ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತ ಬಿಎಂಟಿಸಿ ಪಾಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 28 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತವಾಗಿ ಬಸ್ ಪಾಸನ್ನು ವಿತರಣೆ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದೆ.

ಬಿಎಂಟಿಸಿ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಾರ್ಷಿಕ ಉಚಿತ ಬಸ್ ಪಾಸನ್ನು ನೀಡಲಾಗುತ್ತಿದೆ. ಈಗ ಇತರ ನಿರ್ಮಾಣ ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತ ಪಾಸು ನೀಡಲು ಯೋಜನೆ ಸಿದ್ಧವಾಗಿದೆ.

ಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶಬಿಎಂಟಿಸಿ ಬಸ್ ಬಳಕೆದಾರರು ಹೊರಗೆಡವಿರುವ ಆಸಕ್ತಿಕರ ಅಂಕಿ-ಅಂಶ

ಕಲ್ಯಾಣ ಕಾರ್ಮಿಕ ಮಂಡಳಿಯಲ್ಲಿ 21.78 ಲಕ್ಷ ನೋಂದಾಯಿತ ಕಾರ್ಮಿಕರು ಇದ್ದಾರೆ. ಪ್ರಸ್ತುತ ಬಿಎಂಟಿಸಿ ಉಚಿತ ಬಸ್ ಪಾಸು ಸೌಲಭ್ಯವನ್ನು 5,800 ಜನರು ಮಾತ್ರ ಪಡೆದಿದ್ದಾರೆ. ಪ್ರತಿ ತಿಂಗಳು 1 ಸಾವಿರದಷ್ಟು ಕಾರ್ಮಿಕರು ಹೊಸದಾಗಿ ಪಾಸ್ ಸೌಲಭ್ಯಕ್ಕೆ ಅರ್ಜಿಗಳನ್ನು ಹಾಕುತ್ತಿದ್ದಾರೆ.

ಜನರ ಜೇಬಿಗೆ ಕತ್ತರಿ; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆಜನರ ಜೇಬಿಗೆ ಕತ್ತರಿ; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆ

Construction Garments Workers May Get BMTC Free Bus

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಈ ಕುರಿತು ಮಾಹಿತಿ ನೀಡಿದ್ದು, "ಕಟ್ಟಡ ಕಾರ್ಮಿಕರ ಕುಟುಂಬದವರಿಗೆ ಮತ್ತು ಗಾರ್ಮೆಂಟ್ಸ್ ಮಹಿಳಾ ನೌಕರರಿಗೆ ಪಾಸು ನೀಡುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ" ಎಂದು ಹೇಳಿದ್ದಾರೆ.

ಬೆಂಗಳೂರಿನಿಂದ ಅನಂತಪುರಕ್ಕೆ ಫ್ಲೈ ಬಸ್ ಸೇವೆ ಆರಂಭ ಬೆಂಗಳೂರಿನಿಂದ ಅನಂತಪುರಕ್ಕೆ ಫ್ಲೈ ಬಸ್ ಸೇವೆ ಆರಂಭ

ಬಿಎಂಟಿಸಿ ನೀಡುವ ಪಾಸು ಪಡೆದವರು ನಗರದ ಯಾವುದೇ ಭಾಗಕ್ಕೆ ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಬುದು. ಈ ಸೌಲಭ್ಯವನ್ನು ಕಾರ್ಮಿಕರ ಕುಟುಂಬ ಸದಸ್ಯರಿಗೂ ವಿಸ್ತರಿಸುವ ಸಂಬಂಧ ಬಿಎಂಟಿಸಿ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.

ಕಾರ್ಮಿಕ ಇಲಾಖೆ ಸಹ ಬಿಎಂಟಿಸಿಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಮಾರ್ಚ್ 5ರಂದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದು, ಆಗ ಪಾಸುಗಳ ವಿಚಾರ ಘೋಷಣೆ ಮಾಡುವ ನಿರೀಕ್ಷೆ ಇದೆ.

ಪಾಸುಗಳ ಲೆಕ್ಕಾಚಾರ : ನೌಕರರು ಮತ್ತು ಗಾರ್ಮೆಂಟ್ಸ್‌ಗಳ ಪಾಲುದಾರಿಕೆಯಲ್ಲಿ ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ. ನೌಕರರು 100 ರೂ. ಪಾವತಿ ಮಾಡಬೇಕು. ಗಾರ್ಮೆಂಟ್ಸ್‌ನವರು 600 ರೂ. ಪಾವತಿ ಮಾಡಿದರೆ 1050 ರೂ. ಮೊತ್ತದ ಪಾಸು ವಿತರಣೆ ಮಾಡಲಾಗುತ್ತದೆ.

English summary
Construction and garments workers in Bengaluru will get BMTC free pass. Chief Minister B. S. Yediyurappa may announce this in the budget 2020-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X