ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬಿಐ, ಐಟಿ, ಇಡಿ 'ಬಿಜೆಪಿ' ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ!

|
Google Oneindia Kannada News

ಬೆಂಗಳೂರು, ಅ. 06: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬಸ್ಥರ ಮೇಲಿನ ಭ್ರಷ್ಟಾಚಾರ ಆರೋಪ ಮುಚ್ಚುಹಾಕಲು ರಾಜ್ಯದಲ್ಲಿ ಸಿಬಿಐ ದಾಳಿ ನಡದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ಕುರಿತು ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರೆಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಹಲವು ಸಚಿವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿರುವ ದಾಖಲೆ ಇದ್ದಾಗಲೂ ಯಾವುದೇ ಕ್ರಮವಾಗುತ್ತಿಲ್ಲ. ಆ ಭ್ರಷ್ಟಾಚಾರ ಮರೆಮಾಚಲು ಈ ರೇಡ್ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ನಿನ್ನೆ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಅದಾದ ಬಳಿಕ ಕೆಲವು ಸ್ವಾಮೀಜಿಗಳು ಹಾಗೂ ಕಾಂಗ್ರೆಸ್ ನಾಯಕರು ಡಿಕೆಶಿ ನಿವಾಸಕ್ಕೆ ತೆರಳಿ ಧೈರ್ಯ ತುಂಬಿದ್ದಾರೆ. ಯಾರು, ಏನೂ ಹೇಳಿದರು? ಇಲ್ಲಿದೆ ಮಾಹಿತಿ!

ಬಿಜೆಪಿ ಬಾಗಿಲು ಕಾಯುವ ನಾಯಿಗಳು

ಬಿಜೆಪಿ ಬಾಗಿಲು ಕಾಯುವ ನಾಯಿಗಳು

ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಸಿಬಿಐ, ಐಟಿ, ಇಡಿ ಸಂವಿಧಾನದ ಕಾವಲು ನಾಯಿಗಳು. ಅದನ್ನ ಸಂವಿಧಾನದಲ್ಲಿಯೇ ತಿಳಿಸಲಾಗಿದೆ. ಆದರೆ ಇವತ್ತು ಅವು ಕಾವಲು ನಾಯಿಗಳಾಗಿ ಉಳಿದಿಲ್ಲ. ಬಿಜೆಪಿ ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ.


ಪ್ರತಿಚುನಾವಣೆಯಲ್ಲೂ ದಾಳಿ ಆಗುತ್ತದೆ. ಎದುರಾಳಿ ಪಕ್ಷದವರ ಮೇಲೆ ದಾಳಿಯಾಗುತ್ತದೆ. ಈ ದಾಳಿ ಮಾಡುವಂತೆ ತನಿಖಾ ಸಂಸ್ಥೆಗಳಿಗೆ ತರಬೇತಿ ನೀಡಲಾಗಿದೆ. ಅದನ್ನು ಈ ಸಂಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ. ಬಿಜೆಪಿಗೆ ತಮ್ಮ ನಿಯತ್ತು ತೋರಿಸುತ್ತಿವೆ ಎಂದು ಐಟಿ, ಇಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳ ವಿರುದ್ದ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಪ್ರೇರಿತ ದಾಳಿ

ರಾಜಕೀಯ ಪ್ರೇರಿತ ದಾಳಿ

ಇದೇ ವಿಚಾರದ ಕುರಿತು ಮಾತನಾಡಿರುವ ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು, ಡಿಕೆಶಿ ಅವರ ಕುಟುಂಬದವರ ಮೇಲೆ ಒಟ್ಟು 14 ಕಡೆಗಳಲ್ಲಿ ಸಿಬಿಐ ರೇಡ್ ಮಾಡಿದೆ. ಇದು ಪಕ್ಕಾ ರಾಜಕೀಯ ಪ್ರೇರಿತವಾದ ದಾಳಿ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಿಬಿಐಗೆ ಕಾಣ್ತಿಲ್ವಾ? ಆರ್ ಟಿ ಜಿ ಎಸ್ ಮೂಲಕ ಹಣ ತೆಗೆದುಕೊಂಡಿದ್ದಾರೆ. ಸರ್ಕಾರದ ಈ ಭ್ರಷ್ಟಾಚಾರ ಸಿಬಿಐ, ಐಟಿ, ಇಡಿಗೆ ಗೊತ್ತಿಲ್ವಾ? ಅವರು ಯಾಕೆ ದೂರು ದಾಖಲಿಸಿಕೊಂಡಿಲ್ಲ? ಇದರ ಬಗ್ಗೆ ಮೊದಲು ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.

ಜನರೇ ಪಾಠ ಕಲಿಸುತ್ತಾರೆ

ಜನರೇ ಪಾಠ ಕಲಿಸುತ್ತಾರೆ

ಚುನಾವಣೆ ಇದ್ದಾಗಲೇ ಇಂತಹ ದಾಳಿ ನಡೆಯುತ್ತಿವೆ. ರಾಜ್ಯದ ಜನರಿಗೆ ಇದು ಗೊತ್ತಾಗುವುದಿಲ್ಲವಾ? ರಾಜ್ಯದ ಜನರೇ ಮುಂದೆ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಹತ್ತಿರಬಂದಾಗ ಈ ರೀತಿಯ ದಾಳಿ ನಡೆಯುತ್ತಲೇ ಇವೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ನಿನ್ನೆ ನಡೆದ ಸಿಬಿಐ ದಾಳಿ ರಾಜಕೀಯ ದುರುದ್ದೇಶದ ದಾಳಿ ಎಂದಿರುವ ಅವರು, ಇದೊಂದು ಹೊಸ ಪ್ರವೃತ್ತಿ ಪ್ರಾರಂಭವಾಗಿದೆ ಎಂದಿದ್ದಾರೆ.

Recommended Video

Muttappa Rai ಪುತ್ರ Ricky Rai ಮನೆ ಮೇಲೆ CCB ದಾಳಿ | Oneindia kannada
ಸಿಎಂ ಭ್ರಷ್ಟಾಚಾರ ಮರೆಮಾಚಲು

ಸಿಎಂ ಭ್ರಷ್ಟಾಚಾರ ಮರೆಮಾಚಲು

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಇಂತಹ ಕಾಟ ಹೆಚ್ಚಾಗಿದೆ. ನಮ್ಮ ಪರ ರಾಜ್ಯದ ಜನರ ಒಲವಿದೆ ಎಂಬ ಕಾರಣಕ್ಕೆ ಈ ದಾಳಿ ನಡೆದಿದೆ. ಸಿಎಂ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ ಮರೆಮಾಚೋಕೆ ಇಂತಹ ದಾಳಿ ಮಾಡುತ್ತಿದ್ದಾರೆ. ಏಳೂವರೆ ಕೋಟಿ ರೂಪಾಯಿ ಹಣ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಆಗಿದೆ. ಆದರೆ ಅದರ ಬಗ್ಗೆ ಸಿಬಿಐ, ಐಟಿ ಯಾಕೆ‌ ಕೇಸ್ ದಾಖಲಿಸಿಲ್ಲ? ಸುಮೋಟು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿಲ್ಲ. ಮೊದಲು ಸಿಎಂ ಕುಟುಂಬದ ಭ್ರಷ್ಟಾಚಾರವನ್ನು ತನಿಖೆ ಮಾಡಲಿ. ಅದನ್ನು ಯಾಕೆ ತನಿಖೆ ಮಾಡುತ್ತಿಲ್ಲ?

ಇದೇ ವಿಚಾರ ಮುಂದಿಟ್ಟುಕೊಂಡು ಉಪ ಚುನಾವಣೆಯಲ್ಲಿ ನಾವು ಜನರ ಬಳಿ‌ ಹೋಗುತ್ತೇವೆ. ನಿನ್ನೆ ಏನಾಯ್ತು ಎಂಬುದನ್ನು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ. ಬಿಜೆಪಿಯವರು ಏನು‌ ಮಾಡಿದರೂ, ನಮಗೆ ಏನು ಆಗಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

English summary
Congress leaders continue to condemn over CBI raid on KPCC President D.K. Sivakumar's premises. Several former ministers, including former KPCC president Dinesh Gundurao, former minister Priyank Kharge and former minister Krishna Bhairaga Gowda, met KPCC president Dikeshi today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X