ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಹ್ಯಾರಿಸ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

By Nayana
|
Google Oneindia Kannada News

Recommended Video

ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಗೆ ಸಚಿವ ಸ್ಥಾನ ಮಿಸ್ ಆಗಿದ್ದಕ್ಕೆ ಕಾರ್ಯಕರ್ತರು ಸ್ಟ್ರೈಕ್ | Oneindia kannada

ಬೆಂಗಳೂರು, ಜೂನ್ 8: ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಹಲವಾರು ಶಾಸಕರ ಬೆಂಬಲಿಗರು ಶುಕ್ರವಾರ ನಗರದ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸಚಿವ ಸಂಪುಟದಲ್ಲಿ ಕುರುಬರಿಗೆ ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿ ರಾಜ್ಯ ಕುರುಬರ ಸಂಘ ಕರೆ ನೀಡಿದ್ದ ಸಂಘದ ಸದಸ್ಯರು ಕೆಪಿಸಿ ಕಚೇರಿ ಮುಂದೆ ಧರಣಿ ನಡೆಸಿದರು. ಮತ್ತೊಂದೆಡೆ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಬೆಂಬಲಿಗರು ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

 ಮೈತ್ರಿ ಸರಕಾರದ ಸಂಪುಟ ಸೇರಿದ ನೂತನ ಸಚಿವರು ಇವರು ಮೈತ್ರಿ ಸರಕಾರದ ಸಂಪುಟ ಸೇರಿದ ನೂತನ ಸಚಿವರು ಇವರು

ಇದೇ ವೇಳೆ ಮೂವರು ವ್ಯಕ್ತಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಕೈಗೊಂಡಿದ್ದರೂ ಮೂವರು ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಿದರಾದರೂ ಪೊಲೀಸರು ಅದನ್ನು ವಿಫಲಗೊಳಿಸಿದರು. ಇದೇ ವೇಳೆ ಕೆಲವು ಬೆಂಬಲಿಗರು ತಲೆ ಬೋಳಿಸಿಕೊಳ್ಳುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಶಮನವಾಗದ ಅಸಮಾಧಾನ: ಕಾಂಗ್ರೆಸ್ ವಿರುದ್ಧ ಶಾಸಕರ ಬೆಂಬಲಿಗರ ಆಕ್ರೋಶ ಶಮನವಾಗದ ಅಸಮಾಧಾನ: ಕಾಂಗ್ರೆಸ್ ವಿರುದ್ಧ ಶಾಸಕರ ಬೆಂಬಲಿಗರ ಆಕ್ರೋಶ

Three party workers attempt to suicide in front of KPCC head quarter

ಪಕ್ಷದ ಮುಖಂಡರು ಹಾಗೂ ಹೈಕಮಾಂಡ್‌ನ ಗಮನ ಸೆಳೆಯಲು ಪ್ರಯತ್ನಿಸಿದರು. ಕಳೆದ ಮೂರು ದಿನಗಳಿಂದ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆಯುತ್ತಿರುವ ಧರಣಿ ಪ್ರತಿಭಟನೆಗಳು ಇಂದೂ ಕೂಡ ಮುಂದುವರೆದಿದ್ದು, ಭಿನ್ನಮತ ಶಮನಕ್ಕೆ ಪಕ್ಷದ ಮುಖಂಡರು ತೆರೆ ಮರೆಯ ಪ್ರಯತ್ನ ನಡೆಸಿದ್ದಾರೆ. ಆದರೆ ಸ್ಥಾನ ಕಳೆದುಕೊಂಡ ಶಾಸಕರ ಬೆಂಬಲಿಗರು ಮಾತ್ರ ಕೆಪಿಸಿಸಿ ಕಚೇರಿ ಎದುರು ಬಹಿರಂಗವಾಗಿಯೇ ಪ್ರತಿಭಟನೆ ನಡೆಸುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ.

English summary
Three party workers from different constituencies attempted to suicide in front of KPCC head quarter in Bangalore on Friday opposing party decision on cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X