ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಪಿ. ನಂಜುಂಡಿ ಹೆಸರಲ್ಲಿ ನಕಲಿ ದಾಖಲೆ: 7 ತಿಂಗಳ ಸರ್ಕಾರಿ ಸಂಬಳ ಪಡೆದ ವಂಚಕ

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ತಾನು ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಅವರ ನಕಲು ಸಹಿ ಮತ್ತು ಲೆಟರ್ ಹೆಡ್ ಬಳಸಿಕೊಂಡು ವಂಚಕನೊಬ್ಬ ಸರ್ಕಾರದಿಂದ ಸಂಬಳ ಪಡೆದುಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಕುಣಿಗಲ್ ತಾಲ್ಲೂಕಿನ ಸಂತೆಮಾತೂರಿನ ಎಸ್.ಕೆ. ರವಿಕುಮಾರ್ ಎಂಬುವವರ ವಿರುದ್ಧ ಸ್ವತಃ ಕೆ.ಪಿ. ನಂಜುಂಡಿ ಬುಧವಾರ ದೂರು ನೀಡಿದ್ದಾರೆ. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕೆಲಸ ಗಿಟ್ಟಿಸಿದ್ದ ಬಿಎಂಟಿಸಿ ಡ್ರೈವರ್‌ಗೆ ಜೈಲು!ವಿಧಾನಸೌಧದಲ್ಲಿ ಕೆಲಸ ಗಿಟ್ಟಿಸಿದ್ದ ಬಿಎಂಟಿಸಿ ಡ್ರೈವರ್‌ಗೆ ಜೈಲು!

ನಂಜುಂಡಿ ಅವರ ಆಪ್ತ ಸಹಾಯಕ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ರವಿಕುಮಾರ್, ಸರ್ಕಾರದಿಂದ ಏಳು ತಿಂಗಳು ಸಂಬಳವನ್ನು ಸಹ ಪಡೆದುಕೊಂಡಿದ್ದರು. ನಂಜುಂಡಿ ಅವರ ಸಹಿಯನ್ನು ನಕಲು ಮಾಡಿದ್ದ ರವಿಕುಮಾರ್, ಅದನ್ನು ಬಳಸಿಕೊಂಡು ಲೆಟರ್ ಹೆಡ್ ಕೂಡ ಸೃಷ್ಟಿಸಿದ್ದಾನೆ. ನಂತರ ನಂಜುಂಡಿ ಅವರ ಆಪ್ತ ಸಹಾಯಕನನ್ನಾಗಿ ನೇಮಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಪತ್ರ ಬರೆದಿದ್ದಾರೆ.

Conman Forges MLC KP Nanjundi Signature Got 7 Months Government Salary

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಕೆಲಸ ಮಾಡಿರುವುದಾಗಿ ನಕಲಿ ಹಾಜರಾತಿ ಪತ್ರ ಸೃಷ್ಟಿಸಿದ್ದ ರವಿಕುಮಾರ್ ಬ್ಯಾಂಕ್ ಖಾತೆಗೆ ಏಳು ತಿಂಗಳ ಸಂಬಳವಾಗಿ ಸುಮಾರು 2.1 ಲಕ್ಷ ರೂ. ಹಣವನ್ನು ಅಧಿಕಾರಿಗಳು ವರ್ಗಾಯಿಸಿದ್ದಾರೆ.

ನಂಜುಂಡಿ ಅವರು ಇತ್ತೀಚೆಗಷ್ಟೇ ಮಹಾಂತೇಶ್ ಎಂಬುವವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು. ಮಹಾಂತೇಶ್ ತಮ್ಮ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ವಿಕಾಸ ಸೌಧಕ್ಕೆ ತೆರಳಿದ್ದಾಗ, ಈಗಾಗಲೇ ಒಬ್ಬರು ನಂಜುಂಡಿ ಅವರ ಆಪ್ತ ಸಹಾಯಕನೆಂದು ಗುರುತಿನ ಚೀಟಿ ಹಾಗೂ ಪಾಸ್ ಪಡೆದುಕೊಂಡಿದ್ದು, ಸಂಬಳವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದನ್ನು ನಂಜುಂಡಿ ಅವರಿಗೆ ತಿಳಿಸಿದಾಗ ವಂಚಕನ ಕೃತ್ಯ ಬೆಳಕಿಗೆ ಬಂದಿದೆ.

"ಮೂಡ"ಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರ ಪಡೆದಿರುವ ಸೈಟುಗಳೆಷ್ಟು ಗೊತ್ತೆ?

'ರವಿಕುಮಾರ್ ಹೇಗೆ ನನ್ನ ಹೆಸರು ಮತ್ತು ದಾಖಲೆಗಳನ್ನು ನಕಲು ಮಾಡಿ ಸಂಬಳ ಪಡೆದಿದ್ದಾನೋ ನನಗೆ ಗೊತ್ತಿಲ್ಲ. ಒಳಗಿನವರೇ ಕೆಲವರು ಆತನಿಗೆ ಸಹಾಯ ಮಾಡಿರಬಹುದು. ಇದರ ಬಗ್ಗೆ ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸರಿಗೆ ಕೋರಿದ್ದೇನೆ. ಆರೋಪಿಯ ಸಿಸಿಟಿವಿ ದೃಶ್ಯ ಮತ್ತು ಫೋಟೊಗಳನ್ನು ಅವರು ಸಂಗ್ರಹಿಸಿದ್ದಾರೆ' ಎಂದು ನಂಜುಂಡಿ ಹೇಳಿದ್ದಾರೆ.

English summary
ಸMLC KP Nanjundi filed a complaint in Vidhana Soudha police station against Ravikumar SK who forged his signature and letter head to secure a job as his personal assistant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X