ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕರ ವಿರುದ್ಧ ದೂರು: ಪೇದೆಗಳ ಎತ್ತಂಗಡಿ

By Ashwath
|
Google Oneindia Kannada News

City Police
ಬೆಂಗಳೂರು, ಜು.8: ನಗರದ ಸ್ಕೈಬಾರ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕಾಶಪ್ಪನವರ್‌ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದ ಕಬ್ಬನ್‌ ಪಾರ್ಕ್‌ ಠಾಣೆ ಇಬ್ಬರು ಕಾನ್‌ಸ್ಟೇಬಲ್‌‌ ವರ್ಗಾವಣೆಗೊಂಡಿದ್ದಾರೆ.

ಕಿರಣ್‌ಕುಮಾರ್‌ ಹೆಬ್ಬಾಳ ಸಂಚಾರ ಠಾಣೆ ಮತ್ತು ಪ್ರಶಾಂತ್‌ ನಾಯಕ್‌ ವೈಯಾಲಿಕಾವಲ್‌ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದಾರೆ.[ಸಿಸಿಬಿ ಪೊಲೀಸರ ಮುಂದೆ ಕಾಶಪ್ಪನವರ್ ಹೇಳಿದ್ದೇನು?]

ಇತ್ತೀಚೆಗೆ ಪೊಲೀಸ್‌ ಇಲಾಖೆ ಮಟ್ಟದಲ್ಲಿ ನಡೆದ ಸಾಮೂಹಿಕ ವರ್ಗಾವಣೆ ವೇಳೆ ಕಬ್ಬನ್‌ ಪಾರ್ಕ್‌ ಠಾಣೆಯಿಂದ ಕಿರಣ್‌ ಕುಮಾರ್‌ ಹಾಗೂ ಪ್ರಶಾಂತ್‌ ನಾಯಕ್‌ ಬೇರೆ ಠಾಣೆ ವರ್ಗಾವಣೆಗೊಂಡಿದ್ದರು. ಆದರೆ ಠಾಣೆಯಲ್ಲಿ ಕಾರ್ಯದೊತ್ತಡ ಇದೆ ಎಂಬ ಕಾರಣಕ್ಕೆ ಕಬ್ಬನ್‌ಪಾರ್ಕ್‌ ಠಾಣೆಯಿಂದ ಕಳುಹಿಸಿಕೊಟ್ಟಿರಲಿಲ್ಲ. ಇದೀಗ ವಿಚಾರಣೆ ನಡೆಯುತ್ತಿರುವ ವೇಳೆಗೆ ಇಬ್ಬರನ್ನೂ ರಿಲೀವ್‌ ಮಾಡಲಾಗಿದೆ ಎಂದು ಪೊಲೀಸ್‌ ಇಲಾಖೆ ಹೇಳಿಕೊಂಡಿದೆ.

ಈ ನಡುವೆ ಸ್ಕೈಬಾರ್‌ ಗಲಾಟೆ ನಡೆದಿದ್ದು, ಇಬ್ಬರ ಹೇಳಿಕೆಯನ್ನು ದಾಖಲಿಸಿ ಕಬ್ಬನ್‌ ಪಾರ್ಕ್‌ ಠಾಣೆಯಿಂದ ಅವರನ್ನು ರಿಲೀವ್‌ ಮಾಡಲಾಗಿದೆ. ಶಾಸಕರ ಹಲ್ಲೆ ಪ್ರಕರಣಕ್ಕೂ ವರ್ಗಾವಣೆಗೂ ಸಂಬಂಧವಿಲ್ಲ ಎಂದು ಇಲಾಖೆ ಹೇಳಿದೆ.[ಕೂಡಲ ಸಂಗಮನ ಆಣೆ ತಪ್ಪೇ ಮಾಡಿಲ್ಲ:ಕಾಶಪ್ಪನವರ್‌]

ಶಾಸಕರ ಮೇಲೆ ಹಲ್ಲೆ ನಡೆಸಿದ್ದ ಕಾರಣಕ್ಕೆ ವರ್ಗಾವಣೆಯಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್‌ ಆಯುಕ್ತ ರಾಘವೇಂದ್ರ ಔರಾದ್ಕರ್ "ಇದು ಅಸಂಬದ್ಧ ಸುದ್ದಿ. ನಾನು ಯಾವುದೇ ಕಾರಣಕ್ಕೂ ವರ್ಗಾವಣೆ ಆದೇಶ ನೀಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

English summary
City Police Commissioner Raghavendra Auradkar dismissed reports that he had transferred the two constables who had lodged a complaint against Kashappanavar. “This is nonsense. I have not transferred them,” Auradkar said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X