ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಗ್ಲಿಯಾನ ಜೊತೆ ಸಂಧಾನ ಯಶಸ್ವಿ, ಬಂಡಾಯ ಶಮನ

|
Google Oneindia Kannada News

ಬೆಂಗಳೂರು, ಆಗಸ್ಟ್ 12 : ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಮನವೊಲಿಸಲು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದು, ರಾಮಸ್ವಾಮಿ ಪಾಳ್ಯದಲ್ಲಿ ಉಂಟಾಗಿದ್ದ ಬಂಡಾಯದ ಬಿಕ್ಕಟ್ಟು ಶಮನಗೊಂಡಿದೆ. ಬಂಡಾಯ ಅಭ್ಯರ್ಥಿ ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳಲಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮಸ್ವಾಮಿ ಪಾಳ್ಯ ವಾರ್ಡ್ ನಂ 62 ರಿಂದ ಮೇರಿ ಅವರು ಟಿಕೆಟ್ ಬಯಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ನೇತ್ರಾವತಿ ಕೃಷ್ಣೇಗೌಡರಿಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಮೇರಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. [ರಾಮಸ್ವಾಮಿ ಪಾಳ್ಯ ವಾರ್ಡ್ ನಲ್ಲಿ ಬಂಡಾಯದ ಬಿಸಿ]

ht sangliana

ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರು ಮೇರಿ ಅವರಿಗೆ ಬೆಂಬಲ ಸೂಚಿಸಿದ್ದರು. ಪ್ರಚಾರಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ವಾರ್ಡ್‌ನಲ್ಲಿ ಬಂಡಾಯದ ಬಿಸಿ ತಟ್ಟಿತ್ತು. [ಬಿಬಿಎಂಪಿ ಚುನಾವಣೆ, ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳು]

ವಾರ್ತಾ ಸಚಿವ ರೋಷನ್ ಬೇಗ್‌ ಅವರು ಮಂಗಳವಾರ ಎಚ್.ಟಿ.ಸಾಂಗ್ಲಿಯಾನ ಅವರೊಂದಿಗೆ ಮಾತಕತೆ ನಡೆಸಿದ್ದು ಅಸಮಾಧಾನ ಶಮನಗೊಂಡಿದೆ. ಮೇರಿ ಅವರಿಗೆ ನಾಮಪತ್ರವನ್ನು ವಾಪಸ್ ಪಡೆಯಲು ಸೂಚಿಸುತ್ತೇನೆ ಎಂದು ಸಾಂಗ್ಲಿಯಾನ ಅವರು ಭರವಸೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಒಟ್ಟು 1333 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಗುರುವಾರ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದ್ದು, ಶುಕ್ರವಾರ ಕಣದಲ್ಲಿ ಉಳಿಯುವವರ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

English summary
BBMP election 2015 : Congress rebel candidate Meri to withdraw nomination from Ramaswamy palya ward (No 62). Netravati Krishne Gowda is the party candidate in ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X