ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿಗೆ ಬಿದ್ದು ಬೆಂದ ಬಾಲಕಿ, ಯಾರು ಹೊಣೆ?

|
Google Oneindia Kannada News

ಬೆಂಗಳೂರು, ಮಾರ್ಚ್ 26: ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿಗೆ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೇದೆ ಲೋಕೇಶಪ್ಪ ಪುತ್ರಿ ಹರ್ಷಾಲಿ (4) ಮೃತ ಬಾಲಕಿ.ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಬಿದ್ದಿರುವ ಒಣ ಮರದ ಬುಡಕ್ಕೆ , ರೆಂಬೆಗಳಿಗೆ ಬೆಂಕಿ ಹಾಕಲಾಗಿತ್ತು.

ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್! ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!

ಆ ಸ್ಥಳದಲ್ಲಿ ಮಕ್ಕಳು ಆಟವಾಡುವಾಗ ಹರ್ಷಾಲಿ ಮೊದಲು ಚೆಂಡು ತೆಗೆದುಕೊಂಡಿದ್ದಳು. ಬಾಲಕ ಅವಳಿಂದ ಚೆಂಡು ಕಿತ್ತುಕೊಳ್ಳಲು ಹೋಗಿ ಅವಳನ್ನು ತಳ್ಳಿದ್ದು, ಬೆಂಕಿಗೆ ಬಿದ್ದಿದ್ದಾಳೆ. ಹರ್ಷಾಲಿ ಮೈ, ಕೈ, ಎದೆ, ಬೆನ್ನಿನ ಭಾಗ ಸಂಪೂರ್ಣ ಸುಟ್ಟು ಹೋಗಿತ್ತು ಇದನ್ನು ಕಂಡು ಭಯಗೊಂಡ ಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Constable’s daughter falls on pile of burning garbage

ಲೋಕೇಶಪ್ಪ ಕಳೆದ 10 ವರ್ಷಗಳಿಂದ ಶಿವಾಜಿನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಕುಟುಂಬದವರ ಜತೆ ವಾಸಿಸುತ್ತಿದ್ದಾರೆ. ಒಣಗಿದ ಮರಕ್ಕೆ ಬೆಂಕಿ ಹಚ್ಚಿದವರು ಯಾರೆಂದು ಯಾರಿಗೂ ತಿಳಿದಿಲ್ಲ. ಮಗಳ ಸಾವಿನಿಂದ ನೊಂದ ಪೇದೆ ಈ ಪ್ರಕರಣದ ಕುರಿತು ಬರೆದಿರುವ ಪತ್ರ ಎಲ್ಲೆಡೆ ಹರಿದಾಡುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಾಜಿನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್​ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪ್ರಕರಣದ ಬಗ್ಗೆ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

English summary
A three-year-old girl who fell into a burning pile of garbage while playing at the Shivajinagar police quarters, succumbed to burns on March 13. The deceased, Harshali, is the daughter of Constable Lokeshappa, who is attached to Cubbon Park traffic police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X