ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತನ್ನೊಳಗಿನ ಬೆಂಕಿ ತನ್ನ ಸುಡದಿರುವುದೆ? ಕಾಂಗ್ರೆಸ್ ಟ್ವೀಟಿನ ಒಳಾರ್ಥವೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 1: ಬಿಜೆಪಿಯಲ್ಲೇ ಮೇಯರ್ ಅಭ್ಯರ್ಥಿಗಳ ಬಗ್ಗೆ ಗೊಂದಲವಿದ್ದರೂ ಮೇಯರ್‌ ಅಭ್ಯರ್ಥಿಯನ್ನು ಘೋಷಿಸಲಾಗಿದೆ ತನ್ನೊಳಗಿನ ಬೆಂಕಿ ತನ್ನ ಸುಡದಿರುವುದೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಅಭಿವೃದ್ಧಿ ವಿರೋಧಿ ಬಿಜೆಪಿಯು ಜಿಲ್ಲೆಗಳಿಗೆ ಬೆಂಕಿ ಹಚ್ಚುವ, ರಾಜ್ಯಕ್ಕೆ ಬೆಂಕಿ ಹಚ್ಚುವ ಭಸ್ಮಾಸುರರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಭಾರಿ ಹಿನ್ನಡೆ; ಇಂದೇ ಬಿಬಿಎಂಪಿ ಮೇಯರ್ ಆಯ್ಕೆ!ಬಿಜೆಪಿಗೆ ಭಾರಿ ಹಿನ್ನಡೆ; ಇಂದೇ ಬಿಬಿಎಂಪಿ ಮೇಯರ್ ಆಯ್ಕೆ!

ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆಯಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿಎಸ್‍ವೈ ವಿರುದ್ಧ ಸೆಡ್ಡು ಹೊಡೆದು ಗೆದ್ದಿದ್ದಾರೆ.

ಕಳೆದ 4 ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದ ಪದ್ಮನಾಭ ರೆಡ್ಡಿ ಅಥವಾ ಎಲ್ ಶ್ರೀನಿವಾಸ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದರು.

ಬಿಬಿಎಂಪಿಯಲ್ಲಿ ಮೈತ್ರಿ; ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದೇನು?ಬಿಬಿಎಂಪಿಯಲ್ಲಿ ಮೈತ್ರಿ; ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದೇನು?

ಆದರೆ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಪರ ನಳೀನ್ ಕುಮಾರ್ ಬ್ಯಾಟಿಂಗ್ ನಡೆಸಿದ್ದರು. ಅಂತಿಮವಾಗಿ ಹೈಕಮಾಂಡ್ ಗೌತಮ್ ಹೆಸರು ಆಯ್ಕೆ ಮಾಡಿದ್ದು ಮೇಯರ್ ಆಯ್ಕೆ ವಿಚಾರದಲ್ಲೂ ಬಿಎಸ್‍ವೈಗೆ ಹಿನ್ನಡೆಯಾಗಿದೆ.

ಗೌತಮ್ ಕುಮಾರ್ ಹೆಸರೇ ಅಂತಿಮ

ಗೌತಮ್ ಕುಮಾರ್ ಹೆಸರೇ ಅಂತಿಮ

ಪಕ್ಷ ಸಂಘ ನಿಷ್ಠೆ ಹೊಂದಿದವರಿಗೆ ಮೇಯರ್ ಪಟ್ಟ ನೀಡಲು ಮುಂದಾದ ಹಿನ್ನೆಲೆಯಲ್ಲಿ ಗೌತಮ್ ಕುಮಾರ್ ಹೆಸರನ್ನು ಅಂತಿಮಗೊಳಿಸಲಾಗಿದೆ.

ಸರ್ಕಾರ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿತ್ತು. ಆದರೆ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಇಂದೇ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸೋಮವಾರ ರಾತ್ರಿ ಯಡಿಯೂರಪ್ಪ ಮೇಯರ್ ಚುನಾವಣೆ ಸಂಬಂಧ ಚರ್ಚೆ ನಡೆಸಲು ಬೆಂಗಳೂರಿಗೆ ಬರಬೇಕಿತ್ತು.

 ಪದ್ಮನಾಭ ರೆಡ್ಡಿ ಸೋತಿದ್ದು ಎಲ್ಲಿ?

ಪದ್ಮನಾಭ ರೆಡ್ಡಿ ಸೋತಿದ್ದು ಎಲ್ಲಿ?

ಕಳೆದ ನಾಲ್ಕು ವರ್ಷವೂ ಬಿಬಿಎಂಪಿ ವಿಪಕ್ಷ ನಾಯಕನಾಗಿದ್ದೂ ಮಾತ್ರವಲ್ಲದೇ ಈ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಪಕ್ಷದ ಪಾಲಿಕೆ ಸದಸ್ಯರಲ್ಲಿ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಮೇಯರ್ ಅಭ್ಯರ್ಥಿಯಾಗುವುದು ತಪ್ಪಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆ ಜಾರ್ಜ್ ವಿರುದ್ಧ ಸರ್ವಜ್ಞನಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿಲ್ಲುವಂತೆ ಸೂಚಿಸಲಾಗಿತ್ತು. ಖುದ್ದು ಹೈಕಮಾಂಡ್ ಸೂಚನೆ ನೀಡಿದ್ದರೂ ಪದ್ಮನಾಭ ರೆಡ್ಡಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಮುಖ್ಯವಾಗಿ ಪದ್ಮನಾಭ ರೆಡ್ಡಿ ಯಡಿಯೂರಪ್ಪ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆ ಇವರು ಮೂಲ ಬಿಜೆಪಿಯವರಲ್ಲ. ಜೆಡಿಎಸ್‍ನಿಂದ ವಲಸೆ ಬಂದಿದ್ದಾರೆ ಎನ್ನುವುದನ್ನು ಪರಿಗಣಿಸಿ ಆಯ್ಕೆ ಮಾಡಿಲ್ಲ ಎಂಬ ವಿಚಾರ ತಿಳಿದುಬಂದಿದೆ.

ಬಂಡಾಯದ ಬಗ್ಗೆ ಹೇಳಿದ್ದೇನು?

ಬಂಡಾಯದ ಬಗ್ಗೆ ಹೇಳಿದ್ದೇನು?

ನನ್ನ ನಾಯಕರಾದ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ, ಬೆಂಗಳೂರು ನಗರದ ನಾಯಕಾರದ ಆರ್ ಅಶೋಕ್ ಹಾಗೂ ಎಲ್ಲಾ ಶಾಸಕ, ಸಂಸದರು ಒಟ್ಟಾಗಿ ಶಿಸ್ತಿನ ಪಕ್ಷದಲ್ಲಿದ್ದೇವೆ. ಹೀಗಾಗಿ ಪಕ್ಷ ಆದೇಶ ಮಾಡಿದ್ದು ನಾಮಪತ್ರ ಸಲ್ಲಿಸಿದ್ದೇನೆ. ಒಟ್ಟಿನಲ್ಲಿ ಪಕ್ಷದ ಆದೇಶಕ್ಕೆ ತಲೆ ಬಾಗುತ್ತೇನೆ. ಇಲ್ಲಿ ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಪದ್ಮನಾಭ ರೆಡ್ಡಿ ಹೇಳಿದ್ದಾರೆ.

ಗೌತಮ್ ನನ್ನ ಸಹೋದರ ಎಂದ ಪದ್ಮನಾಭರೆಡ್ಡಿ

ಗೌತಮ್ ನನ್ನ ಸಹೋದರ ಎಂದ ಪದ್ಮನಾಭರೆಡ್ಡಿ

ಗೌತಮ್ ನನ್ನ ಸಹೋದರ. ಅಂತಿಮವಾಗಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅಷ್ಟಕ್ಕೂ ಇಬ್ಬರು ನಾಮಪತ್ರ ಸಲ್ಲಿಸಬಾರದೆಂದು ಕಾನೂನಿನಲ್ಲಿ ಇಲ್ಲವಲ್ವ. ಇಲ್ಲಿ ಬಂಡಾಯದ ಪ್ರಶ್ನೆ ಉದ್ಭವವಾಗಲ್ಲ. ನನ್ನ ಪಕ್ಷ ನಾಮಪತ್ರ ಸಲ್ಲಿಸಿ ಎಂದು ಹೇಳಿದೆ, ಅದಕ್ಕೆ ಸಲ್ಲಿಕೆ ಮಾಡಿದ್ದೇನೆ ಪದ್ಮನಾಭ ರೆಡ್ಡಿ ತಿಳಿಸಿದರು. ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ನಮ್ಮ ಬಿಜೆಪಿ ಪಕ್ಷವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ಸಿನವರು ಇದರಿಂದ ಲಾಭ ಪಡೆಯುತ್ತಾರೆ ಅಂದುಕೊಂಡರೆ ಅದು ತಿರುಕನ ಕನಸಾಗಿರುತ್ತದೆ ಎಂದು ಹೇಳಿದರು.

English summary
Congress Tweet On BBMP Election, Though the mayoral candidate is confusion in the BJP, has the mayor been announced? Congress tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X