ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಆಗಮಿಸಿದ ಮೀರಾ: ದೇವೇಗೌಡ, ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ

ರಾಷ್ಟ್ರಪತಿ ಚುನಾವಣೆಗೆ ನಿಂತಿರುವ ಮೀರಾ ಕುಮಾರ್ ಬೆಂಗಳೂರಿಗೆ ಭೇಟಿ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೀರಾ ಕುಮಾರ್. ಬೆಂಗಳೂರಿನಲ್ಲಿ ಜೆಡಿಎಸ್ ಧುರೀಣ ದೇವೇಗೌಡರನ್ನು ಭೇಟಿ ಮಾಡಿದ ಮೀರಾ ಕುಮಾರ್. ಆನಂತರ, ಕಾಂಗ್ರೆಸ್ ಕಚೇರಿಗೆ ತೆರಳಿದ ಮೀರಾ.

|
Google Oneindia Kannada News

ಬೆಂಗಳೂರು, ಜುಲೈ 1: ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ವತಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್, ತಮ್ಮ ಮತಯಾಚನೆ ಅಭಿಯಾನದ ಅಂಗವಾಗಿ ಶನಿವಾರ (ಜುಲೈ 1) ಬೆಂಗಳೂರಿಗೆ ಆಗಮಿಸಿದ್ದಾರೆ.

ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ನಾಮಪತ್ರ ಸಲ್ಲಿಕೆವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ನಾಮಪತ್ರ ಸಲ್ಲಿಕೆ

ಬೆಂಗಳೂರಿಗೆ ಆಗಮಿಸಿದ ಅವರು ಮೊದಲು ಜಿಡಿಎಸ್ ಧುರೀಣ ದೇವೇಗೌಡರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿದರು. ಕೆಂಪೇಗೌಡ ವಿಮಾನ ನಿಲ್ದಾಣದ ವಿಐಪಿ ಲಾಂಜ್ ನಲ್ಲಿ ನಡೆದ ಈ ಭೇಟಿಯ ವೇಳೆ, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮೀರಾ ಅವರು, ದೇವೇಗೌಡರಲ್ಲಿ ಮತ್ತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅವರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕೆಂದು ದೇವೇಗೌಡರಲ್ಲಿ ಮನವಿ ಮಾಡಿದರು.

Congress nominee for President election 2017 Meera Kumar comes to Bengaluru, meets JDS leader HD Devegowda

ಜೆಡಿಎಸ್ ಪಕ್ಷವು, ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರನ್ನೇ ಬೆಂಬಲಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.

ರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟುರಾಷ್ಟ್ರಪತಿ ಅಭ್ಯರ್ಥಿ ಮೀರಾ ವಿರುದ್ದ ಸುಷ್ಮಾ ಟೀಕೆ: ಕಾಂಗ್ರೆಸ್ ತಿರುಗೇಟು

ದೇವೇಗೌಡರ ಭೇಟಿಯ ನಂತರ, ನಗರದಲ್ಲಿರುವ ಕೆಪಿಸಿಸಿ ಕಚೇರಿಗೆ ಮೀರಾ ಕುಮಾರ್ ಆಗಮಿಸಿದರು. ಅಲ್ಲಿ, ಕರ್ನಾಟಕ ಕಾಂಗ್ರೆಸ್ ಪಕ್ಷದ ವತಿಯಿಂದ ಸನ್ಮಾನ ಏರ್ಪಡಿಸಲಾಗಿತ್ತು.

Congress nominee for President election 2017 Meera Kumar comes to Bengaluru, meets JDS leader HD Devegowda

ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ನಾಯಕರ ಜತೆಗೆ ಮೀರಾ ಕುಮಾರ್ ಅವರು ಸಮಾಲೋಚನೆ ನಡೆಸಿದರು.

ರಾಷ್ಟ್ರಪತಿ ಚುನಾವಣೆಯು ಜುಲೈ 17ರಂದು ನಡೆಯಲಿದ್ದು, 20ರಂದು ಫಲಿತಾಂಶ ಹೊರಬೀಳಲಿದೆ. ಬಿಹಾರದ ಮಾಜಿ ರಾಜ್ಯಪಾಲರಾದ ರಾಮ್ ನಾಥ್ ಕೋವಿಂದ್ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಅವರ ಎದುರಾಳಿಯಾಗಿ ಬಿಜೆಪಿ ವತಿಯಿಂದ ಕಣಕ್ಕಿಳಿದಿದ್ದಾರೆ.

English summary
The Congress party nominee for the President election 2017 in India, Ms. Meera Kumar visited Bengaluru on July 1st, 2017. After her arrival she met JDS supremo H.D. Devegowda at his residence, later she went to Congress office and there she discussed with senior congress leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X