ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರ ಉಪ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿ ಯಾರು?

|
Google Oneindia Kannada News

ಬೆಂಗಳೂರು, ನವೆಂಬರ್ 17 : ಡಿಸೆಂಬರ್ 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಸೋಮವಾರ ಕಡೆಯ ದಿನವಾಗಿದೆ. ಆದರೆ, ಯಶವಂತಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಬಿಜೆಪಿಯಿಂದ ಅನರ್ಹ ಶಾಸಕ ಎಸ್. ಟಿ. ಸೋಮಶೇಖರ್, ಜೆಡಿಎಸ್‌ನಿಂದ ಕಳೆದ ಬಾರಿ ಸೋತಿದ್ದ ಟಿ. ಎನ್. ಜವರಾಯಿಗೌಡ ಅಭ್ಯರ್ಥಿಗಳು. ಎಸ್‌. ಟಿ. ಸೋಮಶೇಖರ್ ಸೋಲಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರಿಗೆ ಅಭ್ಯರ್ಥಿ ಸಿಗುತ್ತಿಲ್ಲ.

'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ! 'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ!

ಟಿ. ಎನ್. ಜವರಾಯಿ ಗೌಡರನ್ನು ಕಾಂಗ್ರೆಸ್‌ಗೆ ಸೆಳೆದು ಟಿಕೆಟ್ ಕೊಡುವ ಸಿದ್ದರಾಮಯ್ಯ ತಂತ್ರ ವಿಫಲವಾಗಿದೆ. ಈಗ ಸೂಕ್ತ ಅಭ್ಯರ್ಥಿಗಾಗಿ ಪಕ್ಷ ಹುಡುಕಾಟ ನಡೆಸುತ್ತಿದ್ದು, ಸೋಮವಾರ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸಲೇಬೇಕಿದೆ.

ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಜವರಾಯಿ ಗೌಡ 104562 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿಯ ಉಪ ಚುನಾವಣೆ ಸಹ ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಹೋರಾಟವಾಗಲಿದೆ. ಕಾಂಗ್ರೆಸ್‌ ಜೆಡಿಎಸ್‌ಗೆ ಬೆಂಬಲ ನೀಡಲಿದೆಯೇ? ಕಾದು ನೋಡಬೇಕು.

ಉಪ ಚುನಾವಣೆ: 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಉಪ ಚುನಾವಣೆ: 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್

ಕಾಂಗ್ರೆಸ್ ಟಿಕೆಟ್ ಯಾರಿಗೆ?

ಕಾಂಗ್ರೆಸ್ ಟಿಕೆಟ್ ಯಾರಿಗೆ?

ಎಂ. ರಾಜ್ ಕುಮಾರ್ ಮತ್ತು ಪಾಳ್ಯ ನಾಗರಾಜ್ ಇಬ್ಬರಲ್ಲಿ ಒಬ್ಬರು ಯಶವಂತಪುರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಎಂ. ರಾಜ್ ಕುಮಾರ್ ಟಿಕೆಟ್ ನಿರಾಕರಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಎಸ್. ಟಿ. ಸೋಮಶೇಖರ್ ಸೋಲಿಸಲು ತಂತ್ರ ರೂಪಿಸುತ್ತಿದ್ದಾರೆ.

ಹಲವರು ಬಿಜೆಪಿಗೆ ಸೇರ್ಪಡೆ

ಹಲವರು ಬಿಜೆಪಿಗೆ ಸೇರ್ಪಡೆ

ಎಸ್‌. ಟಿ. ಸೋಮಶೇಖರ್ ಬಿಜೆಪಿ ಸೇರುತ್ತಿದ್ದಂತೆ ಕ್ಷೇತ್ರದ ಚುನಾವಣಾ ಚಿತ್ರಣ ಬದಲಾಗಿದೆ. ಹಲವು ಕಾರ್ಪೊರೇಟರ್‌ಗಳು, ಮುಖಂಡರು ಅವರಿಗೆ ಬೆಂಬಲ ನೀಡಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಇದರಿಂದಾಗಿ ಎಂ. ರಾಜ್ ಕುಮಾರ್ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಪಾಳ್ಯ ನಾಗರಾಜ್ ಅಭ್ಯರ್ಥಿಯಾಗುವುದು.

ಜೆಡಿಎಸ್‌ಗೆ ಬೆಂಬಲ ನೀಡಲಿದೆಯೇ?

ಜೆಡಿಎಸ್‌ಗೆ ಬೆಂಬಲ ನೀಡಲಿದೆಯೇ?

ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಟಿ. ಎನ್. ಜವರಾಯಿ ಗೌಡ ಪ್ರಭಾವಿಯಾಗಿದ್ದಾರೆ. ಕಾಂಗ್ರೆಸ್ ನೆಪ ಮಾತ್ರಕ್ಕೆ ಅಭ್ಯರ್ಥಿ ಹಾಕುವ ಮೂಲಕ ಜೆಡಿಎಸ್‌ಗೆ ಬೆಂಬಲ ನೀಡಲಿದೆಯೇ ಕಾದು ನೋಡಬೇಕು. ತಮ್ಮ ಆಪ್ತರಾಗಿದ್ದ ಎಸ್. ಟಿ. ಸೋಮಶೇಖರ್ ಸೋಲಿಸಬೇಕು ಎಂದು ಸಿದ್ದರಾಮಯ್ಯ ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣಾ ಚಿತ್ರಣ ಬದಲು

ಚುನಾವಣಾ ಚಿತ್ರಣ ಬದಲು

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎಸ್. ಟಿ. ಸೋಮಶೇಖರ್ 1, 15, 273 ಮತಗಳನ್ನು ಪಡೆದು ಜಯಗಳಿಸಿದ್ದರು. ಚುನಾವಣಾ ಚಿತ್ರಣ ಬದಲಾಗಿದ್ದು, ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಕಳೆದ ಬಾರಿ ಎಸ್. ಟಿ. ಸೋಮಶೇಖರ್ ವಿರುದ್ಧ ಸೋತಿದ್ದ ಜವರಾಯಿ ಗೌಡ ಅಭ್ಯರ್ಥಿಯಾಗಿದ್ದಾರೆ.

English summary
Karnataka Congress yet to final candidate for Yeshwanthpur by elections scheduled on December 5, 2019. November 18 last date to submit nominations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X