ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಬೈನಿಂದ ಬೆಂಗಳೂರಿಗೆ ಬಂದ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರು

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಮುಂಬೈನಲ್ಲಿದ್ದ ಕಾಂಗ್ರೆಸ್‌ನ ನಾಲ್ವರು ಶಾಸಕರು ಮಂಗಳವಾರ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ತರಾತುರಿಯಲ್ಲಿದ್ದ ಶಾಸಕರು ಬಿಜೆಪಿಯಿಂದ ಬಂಧಿಯಾಗಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು, ಇದೀಗ ರಮೇಶ್ ಜಾರಕಿಹೊಳಿ, ಕೆಆರ್ ಪೇಟೆ ಶಾಸಕ ನಾರಾಯಣಗೌಡ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಅತೃಪ್ತರ ಬೇಡಿಕೆ ಈಡೇರಿಸಲು ಮುಂದಾದ ಎಚ್‌ಡಿಕೆ, ಇದು ಕೊನೆ ಅವಕಾಶಅತೃಪ್ತರ ಬೇಡಿಕೆ ಈಡೇರಿಸಲು ಮುಂದಾದ ಎಚ್‌ಡಿಕೆ, ಇದು ಕೊನೆ ಅವಕಾಶ

ನಾನು ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎನ್ನುವುದೆಲ್ಲಾ ಸುಳ್ಳು, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ನಾನು ಸಿಎಂ ಹಾಗೂ ಸಚಿವ ಸಾರಾ ಮಹೇಶ್ ಸಂಪರ್ಕದಲ್ಲಿದ್ದೇನೆ. ನಾನು ಮುಂಬೈ ಆಸ್ಪತ್ರೆಗೆ ಹೋಗಿದ್ದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

Congress MLA Ramesh Jarkiholi arrived in Bengaluru tuesday mid night

ನಂತರ ಕಾಂಗ್ರೆಸ್​ನ ಬಂಡಾಯಗಾರ ಶಾಸಕರ ನಾಯಕ ರಮೇಶ್​ ಜಾರಕಿಹೊಳಿ ಅವರೂ ಬಂದಿಳಿದರು. ಆದರೆ, ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.

Congress MLA Ramesh Jarkiholi arrived in Bengaluru tuesday mid night

ಶಾಸಕ ಉಮೇಶ್ ಜಾಧವ್ ರಾಜೀನಾಮೆ ಸಾಧ್ಯತೆ, ಸರ್ಕಾರಕ್ಕೆ ಸಂಕಷ್ಟಶಾಸಕ ಉಮೇಶ್ ಜಾಧವ್ ರಾಜೀನಾಮೆ ಸಾಧ್ಯತೆ, ಸರ್ಕಾರಕ್ಕೆ ಸಂಕಷ್ಟ

ಈ ವೇಳೆ ಮಾತನಾಡಿದ ಸಚಿವ ಸಾ.ರಾ. ಮಹೇಶ್, ಮುಂಬೈನಲ್ಲಿದ್ದ ಎಲ್ಲ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಆದರೆ ಅವರನ್ನು ಸಂಪರ್ಕಿಸಲು ಇನ್ನೂ ಆಗಿಲ್ಲ. ಶಾಸಕ ನಾರಾಯಣಗೌಡರನ್ನು ಕರೆತಂದಿದ್ದೇವೆ ಎಂದು ಹೇಳಿದ್ದಾರೆ.

English summary
Congress MLA Ramesh Jarkiholi arrived in Bengaluru last night. He had been incommunicado for the past few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X