ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವೀಂದ್ರ ಕಲಾಕ್ಷೇತ್ರ ಬಂದ್ ಆಗುತ್ತಾ? ಸಮಸ್ಯೆ ಏನು?

|
Google Oneindia Kannada News

ಬೆಂಗಳೂರು, ಮೇ 15: ರವೀಂದ್ರ ಕಲಾಕ್ಷೇತ್ರ ಬಂದ್ ಆಗಲಿದೆಯೇ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ ಅದಕ್ಕೆ ಕಾರಣವೂ ಇದೆ. ರವೀಂದ್ರ ಕಲಾಕ್ಷೇತ್ರ ಹಾಗೂ ಕನ್ನಡ ಭವನ ನವೀಕರಣ ಕಾರ್ಯ ಮುಗಿದು ಎರಡು ವರ್ಷವಾದರೂ ಗುತ್ತಿಗೆದಾರರಿಗೆ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ನೊಂದ ಗುತ್ತಿಗೆದಾರರು ನಮಗೆ ಬಾಕಿ ಹಣ ಕೊಡಿ ಇಲ್ಲವೇ ಕಲಾಕ್ಷೇತ್ರ,ನಯನ ರಂಗ ಮಂದಿರಕ್ಕೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನ

ರವೀಂದ್ರ ಕಲಾ ಕ್ಷೇತ್ರ ನ್ಯೂನತೆಗಳನ್ನು ಸರಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಜ್ಞರ ಸಮಿತಿ ರಚಿಸಿತು. ಸಮಿತಿ ಸಲಹೆ ಮೇರೆಗೆ 2016-17ರಲ್ಲಿ ಕಲಾಕ್ಷೇತ್ರದಲ್ಲಿ ಹಾಳಾದ ಆಸನಗಳನ್ನು ಸರಿಪಡಿಸುವುದು, ಗ್ರೀನ್ ರೂಮ್ ಮತ್ತು ವೇದಿಕೆಗಳಲ್ಲಿನ ಸ್ಕ್ರೀನ್ ಬದಲಾವಣೆ, ವೇದಿಕೆಯ ಸೈಡ್‌ವಿಂಗ್ಸ್‌ಗಳನ್ನು ದುರಸ್ತಿಪಡಿಸುವುದು, ಶೌಚಾಲಯ ಕಾಮಗಾರಿ, ಸುಣ್ಣ-ಬಣ್ಣ ಇದಷ್ಟು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಸಿದೆ.

Contract workers warned to closed down Ravindra Kalakshetra

ಕನ್ನಡ ಭವನದ ಅನುದಾನಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. 2018ರಲ್ಲಿ ಕನ್ನಡ ಭವನ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ನಯನ ಸಭಾಂಗಣದಲ್ಲಿ ಬಾವಿಯಿದ್ದು, ಮಳೆ ಬಂದರೆ ನೀರು ಉಕ್ಕಿ ಹರಿದು ಸಭಾಂಗಣದೊಳಗೆ ಬರುತ್ತಿತ್ತು. ಅದನ್ನೂ ಕೂಡ ದುರಸ್ತಿಗೊಳಿಸಲಾಗಿದೆ. ಇಷ್ಟೆಲ್ಲಾ ಕಾಮಗಾರಿ ಮಾಡಿದರೂ ಕೂಡ ಹಣ ಮಾತ್ರ ಇನ್ನೂ ಬಿಡುಗಡೆ ಮಾಡಿಲ್ಲ. ಶೀಘ್ರಅನುದಾನ ಹಣ ಬಿಡುಗಡೆ ಮಾಡದಿದ್ದರೆ ರವೀಂದ್ರ ಕಲಾಕ್ಷೇತ್ರಕ್ಕೆ ಬೀಗ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

English summary
Civil contractors warned tha state government to closed down the Ravindra Kalakshetra if Not paying money of Renovation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X