾಕಿದ ಸರಗಳ್ಳಪೊಲೀಸಪ್ಪನ ಪತ್ನಿ ಕೊರಳಿಗೆ ಕೈ ಹಾಕಿದ ಸರಗಳ್ಳ

ಅವರು ಹಾಡಿರುವ 'ಜೋಕೆ ಸರಗಳ್ಳರಿದ್ದಾರೆ ಜೋಕೆ' ಎನ್ನುವ ಹಾಡು ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗಿದ್ದು, ಎರಡನೇ ದಿನದಲ್ಲಿ ಸುಮಾರು 17 ಸಾವಿರ ಮಂದಿ ವೀಕ್ಷಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಸರಗಳ್ಳರ ಹಾವಳಿ ವಿಪರೀತವಾಗಿದೆ. ಇದು ಪೋಲೀಸ್ ಇಲಾಖೆಗೆ ಸಹ ತಲೆನೋವಾಗಿದ್ದು ಕಳ್ಳರ ಹಿಡಿಯಲು ಅವರು ನಾನಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದೊಂದು ನೂತನ ಪ್ರಯತ್ನವಾಗಿದೆ.

Cops song on chain snatching aware goes viral on YouTube

ಸುಬ್ರಹ್ಮಣ್ಯ ಈ ಹಾಡನ್ನು ತಾವೇ ರಚಿಸಿ ಆಗಸ್ಟ್ 15ರಂದು ಯೂಟ್ಯೂಬ್‌ನಲ್ಲಿ ಹಾಕಿದ್ದರು. ಅಂಗಡಿಗೆ ಹೋದ ಮಹಿಳೆಯರು, ವಿಹಾರಕ್ಕೆ ತೆರಳುವವರು, ಮನೆಮುಂದೆ ರಂಗೋಲಿ ಹಾಕುವವರು ಪ್ರಮುಖರು ಗುರಿಗಳು, ಪೊಲೀಸರು ಜಾಹೀರಾತು ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತೆಯೇ ಜನರು ತಮ್ಮ ಆಭರಣಗಳ ಪ್ರದರ್ಶನವನ್ನೂ ಕಡಿಮೆ ಮಾಡಿಲ್ಲ.

ಸರ ದೋಚಲು ಯತ್ನ: ನಿರಾಕರಿಸಿದವನ ಕಿವಿ ಕೊಯ್ದ ದುಷ್ಕರ್ಮಿಗಳುಸರ ದೋಚಲು ಯತ್ನ: ನಿರಾಕರಿಸಿದವನ ಕಿವಿ ಕೊಯ್ದ ದುಷ್ಕರ್ಮಿಗಳು

ಚಲನಚಿತ್ರ ಗೀತೆ ಸಂಯೋಕ ಬಿ.ಆರ್‌. ಹೇಮಂತ್‌ ಕುಮಾರ್‌ ಸಂಗೀತ ನೀಡಿದ್ದಾರೆ, ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆ ಸಿಬ್ಬಂದಿ ವೆಂಕಟೇಶ್‌, ರೇವಣ್ಣ, ಆಂಜಿನಪ್ಪ, ವಿಕ್ರಂ, ಮುರಳಿ, ಕುಮಾರ್ ಸರ್ಕಾರಿ ಶಾಲೆಯ ಮಕ್ಕಳು ಈ ಹಾಡಿಗೆ ನೃತ್ಯ ಮಾಡಿದ್ದಾರೆ.

English summary
Subrahmanya Shanubhog, a constable in Baiyappanahalli police station has uploaded a song in YouTube which creating awareness on chain snatching was gone viral and hundreds of citizens appreciated the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X