ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲವ್ವರ್ ಗಾಗಿ ವ್ಹೀಲಿಂಗ್ ಮಾಡಿ ಲಾಕ್ ಆದ ಪೊಲೀಸ್ ಮಗ !

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಯುವಕರು ಕ್ರೇಜ್ ಗಾಗಿ ವ್ಹೀಲಿಂಗ್ ಮಾಡುತ್ತಾರೆ. ಪೊಲೀಸರಿಗೆ ಸಿಕ್ಕಿ ಬಿದ್ದು ಒದೆ ಕೂಡ ತಿನ್ನುತ್ತಾರೆ. ಇಲ್ಲೊಬ್ಬ ಬೈಕ್ ರೇಸರ್ ಕಥೆಯೇ ಬೇರೆ. ಲವ್ವರ್ ನ್ನು ಮೆಚ್ಚಿಸಲು ವ್ಹೀಲಿಂಗ್ ಮಾಡಿ ಅದರ ವಿಡಿಯೋ ಹುಡುಗಿಗೆ ಕಳುಹಿಸಿ ದಿವಂಗತ ಪೊಲೀಸ್ ಅಧಿಕಾರಿಯ ಮಗ ಸಂಚಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಪೊಲೀಸ್ ಅಧಿಕಾರಿಯ ಪುತ್ರ ಲಾಕ್

ಪೊಲೀಸ್ ಅಧಿಕಾರಿಯ ಪುತ್ರ ಲಾಕ್

ಅಂದ ಹಾಗೆ ಆತನ ಹೆಸರು ನಿಖಿಲ್. ಈತ ಪೊಲೀಸ್ ಅಧಿಕಾರಿಯ ಮಗನಾಗಿದ್ದು, ಅವರು ತಂದೆ ಮೃತಪಟ್ಟಿದ್ದಾರೆ. ಡ್ಯೂಕ್ ಬೈಕ್ ನಲ್ಲಿ ಡೆಡ್ಲಿ ಸ್ಟಂಟ್ ಮಾಡಿರುವ ನಿಖಿಲ್ ಎರಡೂ ಕಾಲನ್ನು ಬೈಕ್ ಹ್ಯಾಂಡಲ್ ಮೇಲೆ ಇಟ್ಟು ವಾಹನ ಚಲಾಯಿಸಿದ್ದಾನೆ. ಬೈಕ್ ಸ್ಟಂಟ್ ಜತೆಗೆ ಮಚ್ಚು ಹಿಡಿದು ಸ್ಟಂಟ್ ಮಾಡಿದ್ದ ನಿಖಿಲ್ , ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಬಳಿ ವ್ಹೀಲಿಂಗ್ ಮಾಡಿದ್ದ. ಹುಡುಗಿಯನ್ನು ಮೆಚ್ಚಿಸಲು ಎಲ್ಲಾ ವಿಡಿಯೋಗಳನ್ನು ಸ್ನೇಹಿತೆಯ ಮೊಬೈಲ್ ಗೆ ರವಾನಿಸಿದ್ದ. ನಿಖಿಲ್ ನ ಸ್ಟಂಟ್ ನೋಡಿ ಆ ಹುಡುಗಿ ಕೂಡ ಫಿದಾ ಆಗಿದ್ದಾಳೆ. ಬೈಕ್ ಹಿಂಬದಿ ಕೂತರೂ ವ್ಹೀಲಿಂಗ್ ಮಾಡುವುದಾಗಿ ಸಂದೇಶ ರವಾನಿಸಿದ್ದಾನೆ.

ಬ್ಯಾಟರಾಯನಪುರ ಪೊಲೀಸರ ಕಾರ್ಯಾಚರಣೆ

ಬ್ಯಾಟರಾಯನಪುರ ಪೊಲೀಸರ ಕಾರ್ಯಾಚರಣೆ

ಇತ್ತೀಚೆಗೆ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆಯಲ್ಲಿ ವ್ಹೀಲಿಂಗ್ ಮಾಡಿ ಜನರಿಗೆ ಭೀತಿ ಹುಟ್ಟಿಸಿದ್ದ ನಿಖಿಲ್ ಮತ್ತು ಆತನ ಸ್ನೇಹಿತನ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಗಿರಿರಾಜ್ ಕೂಡಲೇ ಕಾರ್ಯ ಪ್ರವೃತ್ತರಾಗಿ ವ್ಹೀಲಿಂಗ್ ಮಾಡುತ್ತಿದ್ದ ನಿಖಿಲ್ ಮತ್ತು ಆತನ ಸ್ನೇಹಿತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಬೈಕ್ ಸ್ಟಂಟ್, ಹುಡುಗಿಯನ್ನು ಮೆಚ್ಚಿಸಲು ಮಾಡಿರುವ ಸ್ಟಂಟ್ ಕಥೆಗಳು ಹೊರ ಬಿದ್ದಿವೆ. ಇಬ್ಬರ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದಾರೆ. ಜನರಿಗೆ ಭಯ ಹುಟ್ಟಿಸುವ ಜತೆಗೆ ಅಪಾಯಕಾರಿ ವಾಹನ ಚಾಲನೆ ಮಾಡಿದ ಆರೋಪದಡಿ ಕೇಸು ದಾಖಲಿಸಲಾಗಿದೆ.

ಹೆಣ್ಣು ಮಕ್ಕಳ ಬಗ್ಗೆ ಹುಷಾರ್

ಹೆಣ್ಣು ಮಕ್ಕಳ ಬಗ್ಗೆ ಹುಷಾರ್

ರಾಜಧಾನಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಹೀಲಿಂಗ್ , ಸ್ಟಂಟ್ ಮಾಡುವುದು ಕ್ರೇಜ್. ಎಷ್ಟೋ ಮಂದಿ ಮುಗ್ಧ ಹುಡುಗರು ವ್ಹೀಲಿಂಗ್ ಮಾಡಲು ಹೋಗಿ ಕೈ ಕಾಲು ಮುರಿದು ಕೊಂಡಿದ್ದಾರೆ. ವ್ಹೀಲಿಂಗ್ ನಿಂದ ಅವಘಡ ಸಂಭವಿಸಿದರೆ ಆಗುವ ಅನಾಹುತಗಳ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಕೊಡಿಸುವ ಮುನ್ನ ಹತ್ತು ಬಾರಿ ಆಲೋಚಿಸಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ. ಹುಡುಗಿಯರನ್ನು ಮೆಚ್ಚಿಸಲು ವ್ಹೀಲಿಂಗ್ ಮಾಡುತ್ತಾರೆ. ಇನ್ನೂ ಕೆಲವು ಹುಡುಗರು ಹಿಂಬಂದಿ ಹುಡುಗಿಯರನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಾರೆ. ವ್ಹೀಲಿಂಗ್, ಸ್ಟಂಟ್ ವಿಡಿಯೋಗಳನ್ನು ಸ್ಟೇಟಸ್ ಗೆ ಹಾಕಿಕೊಂಡು ಹುಡುಗಿಯರ ಗಮನ ಸೆಳೆಯುವ ಪರಿಪಾಠವೂ ಇದೆ. ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಪೊಲೀಸರು.

Recommended Video

ಪ್ರತಿಭಟನೆ ತೀವ್ರಗೊಳಿಸಲು ಮುಂದಾದ ರೈತರು-ಇಂದಿನಿಂದ 27ರವರೆಗೆ ರೈತರಿಂದ ಸಾಲು-ಸಾಲು ಕಾರ್ಯಕ್ರಮ | Oneindia Kannada

ಸೋಂಪುರ ವ್ಹೀಲಿಂಗ್ ಜಂಕ್ಷನ್

ಇನ್ನು ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆ ಬೆಂಗಳೂರಿನ ಪಡ್ಡೆ ಹುಡುಗರಿಗೆ ವ್ಹೀಲಿಂಗ್ ಸ್ಪಾಟ್ ಆಗಿದೆ. ಸೋಂಪುರದಿಂದ ಮುಂದಿನ ಎರಡು ಮೂರು ಕಿ.ಮೀ. ಗೆ ಲಿಂಕ್ ರಸ್ತೆ ಅಂತ್ಯ ವಾಗುತ್ತದೆ. ಹೊಸ ಕೆರೆಹಳ್ಳಿ ಕಡೆಯಿಂದ ಬರುವ ವಾಹನಗಳು ಸೋಂಪುರ ಜಂಕ್ಷನ್ ಸಮೀಪ ತುಮಕೂರು ರಸ್ತೆ ಕಡೆ ಹೋಗುತ್ತವೆ. ಇಲ್ಲವೇ ಹೊಸೂರು ರಸ್ತೆ ಕಡೆ ಚಲಿಸುತ್ತವೆ. ಹೀಗಾಗಿ ಸೋಂಪುರದಿಂದ ಮುಂದಿನ ಲಿಂಕ್ ರಸ್ತೆಯಲ್ಲಿ ಯಾರೂ ವಾಹನ ಚಾಲನೆ ಮಾಡಲ್ಲ. ಹೀಗಾಗಿ ಇದನ್ನೇ ಹುಡುಗರು ವ್ಹೀಲಿಂಗ್ ಅಡ್ಡೆ ಮಾಡಿಕೊಂಡಿದ್ದಾರೆ. ಶನಿವಾರ, ಭಾನುವಾರ ಬಂದರೆ ಸಾಕು ಹುಡುಗಿಯರನ್ನು ಹಿಂಬದಿ ಕೂರಿಸಿಕೊಂಡು ವ್ಹೀಲಿಂಗ್ ಮಾಡತ್ತಾರೆ. ಕೆಲ ದಿನಗಳ ಹಿಂದೆ ನೈಸ್ ರಸ್ತೆಯಲ್ಲಿ ಮಾಡುವ ವ್ಹೀಲಿಂಗ್ ವಿರುದ್ಧವೇ ಪೊಲೀಸರು ಕಾರ್ಯಾಚರಣೆ ಮಾಡಿ ನಿಲ್ಲಿಸಿದ್ದರು.

English summary
Bengaluru : Cop Arrest late police officer son for doing wheelie in KR Market flyover road for lover. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X