ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನವ ಕಳ್ಳಸಾಗಣೆ: ಜರ್ಮಿನಿಗೆ ತೆರಳುವ ನರ್ಸ್‌ಗಳ ಕೈಲಿದ್ದಿದ್ದು ಅಮೆರಿಕ ವೀಸಾ

|
Google Oneindia Kannada News

ಬೆಂಗಳೂರು, ನವೆಂಬರ್ 30: ಆರ್ಮೇನಿಯಾಕ್ಕೆ ಮಾನವ ಕಳ್ಳಾಸಾಗಣೆ ಮೂಲಕ ರವಾನೆಯಾಗುತ್ತಿದ್ದ 32 ನರ್ಸ್‌ಗಳನ್ನು ಪೊಲೀಸರು ರಕ್ಷಣೆ ಮಾಡಿದ್ದರು ಅವರೆಲ್ಲರೂ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಆರೋಪಿ ಟೋನಿ ಟಾಮ್ ಎಂಬಾತನನ್ನು ಜುಡಿಶಿಯಲ್ ಕಸ್ಟಡಿಗೆ ಒಪ್ಪಿಸಲಾಗಿದೆ. ನರ್ಸ್‌ಗಳೆಲ್ಲರೂ ಕೇರಳ ಮೂಲದವರೆಂದು ತಿಳಿದುಬಂದಿದೆ. ಅಧಿಕಾರಿಗಳು ಪ್ರಶ್ನಿಸಿದಾಗ ಜರ್ಮನ್ ಕಲಿಕೆಯ ಅಲ್ಪಾವಧಿ ಕೋರ್ಸ್‌ಗಾಗಿ ಅವರನ್ನು ಕರೆದೊಯ್ಯುತ್ತಿದ್ದೇನೆ, ಈ ಕುರಿತು ನರ್ಸ್‌ಗಳಿಂದ ಹೇಳಿಕೆಯನ್ನು ದಾಖಲಿಸಿಕೊಂಡು ಗುರುವಾರ ಸಂಜೆ ಅವರನ್ನು ಮನೆಗಳಿಗೆ ಕಳುಹಿಸಕೊಡಲಾಗಿದೆ.

ಮಾನವ ಕಳ್ಳಸಾಗಣೆ: ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ 32 ನರ್ಸ್‌ಗಳ ರಕ್ಷಣೆ ಮಾನವ ಕಳ್ಳಸಾಗಣೆ: ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ 32 ನರ್ಸ್‌ಗಳ ರಕ್ಷಣೆ

ಜರ್ಮನಿಯಲ್ಲಿ ಕಲಿಕೆಗೆ ತೆರಳುತ್ತಿದ್ದಾರೆ ಎಂದು ಟಾಮಿ ಹೇಳಿದ್ದಾರೆ ಆದರೆ ನರ್ಸ್‌ಗಳ ಕೈಯಲ್ಲಿದ್ದಿದ್ದು ಅಮೆರಿಕ ವೀಸಾ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವಿವರ: ಟಾಮ್ 32 ನರ್ಸ್‌ಗಳೊಂದಿಗೆ ರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ, ಮಂಗಳವಾರ ಮುಂಜಾನೆ 4 ಗಂಟೆಗೆ ಆರ್ಮೇನಿಯಾ ತೆರಳುವ ವಿಮಾನದಲ್ಲಿ ಕೊರೆದೊಯ್ಯಲು ಯೋಜನೆ ರೂಪಿಸಿದ್ದ ವಿಶ್ವವಿದ್ಯಾಲಯದಲ್ಲಿ ಆ ಕೋರ್ಸ್ ಇರುವ ಬಗ್ಗೆ ಇಮಿಗ್ರೇಶನ್ ಅಧಿಕಾರಿಗಳಿಗೆ ಸಂದೇಹ ಉಂಟಾಗಿ ತಕ್ಷಣ ಬಿಐಎಎಲ್ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ.

Consultant sent to jail, nursing graduates return home

ಮಂಗಳೂರಿನಲ್ಲಿ ನರ್ಸಿಂಗ್ ಪದವಿ ಅಧ್ಯಯನ ಮಾಡಿದ ಕೇರಳ ಮೂಲದ 32 ನರ್ಸ್ ಗಳನ್ನು ರಕ್ಷಿಸಲಾಗಿದೆ. ಯುನಿವರ್ಸಿಟಿ ಆಫ್ ಟ್ರಡಿಶನಲ್ ಆಫ್ ಆರ್ಮೇನಿಯಾದಲ್ಲಿ ಜರ್ಮನ್ ಕಲಿಕೆಯ ಅಲ್ಪಾವಧಿ ಕೋರ್ಸ್‌ಗೆ ಕರೆದೊಯ್ಯುವ ನೆಪದಲ್ಲಿ ಇವರ ಮಾರಾಟಕ್ಕೆ ಜಾಲ ಹೆಣೆಯಲಾಗಿತ್ತು.

English summary
Tony Tom, 36, who was caught by immigration officials at Kempegowda International Airport in an alleged human trafficking case, was remanded in judicial custody on Thursday. All the 32 women nursing graduates, being taken to Armenia before they were rescued, were sent back to their homes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X