ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರಿಂದಲೇ ಸೂಚನೆ: ರಮ್ಯಾ ಆಕ್ರೋಶ

|
Google Oneindia Kannada News

ಬೆಂಗಳೂರು: ಸಿನಿಮಾ ಮತ್ತು ರಾಜಕೀಯ ಎರಡರಿಂದಲೂ ದೂರವಿರುವ ನಟಿ ರಮ್ಯಾ ಸುದ್ದಿಯಲ್ಲಿರುವುದರಲ್ಲಿ ಮುಂದಿರುತ್ತಾರೆ. ನಿನ್ನೆಯಷ್ಟೇ ಡಿಕೆ ಶಿವಕುಮಾರ್‌ ವಿರುದ್ಧ ಗುಡುಗಿದ್ದ ರಮ್ಯಾ, ಮಾರನೆಯ ದಿನವೇ ಪಕ್ಷದಲ್ಲಿರುವ ಕೆಲವರು ನನ್ನನ್ನು ಟ್ರೋಲ್ ಮಾಡುವುದಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ನಾಯಕರಿಗೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಎಂದು ಸಾಕ್ಷಿ ಸಮೇತ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್‌ ವಿರುದ್ಧ ಟ್ವೀಟ್ ಮಾಡಿದ್ದ ಮಾಜಿ ಸಂಸದೆ
ಎಂಬಿ ಪಾಟೀಲ್ ಮತ್ತು ಅಶ್ವತ್ಥ್​ ನಾರಾಯಣ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್ ಪಿಎಸ್‌ಐ ನೇಮಕಾತಿ ಹಗರಣದಿಂದ ರಕ್ಷಿಸಿಕಪಳ್ಳುವುದಕ್ಕೆ ಕಾಂಗ್ರೆಸ್‌ ನಾಯಕರಲ್ಲಿ ಒಬ್ಬರಾದ ಎಂಬಿ ಪಾಟೀಲ್‌ ಅವರ ಮೊರೆ ಹೋಗಿದ್ದಾರೆ ಎಂದು ಹೇಳಿದ್ದರು.

ಇದರ ಬಗ್ಗೆ ಟ್ವೀಟ್ ಮಾಡಿದ್ದ ರಮ್ಯಾ, ಕೆಲವು ಕಾರ್ಯಕ್ರಮಗಳನ್ನು ಪಕ್ಷಾತೀತಾವಾಗಿ ನಾಯಕರು ಭೇಟಿ ಮಾಡುವ ಸಂದರ್ಭ ಎದುರಾಗುತ್ತವೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ಹಿರಿಯ ನಾಯಕ ಎಂಬಿ ಪಾಟೀಲ್ ವಿರುದ್ಧ ಇಂತಹ ಹೇಳಿಕೆ ನೀಡಿರುವುದಕ್ಕೆ ನನಗೆ ಆಶ್ಚರ್ಯವಾಗಿದೆ. ಮುಂದಿನ ಚುನಾವಣೆಗೆ ಒಟ್ಟಿಗೆ ಹೋಗಬೇಕಲ್ಲವೇ? ಎಂದು ಟ್ವೀಟ್ ಮಾಡಿದ್ದರು.

Congress leaders and volunteers asked to troll me :EX MP Ramya shares images

ಈ ಟ್ವೀಟ್ ಮಾಡಿದ ಬೆನ್ನಲ್ಲೇ ಗುರುವಾರ ಸರಣಿ ಟ್ವೀಟ್ ಮಾಡಿರುವ ನಟಿ, ತಮ್ಮ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಮಾಡುವುದಕ್ಕಾಗಿ ಪಕ್ಷದ ಕಚೇರಿಯಿಂದ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಕೆಲವು ಫೋಟೋಗಳನ್ನು ಟ್ವೀಟ್‌ ಮಾಡುವ ಮೂಲಕ ಸಾಕ್ಷಿ ಸಮೇತ ಆರೋಪ ಮಾಡಿದ್ದಾರೆ.

ನನ್ನನ್ನು ಟ್ರೋಲ್ ಮಾಡುವಂತೆ ಕಚೇರಿಯಿಂದ ಸೂಚನೆ
" ಕಚೇರಿ(ಕೆಪಿಸಿಸಿ) ನನ್ನನ್ನು ಟ್ರೋಲ್ ಮಾಡಲು ಕೆಲವು ಕಾಂಗ್ರೆಸ್‌ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಟ್ರೋಲ್‌ ಮಾಡಲು ಸೂಚನೆ ನೀಡಿದೆ. ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ - ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ "

Congress leaders and volunteers asked to troll me :EX MP Ramya shares images

ಎಂದು ಡಿಕೆ ಶಿವಕುಮಾರ್ ಮತ್ತು ರಾಷ್ಟ್ರಿಯ ಕಾಂಗ್ರೆಸ್‌ ಅಧಿಕೃತ ಟ್ವಿಟ್‌ ಖಾತೆಗಳಿಗೆ ಆ ಸ್ಕ್ರೀನ್ ಶಾಟ್‌ಗಳನ್ನು ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ರಮ್ಯಾ ಆರೋಪಕ್ಕೆ ಬಿಆರ್‌ ನಾಯ್ಡು ಟ್ವೀಟ್‌ ಸಾಕ್ಷಿ?
ರಮ್ಯಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದ ಸ್ಕ್ರೀನ್‌ ಶಾಟ್‌ನಲ್ಲಿದ್ದ ಒಂದು ಭಾಗವನ್ನು ಕೆಪಿಸಿಸಿ ಸಾಮಾಜಿಕ ಜಾಲಾತಾಣದ ಅಧ್ಯಕ್ಷ ಬಿಆರ್‌ ನಾಯ್ದು ಯತಾವತ್ತಾಗಿ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ ಒಳ್ಳೆಯ ಕಾಪಿ ಪೇಸ್ಟ್‌ ಕೆಲಸ ಎಂದು ಬರೆದು ತಮ್ಮ ಆರೋಪ ನಿಜ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ರಮ್ಯಾ ಶೇರ್‌ ಮಾಡಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿದ್ದ ಆಯ್ದ ಕೆಲವು ಅಂಶಗಳು ಇಲ್ಲಿವೆ :

'ಹೆತ್ತ ತಂದೆ ತಂದೆ ತಾಯಿ ಹಾಗೂ ಗುರಿ ತೋರಿಸಿದ ಗುರುಗಳನ್ನ ಎಂದು ಮರೆಯಬಾರದು. ಆದರೆ, ರಮ್ಯಾ ಅವರೆ ನೀವು ನಿಮ್ಮ ರಾಜಕೀಯ ಗುರುಗಳನ್ನು ಮರೆತು ಮಾತನಾಡುತ್ತಿದ್ದೀರಿ. ಇದು ನಿಮಗೆ ಶ್ರೇಯಸ್ಸಲ್ಲ. ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಬೇಡಿ....'

Congress leaders and volunteers asked to troll me :EX MP Ramya shares images

'ಮಂಡ್ಯದಲ್ಲಿ ಜಯಗಳಿಸಿದ್ದರು ಯಾವುದೇ ರೀತಿಯ ಜನರಿಗೆ ಮಾದರಿಯಾಗುವ ಒಂದು ಕೆಲಸ ಮಾಡದೆ, ಈಗ ಸರಿಯಾಗಿ ಮಾಹಿತಿ ತಿಳಿದುಕೊಳ್ಳದೇ ಮಾತನಾಡುವುದು ಎಷ್ಟರ ಮಟ್ಟಿಗೆ ಶೋಭೆ ತರುತ್ತೆ ನಿಮಗೆ?'

'ಸಂಸದೆಯಾದವರು ಇಷ್ಟು ವರ್ಷ ಎಲ್ಲಿ ನಾಪತ್ತೆಯಾಗಿದ್ರಿ? ಇಷ್ಟು ದಿನ ಎಲ್ಲಿ ಹೋಗಿತ್ತು ನಿಮ್ಮ ಕಾಳಜಿ? ಪಕ್ಷ ನಿಮ್ಮನ್ನು ಗೆಲ್ಲಿಸಿ ಕಳುಹಿಸಿದ್ದು ನೆನಪಿದೆಯೇ? ಗೆಲ್ಲಿಸಿದ ಜನ ನೆನಪಿದೆಯೋ ತಮಗೆ? ಡಿಕೆ ಶಿವಕುಮಾರ್‌ ಬಗ್ಗೆ ಮಾತನಾಡಲು ನಿಮಗೆ ಯಾವ ಅರ್ಹತೆಯಿದೆ?'

'ನೀನು ಪಕ್ಷಕ್ಕೆ ಏನೂ ಮಾಡದೆ ಇದ್ದರು ಪರವಾಗಿಲ್ಲ. ಅನಗತ್ಯವಾಗಿ ನಮ್ಮ ನಾಯಕರ ಮಧ್ಯೆ ಗೊಂದಲ ಸೃಷ್ಠಿ ಮಾಡಬೇಡ. ನಮ್ಮ ನಾಯಕ ಡಿಕೆ ಶಿವಕುಮಾರ್ ಬಗ್ಗೆ ನಿಮಗೆ ತಿಳಿದಿದೆ'.

'ಅಂದು ಅಂಬರೀಷ್‌ ಅಂತ್ಯ ಸಂಸ್ಕಾರಕ್ಕು ಬಾರದ ನೀವು ಇಂದು ಒಬ್ಬ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ನೈತಿಕತೆ ಉಳಿಸಿಕೊಂಡಿದ್ದಿರಾ? ಒಮ್ಮೆ ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ'

ಹೀಗೆ ತಮ್ಮನ್ನು ಟಾರ್ಗೆಟ್ ಮಾಡಿ ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳನ್ನು ಹಲವಾರು ರೀತಿಯ ಸಂದೇಶಗಳಿರುವ ಸ್ಕೀನ್‌ ಶಾಟ್‌ಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ.

English summary
Former MP of the Congress party and actor, Ramya alleged Wednesday that the Congress instructed its workers to troll her on social media for a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X