ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್ ಅಧಿವೇಶನ ನಡೆಯಲು ಬಿಡದ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 08: ರಾಜ್ಯ ಬಜೆಟ್ ಅಧಿವೇಶನ ನಡೆಯಲು ಅಡ್ಡಿಪಡಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ರಾತ್ರಿ ಪಂಜಿನ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಪಂಜು ಹಿಡಿದು ರಾತ್ರಿ ಪ್ರತಿಭಟನೆ ನಡೆಸಿದ್ದು, ರಾಜ್ಯ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಬಜೆಟ್ ಅಧಿವೇಶನ ಪ್ರಾರಂಭವಾಗಿ ಎರಡು ದಿನವಾಗಿದ್ದು, ಬಿಜೆಪಿ ಶಾಸಕ ಗದ್ದಲದಿಂದಾಗಿ ಎರಡೂ ದಿನದ ಕಲಾಪವೂ ಬಲಿಯಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

Congress members staged torchlight protest against Karnataka BJP

ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೂ ಬಿಜೆಪಿ ಶಾಸಕರು ಅಡ್ಡಿಪಡಿಸಿದ್ದರು. ಸದನದ ಬಾವಿಗಿಳಿದು ಪ್ರತಿಭಟಿಸಿದ್ದರು. ಎರಡನೇಯ ದಿನವೂ ಇದು ಮುಂದುವರೆದಿತ್ತು. ಹಾಗಾಗಿ ಸಭಾಧ್ಯಕ್ಷರು ಸದನವನ್ನು ಶುಕ್ರವಾರ ಮಧ್ಯಾಹ್ನ 12:30 ಕ್ಕೆ ಕಲಾಪವನ್ನು ಮುಂದೂಡಿದ್ದಾರೆ.

ಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆ

ಶುಕ್ರವಾರದಂದು ಬಜೆಟ್ ಮಂಡನೆ ಇದ್ದು, ಅದಕ್ಕೂ ಬಿಜೆಪಿ ಶಾಸಕರು ಅಡ್ಡಿ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ. ಸರ್ಕಾರ ಸುಸೂತ್ರವಾಗಿ ನಡೆಯುತ್ತಿಲ್ಲ ಎಂಬುದು ಬಿಜೆಪಿ ಶಾಸಕರ ಪ್ರತಿಭಟನೆಗೆ ಕಾರಣವಾಗಿದೆ.

ಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರ

English summary
Congress party workers Thursday night staged torchlight protest against BJP in Bengaluru , for not letting Karnataka assembly function by holding protests in the assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X