ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಗ್ಲ ಮಾಧ್ಯಮ ಅನುಮತಿಗೆ ಕನ್ನಡ ಶಾಲೆಗಳ ಪಟ್ಟು

By Kiran B Hegde
|
Google Oneindia Kannada News

ಬೆಂಗಳೂರು, ನ. 28: ಆಂಗ್ಲ ಮಾಧ್ಯಮದಲ್ಲಿ ಪಾಠ ಹೇಳಲು ಅನುಮತಿ ಕೋರಿರುವ ಖಾಸಗಿ ಶಾಲೆಗಳ ಸಂಘಟನೆಯ ಅರ್ಜಿಯನ್ನು ಸ್ವೀಕರಿಸುವಂತೆ ಹೈ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳೆಂದು ಪರಿಗಣಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಖಾಸಗಿ ಶಾಲೆಗಳು ಸಜ್ಜಾಗಿವೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಯ್ಸಿನ್, "ಪ್ರತಿ ಶಾಲೆಯೂ ಪ್ರತ್ಯೇಕ ಮನವಿ ಸಲ್ಲಿಸಬೇಕು. ಅವುಗಳ ಕುರಿತು ಸರ್ಕಾರ ಪರಾಮರ್ಶೆ ನಡೆಸಲಿದೆ" ಎಂದು ತಿಳಿಸಿದ್ದಾರೆ.

ಸುಪ್ರೀಂ ಮೊರೆಗೆ ಸರ್ಕಾರ ಸಜ್ಜು: ಕೆಯುಎಸ್ಎಂಎ ಸಲ್ಲಿಸಿರುವ ಮನವಿಯು 1994ರಲ್ಲಿ ಸಲ್ಲಿಸಿರುವ ರಾಜ್ಯದ ಭಾಷಾ ನೀತಿಯನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಹೈ ಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.

english

ಪ್ರಕರಣವೇನು?: ಕನ್ನಡ ಮಾಧ್ಯಮದಲ್ಲಿ ಮಾತ್ರ ಪಾಠ ಹೇಳಲು ಅನುಮತಿ ಪಡೆದಿದ್ದ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಸಂಘ (ಕೆಯುಎಸ್ಎಂಎ) ವು ಸುಮಾರು 1,300ಕ್ಕೂ ಹೆಚ್ಚು ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠ ಹೇಳಲು ಅನುಮತಿ ನೀಡಬೇಕೆಂದು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಈ ಶಾಲೆಗಳು ಕೇವಲ ಕನ್ನಡ ಮಾಧ್ಯಮದಲ್ಲಿ ಮಾತ್ರ ಪಾಠ ಹೇಳಲು ಅನುಮತಿ ಪಡೆದಿದ್ದವು ಇದರಿಂದ ಅನುಮತಿ ನೀಡಲು ಸರ್ಕಾರ ತಿರಸ್ಕರಿಸಿತ್ತು.

ಈಗ ಹೈ ಕೋರ್ಟ್‌ನಿಂದಲೇ ಮನವಿ ಸ್ವೀಕರಿಸಲು ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಮತ್ತೆ ಮನವಿ ಸಲ್ಲಿಸಲು ಕೆಯುಎಸ್ಎಂಎ ತಯಾರಿ ನಡೆಸಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೆಯುಎಸ್ಎಂಎ ಪರ ವಕೀಲ ಕೆ.ವಿ. ಧನಂಜಯ, "ಇದೇ ತಿಂಗಳ ಕೊನೆಯಲ್ಲಿ ನಾವು ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಒಂದು ವೇಳೆ ಸರ್ಕಾರ ಮತ್ತೆ ತಿರಸ್ಕರಿಸಿದರೆ ನ್ಯಾಯಾಂಗ ನಿಂದನೆ ದೂರು ದಾಖಲಿಸುತ್ತೇವೆ" ಎಂದು ತಿಳಿಸಿದ್ದಾರೆ.

English summary
Private schools are set to put pressure on state government to consider Kannada medium schools as English medium schools. As high court ordered to state government to receive application from private schools for English medium teaching, state government decides to go supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X