ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಿಢೀರ್ ದಾಳಿ, ಏನೇನು ಸಿಕ್ತು?

|
Google Oneindia Kannada News

ಬೆಂಗಳೂರು, ಏ.10: ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಸುಮಾರು 300ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆದಿದೆ. ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ಏಳು ಡಿಸಿಪಿಗಳು ಸೇರಿ ದಾಳಿಯಲ್ಲಿ ಒಟ್ಟು 300 ಪೊಲೀಸ್ ಸಿಬ್ಬಂದಿ ಕೈದಿಗಳ ತಪಾಸಣೆ ಮಾಡಲಾಗಿದ್ದು, ಈ ವೇಳೆ ಕೈದಿಗಳ ಬ್ಯಾರಕ್‍ನಲ್ಲಿ 250 ಗ್ರಾಂ ಗಾಂಜಾ, 70 ಮೊಬೈಲ್, ಸಿಮ್ ಕಾರ್ಡ್ ಗಳು ಸೇರಿ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

ಅಷ್ಟೇ ಅಲ್ಲದೇ 20 ಸಾವಿರ ನಗದು, ಚಾಕು, ಕಟರ್ ಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Contraband, mobile phones recovered from jail inmates

ಶ್ವಾನದಳ, ಮೆಟಲ್ ಡಿಟೆಕ್ಟರ್ ದಳ ಸಮೇತ ದಾಳಿ ನಡೆಸಲಾಗಿದೆ. ಕುಖ್ಯಾತ ರೌಡಿ ಶೀಟರ್‌ಗಳು, ಸೈಕಲ್ ರವಿ, ರೌಡಿ ಮುಲಾಮ ಸೇರಿ ರಾಜಕೀಯವಾಗಿ ಪ್ರಭಾವಿಗಳಿರುವ ಕೆಲಸ ವಂಚಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ

ಇತ್ತೀಚೆಗೆ ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಕ್ಯಾಟ್ ರಾಜ, ಹೇಮಂತ್ ಸೇರಿ ಹಲವು ಕುಖ್ಯಾತ ರೌಡಿಗಳು ಜೈಲು ಸೇರಿದ್ದಾರೆ.

ಮಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ: ಮೂವರ ಬಂಧನ ಮಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ: ಮೂವರ ಬಂಧನ

ಜೈಲಿನ ಪ್ರತಿ ಬ್ಯಾರಕ್‌ಅನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಸಿಮ್ ಕಾರ್ಡ್, ಚಾಕುಗಳು ಹಾಗೂ ಕಟ್ಟಿಂಗ್ ಪ್ಲೇಯರ್ ಪತ್ತೆಯಾಗಿವೆ. ಚಾಕು ಕಟ್ಟಿಂಗ್ ಪ್ಲೇಯರ್ ಜೈಲಿನೊಳಗೆ ಹೇಗೆ ಬಂತು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

English summary
As many as 300 policemen, led by six Deputy Commissioners of Police raided the central prison at Parappana Agarahara and recovered contraband, mobile phones, SIM cards, pen drives, and Rs. 14,000 in cash from the inmates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X