ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಚಿವ ದಿನೇಶ್ ಗುಂಡೂರಾವ್‌ಗೆ ಕೋವಿಡ್ ಸೋಂಕು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್‌ಗೆ ಕೋವಿಡ್ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 5,66,023ಕ್ಕೆ ಏರಿಕೆಯಾಗಿದೆ.

ಭಾನುವಾರ ಕೆಪಿಸಿಸಿಯ ಮಾಜಿ ಅಧ್ಯಕ್ಷ, ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. "ಕೋವಿಡ್ ಟೆಸ್ಟ್‌ನಲ್ಲಿ ನನಗೆ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕು ತಗುಲಿರುವುದು ದೃಢಪಟ್ಟಿದೆ" ಎಂದು ಹೇಳಿದ್ದಾರೆ.

Congress MLA Dinesh Gundu Rao Tested Positive For COVID 19

24 ಗಂಟೆಯಲ್ಲಿ ಭಾರತದಲ್ಲಿ 88,600 ಹೊಸ ಕೋವಿಡ್ ಪ್ರಕರಣ 24 ಗಂಟೆಯಲ್ಲಿ ಭಾರತದಲ್ಲಿ 88,600 ಹೊಸ ಕೋವಿಡ್ ಪ್ರಕರಣ

"ನಿಮ್ಮೆಲ್ಲರ ಹಾರೈಕೆಯಿಂದ ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಇನ್ನಿತರರಿಗೆ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ" ಎಂದು ಅವರು ಮನವಿ ಮಾಡಿದ್ದಾರೆ.

ಕೋವಿಡ್ ಪರೀಕ್ಷೆ ದರ ಇಳಿಕೆ; ಸರ್ಕಾರಿ ಲ್ಯಾಬ್‌ನಲ್ಲಿ ಈಗ 1,200 ರೂ.ಕೋವಿಡ್ ಪರೀಕ್ಷೆ ದರ ಇಳಿಕೆ; ಸರ್ಕಾರಿ ಲ್ಯಾಬ್‌ನಲ್ಲಿ ಈಗ 1,200 ರೂ.

Congress MLA Dinesh Gundu Rao Tested Positive For COVID 19

ಉಸ್ತುವಾರಿಯಾಗಿ ನೇಮಕ: ದಿನೇಶ್ ಗುಂಡೂರಾವ್ ಅವರು ತಮಿಳುನಾಡು, ಪುದುಚೇರಿ ಮತ್ತು ಗೋವಾ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

ಎಐಸಿಸಿ ಪುನಾರಚನೆ: ದಿನೇಶ್ ಗುಂಡೂರಾವ್ ಚಿತ್ತ ತಮಿಳುನಾಡಿನತ್ತ!ಎಐಸಿಸಿ ಪುನಾರಚನೆ: ದಿನೇಶ್ ಗುಂಡೂರಾವ್ ಚಿತ್ತ ತಮಿಳುನಾಡಿನತ್ತ!

ಸೆಪ್ಟೆಂಬರ್ 25ರಂದು ಅವರು ಚೆನ್ನೈಗೆ ಭೇಟಿ ನೀಡಿ ಕಾಂಗ್ರೆಸ್ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ, ಲೋಕಸಭಾ ‌ಸದಸ್ಯ ಕಾರ್ತಿಕ್ ಚಿದಂಬರಂ ಭೇಟಿ ಮಾಡಿದ್ದರು. ಡಿಎಂಕೆ ಮುಖ್ಯಸ್ಥ ಎಂ. ಕೆ. ಸ್ಟಾಲಿನ್ ಭೇಟಿ ಮಾಡಿದ್ದರು.

ದಿನೇಶ್ ಗುಂಡೂರಾವ್ ಶನಿವಾರದ ತನಕ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡಿದ್ದರು. ಈಗ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, ಅವರ ಸಂಪರ್ಕಕ್ಕೆ ಬಂದ ನಾಯಕರಿಗೆ ಆತಂಕ ಎದುರಾಗಿದೆ.

English summary
Gandhi Nagar Congress MLA and Congress leader Dinesh Gundu Rao tested positive for COVID 19. Former minister tweeted about it on September 27, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X