ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ಗೆ ರಾಜೀನಾಮೆ ನೀಡಿದ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03: ಕಾಂಗ್ರೆಸ್ ಮಾಜಿ ಸಚಿವ, ಹಾಲಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಚುನಾವಣೆ ಗೆದ್ದು ಮಂತ್ರಿಯಾಗಿದ್ದ ಪ್ರಮೋದ್ ಮಧ್ವರಾಜ್ ಜೆಡಿಎಸ್‌ ಯಾವಾಗ ಸೇರಿದ್ದರು ಎಂದು ಹುಬ್ಬೇರಿಸಬೇಡಿ. ಅವರು ಜೆಡಿಎಸ್ ಪಕ್ಷ ಸೇರಿದ್ದರು, ಆದರೆ ಕಾಂಗ್ರೆಸ್‌ ತೊರೆದಿರಲಿಲ್ಲ. ತಾಂತ್ರಿಕ ಕಾರಣಕ್ಕಾಗಿ ಅವರು ಜೆಡಿಎಸ್ ಪಕ್ಷ ಸೇರಿದ್ದರು.

ಉಪಚುನಾವಣೆ: ಹೊಸಕೋಟೆಯಲ್ಲಿ ಎಂಟಿಬಿಗೆ ಗೆಲುವು ಸುಲಭದ ತುತ್ತೇನಲ್ಲ!ಉಪಚುನಾವಣೆ: ಹೊಸಕೋಟೆಯಲ್ಲಿ ಎಂಟಿಬಿಗೆ ಗೆಲುವು ಸುಲಭದ ತುತ್ತೇನಲ್ಲ!

ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಮೋದ್ ಮಧ್ವರಾಜ್ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದ ಕಾರಣ, ಜೆಡಿಎಸ್‌ ಪಕ್ಷದಿಂದ ಪ್ರಮೋದ್‌ ಮಧ್ವರಾಜ್‌ಗೆ ಟಿಕೆಟ್ ನೀಡಲಾಗಿತ್ತು.

ಜೆಡಿಎಸ್ ಬಿ-ಫಾರಂ ಇಂದ ಸ್ಪರ್ಧಿಸಿದ್ದ ಪ್ರಮೊದ್

ಜೆಡಿಎಸ್ ಬಿ-ಫಾರಂ ಇಂದ ಸ್ಪರ್ಧಿಸಿದ್ದ ಪ್ರಮೊದ್

ಜೆಡಿಎಸ್‌ ಪಕ್ಷದಿಂದ ಪ್ರಮೋದ್‌ ಮಧ್ವರಾಜ್‌ಗೆ ಟಿಕೆಟ್ ನೀಡಿದ್ದ ಕಾರಣ, ಜೆಡಿಎಸ್ ಬಿ-ಫಾರಂ ಪಡೆಯಲೆಂದು ಪ್ರಮೋದ್ ಅವರು ಜೆಡಿಎಸ್ ಪಕ್ಷ ಸೇರಿದ್ದರು. ಕೇವಲ ತಾಂತ್ರಿಕ ಕಾರಣಕ್ಕಾಗಿ ಮಾತ್ರವೇ ಅವರು ಜೆಡಿಎಸ್ ಪಕ್ಷ ಸೇರಿದ್ದರು. ಆದರೆ ಈಗ ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಅಶ್ವತ್ಥ್ ನಾರಾಯಣ್ ಗೆ ಡಿಸಿಎಂ ಆಗುವ ಅರ್ಹತೆ ಏನಿದೆ?: ಮಾಜಿ ಸಂಸದ ಧ್ರುವನಾರಾಯಣ್ಅಶ್ವತ್ಥ್ ನಾರಾಯಣ್ ಗೆ ಡಿಸಿಎಂ ಆಗುವ ಅರ್ಹತೆ ಏನಿದೆ?: ಮಾಜಿ ಸಂಸದ ಧ್ರುವನಾರಾಯಣ್

ಜೆಡಿಎಸ್‌ ರಾಜ್ಯಾಧ್ಯಕ್ಷರಿಗೆ ಪ್ರಮೋದ್ ಮಧ್ವರಾಜ್ ಪತ್ರ

ಜೆಡಿಎಸ್‌ ರಾಜ್ಯಾಧ್ಯಕ್ಷರಿಗೆ ಪ್ರಮೋದ್ ಮಧ್ವರಾಜ್ ಪತ್ರ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಪ್ರಮೋದ್ ಮಧ್ವರಾಜ್, ಆಗ ರಾಜಕೀಯ ಕಾರಣ ಹಾಗೂ ಜೆಡಿಎಸ್‌ ಬಿ-ಫಾರಂ ಪಡೆಯಲೆಂದು ನಾನು ಜೆಡಿಎಸ್ ಸೇರಿದ್ದೆ. ಈಗ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಒಟ್ಟಿಗೆ ಇಲ್ಲವಾಗಿರುವ ಕಾರಣ ನಾನು ಜೆಡಿಎಸ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯ

ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಮೋದ್

ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಮೋದ್

ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಮೋದ್ ಮಧ್ವರಾಜ್‌ ಅವರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಅವರು ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧಿಸಿದ್ದರು. ಆದರೆ 27,018 ಮತಗಳ ಅಂತರದಿಂದ ಸೋಲುಂಡರು.

ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್

ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್

ಪ್ರಮೋದ್ ಮಧ್ವರಾಜ್ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ರೀಡಾ ಮತ್ತು ಯುವಜನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರು.

ಫೋನ್ ಕದ್ದಾಲಿಕೆ ಸಿಬಿಐ ತನಿಖೆ ಚುರುಕು: ಎಚ್‌ಡಿಕೆಗೆ ಸಂಕಷ್ಟಫೋನ್ ಕದ್ದಾಲಿಕೆ ಸಿಬಿಐ ತನಿಖೆ ಚುರುಕು: ಎಚ್‌ಡಿಕೆಗೆ ಸಂಕಷ್ಟ

English summary
Congress leader Pramod Madhwaraj resigned to his JDS membership. He joined JDS in last Lok Sabha election time for some technical reasons. He contested last MP election on JDS B-form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X