ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನಗೆ ಡಿಕೆಶಿ ಆದರ್ಶ: ಕಿರಿಯ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಗೌಡ

|
Google Oneindia Kannada News

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ ಮತಕ್ಷೇತ್ರ ಈ ಬಾರಿ ಗಮನಸೆಳೆದಿರುವುದಕ್ಕೆ ಪ್ರಮುಖ ಕಾರಣ ಅಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಗೌಡ.

ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕಿಳಿಯುತ್ತಿರುವ ಅತಿ ಕಿರಿಯ ಅಭ್ಯರ್ಥಿ ಮಂಜುನಾಥ ಗೌಡ. ಅವರಿಗಿನ್ನೂ 27 ವರ್ಷ ವಯಸ್ಸು. ಎನ್‌ಎಸ್‌ಯುಐ ರಾಜ್ಯ ಅಧ್ಯಕ್ಷರಾಗಿರುವ ಅವರು, ತಮ್ಮ ಸಂಘಟನಾ ಚತುರತೆಯಿಂದ ಕಾಂಗ್ರೆಸ್‌ ಹಿರಿಯರ ಗಮನ ಸೆಳೆದವರು.

congress MLA candidate Manjunath Gowda interview

ಅವರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್ ನೀಡಲಾಗಿದ್ದು, ಬಿಜೆಪಿಯಿಂದ ನೆ.ಲ.ನರೇಂದ್ರ ಬಾಬು ಮತ್ತು ಜೆಡಿಎಸ್‌ನಿಂದ ಕೆ.ಗೋಪಾಲಯ್ಯ ಅವರುಗಳು ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್‌ನ ಕಿರಿಯ ಅಭ್ಯರ್ಥಿ ಮಂಜುನಾಥ ಗೌಡ ಅವರು ಪ್ರಸ್ತುತ ರಾಜಕೀಯ, ರಾಜಕಾರಣದಲ್ಲಿ ತಮ್ಮ ಪ್ರಗತಿ, ಕಾಂಗ್ರೆಸ್ ಪಕ್ಷ ಮತ್ತು ಎದುರಾಳಿಗಳ ನ್ಯೂನ್ಯತೆಗಳ 'ಒನ್ ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಕುಟುಂಬ ರಾಜಕಾರಣ ಸಾಕಷ್ಟಿದೆ ಅಲ್ಲವೆ?
ಹೌದು ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ, ಆದರೆ ನ್ನನ್ನಂತಹ ಸಾಮಾನ್ಯನಿಗೂ ಪಕ್ಷದಲ್ಲಿ ಮಾನ್ಯತೆ ಸಿಗುತ್ತದೆ ಎಂಬುದು ಇಲ್ಲಿ ಬಹಳಾ ಮುಖ್ಯ. ಡಿಕೆ ಶಿವಕುಮಾರ್ ಹಾಗೂ ಇನ್ನಿತರ ನಾಯಕರು ನಾನು ಹಾಗೂ ನನ್ನಂತಹಾ ಯುವ ಕಾರ್ಯಕರ್ತರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ.

ಕಾಂಗ್ರೆಸ್‌ನ ಚುಕ್ಕಾಣಿ ಗಾಂಧಿ ಕುಟುಂಬ ಬಿಟ್ಟು ಬದಲಾಗುವುದೇ ಇಲ್ಲವಲ್ಲ?
ನಾವು ಕಾಂಗ್ರೆಸ್‌ನ ಕಾರ್ಯಕರ್ತರು ಅವರನ್ನು ನಮ್ಮನ್ನು ಆಳುವಂತೆ ಆಯ್ಕೆ ಮಾಡಿದ್ದೇವೆ ಅವರಿಗೆ ಪಕ್ಷದ ಅಧಿಕಾರ ನೀಡಿದ್ದೇವೆ. ಅವರು ಸ್ವ ಇಚ್ಛೆಯಿಂದ ಅಧಿಕಾರವನ್ನು ಆಯ್ಕೆ ಮಾಡಿಕೊಂಡಿದ್ದಲ್ಲ. ಅಷ್ಟಲ್ಲದೆ ಗಾಂಧಿ ಕುಟುಂಬ ಸ್ವಾತಂತ್ರ್ಯಕ್ಕಾಗಿ ಹೊರಾಡಿದ ಕುಟುಂಬ ಹಾಗಾಗಿ ಈ ವಿಷಯದಲ್ಲಿ ಅವರಿಗೆ ವಿನಾಯಿತಿ ಇದೆ.

congress MLA candidate Manjunath Gowda interview

ರಾಜಕೀಯಕ್ಕೆ ಬರಲು ಯಾರು ಪ್ರೇರಣೆ? ನಿಮ್ಮ ಬೆನ್ನೆಲುಬು ಯಾರು?
ನಾನು ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮದ ಗೌಡ ಕುಟುಂಬದವನು. ತಂದೆ ತಾಯಿ ಇಬ್ಬರೂ ರೈತರು. ನಾನು ಕಾನೂನು ಪದವಿಗೆಂದು ಬೆಂಗಳೂರಿಗೆ ಬಂದು ಯುವ ಕಾಂಗ್ರೆಸ್‌ ಸೇರಿದೆ. ಸಂಘಟನಾ ಚತುರತೆಯಿಂದ ಎನ್‌ಎಸ್‌ಯುಐ ನಲ್ಲಿ ವಿವಿಧ ಹುದ್ದೆಗಳಿಗೆ ಏರಿದೆ. ನನ್ನ ರಾಜಕೀಯ ಗುರು ಡಿ.ಕೆ.ಶಿವಕುಮಾರ್ ಅವರು ತಮ್ಮ 26ನೇ ವಯಸ್ಸಿಗೆ ಶಾಸಕರಾದವರು ನಾನು 27ನೇ ವಯಸ್ಸಿಗೆ ಚುನಾವಣೆಗೆ ನಿಂತಿದ್ದೇನೆ.

ಇಷ್ಟು ಸಣ್ಣ ವಯಸ್ಸಿಗೆ ಟಿಕೆಟ್ ಹೇಗೆ ಗಿಟ್ಟಿಸಿಕೊಂಡಿರಿ?
ನಾನು 24/7 ಕಾಂಗ್ರೆಸ್ ಕಾರ್ಯಕರ್ತ. ಕಾಲೇಜು ಬಂಕ್ ಮಾಡಿ ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದೆ. ಎನ್‌ಎಸ್‌ಯುಐ ಸೇರಿದಾಗ ಅದರ ಸದಸ್ಯತ್ವ ಅಭಿಯಾನವನ್ನು ಉತ್ತಮವಾಗಿ ಮಾಡಿದ ಅವರ ಫಲವಾಗಿ ಇಂದು ಎನ್‌ಎಸ್‌ಯುಐ ರಾಝ್ಯದ 26 ಜಿಲ್ಲೆಗಳಲ್ಲಿದೆ. ಇದನ್ನು ಹೈಕಮಾಂಡ್ ಗುರುತಿಸಿತು. ರಾಹುಲ್ ಗಾಂಧಿ ಅವರು ಯುವಕರು ಪಕ್ಷದಲ್ಲಿ ಬೆಳೆಯಬೇಕೆಂಬ ಆಸೆ ಹೊಂದಿದ್ದಾರೆ ಹಾಗಾಗಿ ನನಗೆ ಟಿಕೆಟ್ ದೊರೆತಿದೆ.

ಹಣಕ್ಕಾಗಿ ಟಿಕೆಟ್ ಮಾರಾಟವಾಗುತ್ತದೆ ಎಂಬ ಆರೋಪವಿದೆಯಲ್ಲ?
ಇದನ್ನು ನಾನು ಒಪ್ಪುವುದಿಲ್ಲ, ಕಾಂಗ್ರೆಸ್‌ನಲ್ಲಿ ಈ ಪದ್ಧತಿ ಇಲ್ಲ. ಒಂದು ವೇಳೆ ಹಾಗೆ ಇದ್ದಿದ್ದರೆ ಇಂದು ನಾನು ಟಿಕೆಟ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ರೈತರ ಮಗನಾದು ನಾನು ಟಿಕೆಟ್‌ಗಾಗಿ ಕೋಟ್ಯಂತರ ಸುರಿಯುವಷ್ಟು ಸ್ಥಿತಿವಂತನಲ್ಲ. ಟಿಕೆಟ್ ದೊರಕದ ಕೆಲವು ಅತೃಪ್ತ ಅಭ್ಯರ್ಥಿಗಳು ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಾರೆ ಅಷ್ಟೆ. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರು ನನ್ನ ವಿವರಗಳನ್ನು ಪರಿಶೀಲಿಸಿದ ನಂತರವೇ ಟಿಕೆಟ್ ನೀಡಿದ್ದಾರೆ. ರಾಜ್ಯದ ಎಲ್ಲ ಅಭ್ಯರ್ಥಿಗಳ ವಿವರಗಳನ್ನು ಪರಿಶೀಲಿಸಿಯೇ ಟಿಕೆಟ್ ನೀಡಲಾಗಿದೆ.

ನೀವು ನೆಲಮಂಗಲದವರಾಗಿ ಬೆಂಗಳೂರಿನ ಕ್ಷೇತ್ರ ಏಕೆ ಆಯ್ದುಕೊಂಡಿರಿ?
ನನಗೆ ರಾಜಕೀಯ ಪ್ರಜ್ಞೆ ಬಂದಾಗಿನಿಂದ ನಾನು ಬೆಂಗಳೂರಿನಲ್ಲೇ ಇದ್ದೇನೆ. ನನಗೆ ನನ್ನ ಊರಿನ ರಾಜಕೀಯದ ಹತ್ತಿರದ ಪರಿಚಯ ಇಲ್ಲ. ಇಲ್ಲಿ ಹಲವು ಎನ್‌ಜಿಒಗಳ ಜೊತೆಗೆ ಕೆಲಸ ಮಾಡಿದ್ದೇನೆ. ನಾನು ರಾಜಾಜಿನಗರದಿಂದ ಸ್ಪರ್ಧೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದೆ ಆದರೆ ನನಗೆ ಮಹಾಲಕ್ಷ್ಮಿ ಲೇಔಟ್‌ ಟಿಕೆಟ್ ನೀಡಿದ್ದಾರೆ. ಹೈಕಮಾಂಡ್‌ಗೆ ನನ್ನ ಮೇಲೆ ವಿಶ್ವಾಸವಿದೆ.

congress MLA candidate Manjunath Gowda interview

ನಿಮ್ಮ ರಾಜಕೀಯ ಗುರು ಡಿಕೆಶಿ ಅವರಿಂದ ನೀವು ಕಲಿತದ್ದೇನು?
ಬೆಂಬಲಿಗರನ್ನು ಹೆಚ್ಚು ಮಾಡಿಕೊಳ್ಳುವವನು ಲೀಡರ್ ಅಲ್ಲ, ಲೀಡರ್‌ಗಳನ್ನು ಹುಟ್ಟುಹಾಕುವವನೇ ನಿಜವಾದ ನಾಯಕ ಎಂಬುದನ್ನು ಅವರಿಂದ ಕಲಿತೆ. ನನ್ನಂತಹಾ ಹಲವು ನಾಯಕರನ್ನು ಅವರು ಬೆಳಕಿಗೆ ತರುತ್ತಿದ್ದಾರೆ. ನಾನೂ ಕೂಡ ಅವರಂತೆ ಎನ್‌ಎಸ್‌ಯುಐನ ಕಾರ್ಯಕರ್ತರನ್ನು ರಾಜಕೀಯದ ಮುಖ್ಯವಾಹಿನಿಯಾದ ಚುನಾವಣೆಗಳಿಗೆ ಸ್ಪರ್ಧಿಸುವಂತೆ ಪ್ರೇರೇಪಿಸುತ್ತೇನೆ.

ಪಕ್ಷ ನಿಷ್ಠೆ ಡಿಕೆಶಿ ಅವರ ಅತಿ ದೊಡ್ಡ ಗುಣ. ಅವರು ಅದನ್ನು ಬಹಳ ಬಾರಿ ತೋರಿಸಿದ್ದಾರೆ. ನಾನು ಅವರ ಹಾದಿಯಲ್ಲೇ ನಡೆಯುತ್ತೇನೆ. ಡಿಕೆಶಿ ಅವರ ಅತಿ ಮುಕ್ಯ ಗುಣ ಅವರ ಧೈರ್ಯ. ಅವರು ದೇವೇಗೌಡ ಅವರನ್ನೇ ಎದುರಿಸಿ ಬಂದವರು ಹಾಗಾಗಿ ಈ ಚುನಾವಣೆಯಲ್ಲಿ ಅವರಂತೆ ಧೈರ್ಯದಿಂದ ಸ್ಪರ್ಧಿಸುತ್ತಿದ್ದೇನೆ.

English summary
Mahalakshmi layout Congress MLA candidate Manjunath Gowda said DK Shivakumar is his icon. He is the youngest candidate from congress this time. He talks with One India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X