ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಆರ್‌ ನಗರ ಮುನಿರತ್ನ ಗೆಲುವು: ಕಾಂಗ್ರೆಸ್‌ ನಾಯಕರಿಂದ ಅಭಿನಂದನೆ

By Nayana
|
Google Oneindia Kannada News

ಬೆಂಗಳೂರು, ಮೇ 31: ರಾಜರಾಜೇಶ್ವರಿನಗರ ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಮೇ 12 ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಅಪಾರ್ಟ್‌ಮೆಂಟ್‌ ಒಂದರಲ್ಲಿ 10 ಸಾವಿರಕ್ಕೂ ಹೆಚ್ಚು ಅಸಲಿ ಮತದಾರರ ಚೀಟು ದೊರೆತ ಕಾರಣ, ಕಾಂಗ್ರೆಸ್‌ ಹಾಗೂ ಬಿಜೆಪಿ ಪರಸ್ಪರ ಕೆಸರೆರಚಾಟ ಆರಂಭಿಸಿತ್ತು.

ಈ ಗೊಂದಲದಲ್ಲಿ ಮೇ 28ರಂದು ಚುನಾವಣೆ ದಿನಾಂಕ ನಿಗದಿ ಮಾಡಿ ಚುನಾವಣೆ ನಡೆಯಿತು. ಇಂದು ಚುನಾವಣಾ ಫಲಿತಾಂಶ ಹೊರ ಬೀಳುವುದು ಬಾಕಿ ಇದೆ. ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದು ಗೆಲುವಿನ ಹಾದಿಯಲ್ಲಿದ್ದಾರೆ.

ರಾಜರಾಜೇಶ್ವರಿ ನಗರ ಫಲಿತಾಂಶ LIVE: ಮತದಾರರಿಗೆ ತಲೆಬಾಗಿದ ಮುನಿರತ್ನರಾಜರಾಜೇಶ್ವರಿ ನಗರ ಫಲಿತಾಂಶ LIVE: ಮತದಾರರಿಗೆ ತಲೆಬಾಗಿದ ಮುನಿರತ್ನ

ಈ ಹಿಂದೆ ಮುನಿರತ್ನ ಅವರನ್ನು ಸೋಲಿಸಲು ಸಾಕಷ್ಟು ಮಂದಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು. ಆದರೆ ಅದನ್ನು ಮೀರಿ ಮುನಿರತ್ನ ಗೆಲುವು ಸಾಧಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 49 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದೀಗ 16 ನೇ ಸುತ್ತಿನ ಮತ ಎಣಿಕೆ ಮುಗಿದಿದೆ.

 ಬಿಜೆಪಿ ಸೋಲಿನಿಂದ ನನಗೆ ಖುಷಿ ಇದೆ

ಬಿಜೆಪಿ ಸೋಲಿನಿಂದ ನನಗೆ ಖುಷಿ ಇದೆ

ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ನ್ನು ಗೆಲ್ಲಿಸಿರುವ ಮುನಿರತ್ನ ಗೆಲುವಿನ ಕುರಿತು ನನಗೆ ಸಂತಸವಾಗಿದೆ. ಬಿಜೆಪಿ ಗೆಲ್ಲಬಾರದು ಎಂದು ಏನು ಸೂಚನೆ ಕೊಟ್ಟಿದ್ದೆವೋ ಅದರಲ್ಲಿ ಯಶಸ್ಸು ಯಶಸ್ಸು ದೊರೆಯಲಿದೆ. ಆರ್‌ಆರ್ ನಗರ ಚುನಾವಣೆ ಬಗ್ಗೆ ಏನೂ ತಲೆಕೆಡಿಸಿಕೊಂಡಿರಲಿಲ್ಲ. ನಾವು ಕಾಂಗ್ರೆಸ್‌ ಗೆಲ್ಲಬೇಕಿತ್ತು ಎಂದು ಅಂದುಕೊಂಡಿದ್ದೆವು ಗೆದ್ದಿದೆ ಇದು ಎಲ್ಲರಿಗೂ ಸಂತಸ ತಂದಿದೆ ಎಂದು ಜೆಪಿ ನಗರದ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಮೈತ್ರಿಕೂಟದ ಗೆಲುವು ಎಂದು ಹೇಳಿದ್ದಾರೆ.

ಮುನಿರತ್ನ ಮುನ್ನಡೆಗೆ HDK ಖುಷಿ: JDS ಕಾರ್ಯಕರ್ತರಲ್ಲಿ ಕಸಿವಿಸಿ?!ಮುನಿರತ್ನ ಮುನ್ನಡೆಗೆ HDK ಖುಷಿ: JDS ಕಾರ್ಯಕರ್ತರಲ್ಲಿ ಕಸಿವಿಸಿ?!

ಮುನಿರತ್ನ ಗೆಲುವು ಸಂತಸ ತಂದಿದೆ

ರಾಜರಾಜೇಶ್ವರಿ ವಿಧಾನಸಭೆ ಚುನಾವಣೆ ಮೇ 28ರಂದು ನಡೆದಿದ್ದು, ಫಲಿತಾಂಶ ಮೇ 31ರಂದು ಹೊರಬಿದ್ದಿದೆ. ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಗೆಲುವಿಗೆ ಶುಭಾಶಯ ಕೋರಿದ್ದಾರೆ.

ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್‌ ಗೆಲುವು ಸಂತಸ ತಂದಿದೆ

ನಾವು ಅತಿ ಹೆಚ್ಚು ಅಂತರದಿಂದ ರಾಜರಾಜೇಶ್ವರಿ ನಗರದಲ್ಲಿ ಗೆಲುವು ಸಾಧಿಸಿದ್ದೇವೆ, ಬೆಂಗಳೂರು ಜನತೆ ನಮಗೆ ಆಶೀರ್ವಾದ ಮಾಡಿದೆ. ಇದೇ ರೀತಿ ನಿಮ್ಮ ಸಹಕಾರ ಮುಂದುವರೆಯಲಿ ಎಂದು ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಟ್ವೀಟ್‌ ಮಾಡಿದ್ದಾರೆ.

 ಮತದಾರರ ತೀರ್ಪು ಅಂತಿಮ

ಮತದಾರರ ತೀರ್ಪು ಅಂತಿಮ

ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಗೆಲುವಿನಿಂದ ಸಂತೋಷವಾಗಿದೆ.ಸರ್ಕಾರದ ಪಕ್ಷದ ಪರವಾಗಿ ಆ ಕ್ಷೇತ್ರದ ಕಾರ್ಯಕರ್ತರಿಗೆ ಮತದಾರರಿಗೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ, ಇಲ್ಲ ಸಲ್ಲದ ಆರೋಪ ಮಾಡಿ ನೋವುಂಟು ಮಾಡಿದ್ದರು. ಆದರೆ ಮತದಾರನೇ ಅಂತಿಮ ಎನ್ನುವ ಸಂದೇಶ ಈ ಚುನಾವಣೆ ಫಲಿತಾಂಶದಿಂದ ತಿಳಿದುಬಂದಿದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ

English summary
After stunning victory in RR Nagar assembly constituency, Congress leaders have slammed Bjp which targeted party candidate Munirathna accusing of fake votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X