ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ 500 ಕೋಟಿ ಖರ್ಚಾಗಿಲ್ಲ'- ಎಚ್ ಕೆ ಪಾಟೀಲ್

|
Google Oneindia Kannada News

ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ ಕೊರೊನಾ ವೈರಸ್ ವಿಚಾರದಲ್ಲಿ ಭ್ರಷ್ಟಚಾರ ಆಗ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ್ ಆರೋಪಿಸಿದ್ದಾರೆ.

Recommended Video

Siddaramaiah questioned to CM BSY |ಸರಕಾರದ ಮುಂದೆ ಸಿದ್ದರಾಮಯ್ಯ ಇಟ್ಟ ಹೊಸ ಡಿಮಾಂಡ್ | Oneindia Kannada

ಇಂದು ವಿಧಾನಸೌದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಕೊರೊನಾ ವೈರಸ್ ನಿರ್ವಹಣೆ, ಚಿಕಿತ್ಸೆ ಬಗ್ಗೆ ಚರ್ಚೆ ಮಾಡಲಾಗಿದೆ. ಈ ವೇಳೆ ರಾಜ್ಯದಲ್ಲಿ ಭ್ರಷ್ಟಚಾರ ಆಗಿದೆ ಎಂಬ ವಿಚಾರ ಗಮನಕ್ಕೆ ಬಂದಿದೆ ಎಂದು ಸಾರ್ವಜನಿಕ‌ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಹೇಳಿದ್ದಾರೆ.

ಪ್ರಧಾನಿ ಮೋದಿ ಭಾಷಣ: ಅನ್‌ಲಾಕ್‌2ರಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯಪ್ರಧಾನಿ ಮೋದಿ ಭಾಷಣ: ಅನ್‌ಲಾಕ್‌2ರಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

'ಕರ್ನಾಟಕದಲ್ಲಿ ಗುಣಮಟ್ಟದ ಸೇವೆಯ ಕೊರತೆ ಆಗ್ತಿದೆ. ಕೊರೊನಾ ಮೃತರ ಅಂತ್ಯಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಎಚ್.ಕೆ ಪಾಟೀಲ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮುಂದೆ ಓದಿ....

ಕೊರೊನಾ ಚಿಕಿತ್ಸೆಗೆ 500 ಕೋಟಿ ಸಹ ಖರ್ಚಾಗಿಲ್ಲ

ಕೊರೊನಾ ಚಿಕಿತ್ಸೆಗೆ 500 ಕೋಟಿ ಸಹ ಖರ್ಚಾಗಿಲ್ಲ

''ಕೊರೊನಾ ಚಿಕಿತ್ಸೆಗೆ 500 ಕೋಟಿ ಸಹ ಖರ್ಚಾಗಿಲ್ಲ. ಸರ್ಕಾರ ಏನ್ ಮಾಡ್ತಿದೆ, ಹಣಕಾಸು ವೆಚ್ಚ ಯಾವ ರೀತಿ ಮಾಡ್ತಿದೆ? 15 ಸಾವಿರ ಕೊರೊನಾ ಪರೀಕ್ಷೆಗಳ ಫಲಿತಾಂಶ ಬಾಕಿ ಇವೆ. ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇದೆ. ಈಗ ಹಾಸಿಗೆಗಳ ಅರೇಂಜ್ಮೆಂಟ್ ಮಾಡಲು ಹೊರಟಿದೆ ಸರ್ಕಾರ. ಆಸ್ಪತ್ರೆಗಳಲ್ಲೇ ಯಾಕೆ ಬೆಡ್ ಗಳ ವ್ಯವಸ್ಥೆ ಮಾಡ್ತಿಲ್ಲ ಸರ್ಕಾರ? ಕೊರೊನಾ ನಿರ್ವಹಣೆಯಲ್ಲಿ ಲೋಪ ಆಗಿದೆ'' ಎಂದು ಎಚ್ ಕೆ ಪಾಟೀಲ್ ಆರೋಪ ಮಾಡಿದ್ದಾರೆ.

ಶವಾಗಾರದಲ್ಲಿ ಶವ ಇಟ್ಟುಕೊಳ್ಳಲಾಗಿದೆ

ಶವಾಗಾರದಲ್ಲಿ ಶವ ಇಟ್ಟುಕೊಳ್ಳಲಾಗಿದೆ

''ಕೊವಿಡ್ ನಿಯಂತ್ರಣಕ್ಕೆ ಏನು ವ್ಯವಸ್ಥೆ ಮಾಡಬೇಕು, ಅದರಲ್ಲಿ ಸರ್ಕಾರದಿಂದ ಲೋಪ ಆಗಿದೆ. 15,000 ಕೊವಿಡ್ ಪರೀಕ್ಷಾ ರಿಸಲ್ಟ್ ಬರಲು ಬಾಕಿ ಇದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪರೀಕ್ಷಾ ವರದಿಯನ್ನು ನೀಡಲು ವಾರಗಟ್ಟೆಲೆ ತೆಗೆದುಕೊಳ್ಳಲಾಗಿದೆ. ಮೃತಪಟ್ಟವರ ಕೊವಿಡ್ ಟೆಸ್ಟಿಂಗ್ ವರದಿ ಬರದೆ ವಾರಗಟ್ಟೆಲೆ ಶವಾಗಾರದಲ್ಲಿ ಇಟ್ಟುಕೊಳ್ಳಲಾಗಿದೆ. ಅದು ಅತ್ಯಂತ ಆತಂಕಕಾರಿ ವಿಚಾರವಾಗಿದೆ'' ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಅನ್‌ಲಾಕ್‌ 2.0 ಮಾರ್ಗಸೂಚಿ: ಜುಲೈ 1ರಿಂದ ಏನಿರುತ್ತೆ? ಏನಿರಲ್ಲ?ಕರ್ನಾಟಕದಲ್ಲಿ ಅನ್‌ಲಾಕ್‌ 2.0 ಮಾರ್ಗಸೂಚಿ: ಜುಲೈ 1ರಿಂದ ಏನಿರುತ್ತೆ? ಏನಿರಲ್ಲ?

ಸತ್ತವರನ್ನು ಹೂಳಲು ಜಾಗ ಇಲ್ಲ

ಸತ್ತವರನ್ನು ಹೂಳಲು ಜಾಗ ಇಲ್ಲ

''ಪ್ರತಿ‌ ದಿನಾ 10-15 ಸಾವಿರ ಟೆಸ್ಟಿಂಗ್ ಮಾಡಿ ವರದಿ ತಕ್ಷಣಕ್ಕೆ ನೀಡುವ ವ್ಯವಸ್ಥೆ ಮಾಡಬೇಕು. ಕೊವಿಡ್ ನಿಂದ ಮೃತಪಟ್ಟವರನ್ನು ಜಾನುವಾರು ತರ ನೋಡಲಾಗುತ್ತಿದೆ. ಬಳ್ಳಾರಿಯಲ್ಲಿ ಮೃತರ ಶವಗಳನ್ನು ಕಸದ ರೀತಿ ಕನಿಷ್ಟ ಗೌರವ ನೀಡದೆ ಬಿಸಾಡಲಾಗಿದೆ. ಇದು ಅತ್ಯಂತ ಖಂಡನೀಯ‌ ವಿಚಾರವಾಗಿದೆ. ಸತ್ತವರನ್ನು ಹೂಳಲು ಜಾಗ ಸಿಗುತ್ತಿಲ್ಲ. ಆ ರೀತಿ ಮಾಡಬಾರದು'' ಎಂದು ಖಂಡಿಸಿದ್ದಾರೆ.

ಮುಂದಿನವಾರ ವಿವರ ಸಿಗಲಿದೆ

ಮುಂದಿನವಾರ ವಿವರ ಸಿಗಲಿದೆ

''ಆರೋಗ್ಯ ಇಲಾಖೆ ಉಪಕರಣ, ಇತರೆ ಖರೀದಿಯಲ್ಲಿ ಭ್ರಷ್ಟಾಚಾರದ ದೂರಿನ ಬಗ್ಗೆ ಅಧಿಕಾರಿಗಳು ಮುಂದಿನ ವಾರ ವಿವರ ನೀಡುವುದಾಗಿ ತಿಳಿಸಿದ್ದಾರೆ. ಕೊವಿಡ್ ಹಿನ್ನೆಲೆ ಒಂದು ತಿಂಗಳು ಪಿಎಸಿ ಸಭೆ ನಡೆಸಬಾರದು ಎಂದು ತೀರ್ಮಾನಿಸಲಾಗಿದೆ. ಸಾಧ್ಯವಾದರೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ'' ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

English summary
Congress senior leader H K Patil alleged karnataka government to corruption in coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X