ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 20ರ ತನಕ ಸಿಬಿಐ ಕಸ್ಟಡಿಗೆ ಶಾಸಕ ಅನಿಲ್ ಲಾಡ್

By Mahesh
|
Google Oneindia Kannada News

ಬೆಂಗಳೂರು, ಜುಲೈ 16: ಅಕ್ರಮ ಗಣಿಗಾರಿಕೆ, ಅಕ್ರಮವಾಗಿ ಅದಿರು ರಫ್ತು ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಲಾಯಿತು. ಲಾಡ್ ಅವರನ್ನು ಜುಲೈ 20ರ ತನಕ ಸಿಬಿಐ ತಂಡದ ವಶಕ್ಕೆ ನೀಡಲಾಗಿದೆ.

ಅಕ್ರಮವಾಗಿ ಕಬ್ಬಿಣ ಅದಿರು ರಫ್ತು ಮಾಡಿದ ಆರೋಪದ ಮೇಲೆ ಅನಿಲ್ ಲಾಡ್ ಅವರನ್ನು ಬುಧವಾರ (ಜುಲೈ 15) ಸಂಜೆ ಸಿಬಿಐ ತಂಡ ಬಂಧಿಸಿತ್ತು. ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಲಾಡ್ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಲಯದಲ್ಲಿ ಮನವಿ ಮಾಡಿಕೊಳ್ಳಲಾಯಿತು. [ಸಿಬಿಐನಿಂದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬಂಧನ]

Anil Lad

ಸಿಬಿಐ ಮನವಿಗೆ ಪುರಸ್ಕರಿಸಿದ ನ್ಯಾ. ಎಚ್ ಕೆ ಮಲ್ಲಪ್ಪ ಅವರು ಶಾಸಕ ಅನಿಲ್ ಲಾಡ್ ಅವರನ್ನು ಜುಲೈ 20ರವರೆಗೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಅನಿಲ್ ಲಾಡ್ ಸಲ್ಲಿಸಿರುವ ಅರ್ಜಿ ಕೂಡಾ ಜುಲೈ 20ರಂದೇ ವಿಚಾರಣೆಗೆ ಬರಲಿದೆ ಎಂದು ಲಾಡ್ ಅವರ ಪರ ವಕೀಲ ಸಿವಿ ನಾಗೇಶ್ ಹೇಳಿದ್ದಾರೆ.

ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ:
ವಿಧಾನಸೌಧದ ಆವರಣದಲ್ಲಿ ಶಾಸಕರನ್ನು ಬಂಧಿಸಲು ಸ್ಪೀಕರ್ ಪೂರ್ವಾನುಮತಿ ಕೋರಬೇಕಾಗುತ್ತದೆ. ಬೇರೆ ಕಡೆಗಳಲ್ಲಿ ಬಂಧಿಸಲು ಸಿಬಿಐ ಅಥವಾ ಪೊಲೀಸ್ ತಂಡಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆ ಅಧಿವೇಶನ ಮುಕ್ತಾಯದ ನಂತರ ಶಾಸಕ ಅನಿಲ್ ಲಾಡ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ ಎಂಬ ಮಾಹಿತಿ ಸಿಬಿಐ ವಿಶೇಷ ನ್ಯಾಯಾಲಯದಿಂದ ವಿಧಾನಸಭಾಧ್ಯಕ್ಷರಿಗೆ ಸಿಕ್ಕಿದೆ.

English summary
CBI special court sent to MLA Anil Lad to CBI custody till July 20. CBI sleuths arrested Congress MLA Anil Lad, representing Ballari city in the Assembly, for allegedly exporting iron ore illegally from Belikere port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X