ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿಯನ್ನು ನೋಡಲು ಡಾಕ್ಟರ್ ವೇಷದಲ್ಲಿ ಬಂದಿದ್ರಂತೆ ಪರಮೇಶ್ವರ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: 50 ದಿನದ ಜೈಲುವಾಸದ ನಂತರ ವಾಪಸ್ಸಾದ ಕನಕಪುರ ಶಾಸಕ ಡಿಕೆ ಶಿವಕುಮಾರ್, ಬೆಂಗಳೂರಿನ ಕೆಪಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ತಮ್ಮ ಜೈಲುವಾಸದ ಅನುಭವದ ಕೆಲವೇ ಕೆಲವು ತುಣಕುಗಳನ್ನು ಹಂಚಿಕೊಂಡರು.

'ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ': ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆ'ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ': ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆ

ಅವೆಲ್ಲ ದೊಡ್ಡ ಕತೆ, ಇನ್ನೊಮ್ಮೆ ಹಂಚಿಕೊಳ್ಳುತ್ತೇನೆ ಎನ್ನುತ್ತಲೇ ಕೆಲವು ಮಹತ್ವದ ಸಂಗತಿಗಳನ್ನು ಮಾಧ್ಯಮ ಮಿತ್ರರ ಮುಂದೆ ಹೇಳಿದರು. ಅದರಲ್ಲಿ ಬ ಹುವಾಗಿ ಗಮನ ಸೆಳೆದಿದ್ದು, ಡಿಕೆಶಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಡಾಕ್ಟರ್ ವೇಷದಲ್ಲಿ ಜಿ.ಪರಮೇಶ್ವರ್ ಬಂದಿದ್ದ ಕತೆ!

ಜೈಲಿಂದ ಹೆಬ್ಬಂಡೆಯಾಗಿ ಬಂದ ಡಿಕೆಶಿ, ಬಿಜೆಪಿ ನಾಯಕರಿಗೆ ತಪರಾಕಿ!ಜೈಲಿಂದ ಹೆಬ್ಬಂಡೆಯಾಗಿ ಬಂದ ಡಿಕೆಶಿ, ಬಿಜೆಪಿ ನಾಯಕರಿಗೆ ತಪರಾಕಿ!

ಹೌದು, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಡಿಕೆ ಶಿವಕುಮಾರ್ ಅವರು ಆರೋಗ್ಯದಲ್ಲಿ ವ್ಯತ್ಯಯವಾಗಿ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಬಂದ ಹಲವು ನಾಯಕರಿಗೆ, ಡಿಕೆಶಿ ಅವರನ್ನು ಭೇಟಿ ಮಾಡಲು ಅನುಮತಿ ದೊರಕಿರಲಿಲ್ಲ. ಅವರಲ್ಲಿ ಪರಮೇಶ್ವರ್ ಸಹ ಒಬ್ಬರು!

ಅನುಮತಿ ಸಿಕ್ಕಿರಲಿಲ್ಲ

ಅನುಮತಿ ಸಿಕ್ಕಿರಲಿಲ್ಲ

ರಕ್ತದೊತ್ತಡದ ಸಮಸ್ಯೆಯಿದ ಆಸ್ಪತ್ರೆ ಸೇರಿದ್ದ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಸ್ಪತ್ರೆಗೆ ಬಂದಿದ್ದರು. ಆದರೆ ಅದಾಗಲೇ ಡಿಕೆ ಶಿವಕುಮಾರ್ ಅವರ ಭೇಟಿಗೆ ದಿನದಿನವೂ ಸಾಕಷ್ಟು ಜನ ಬರುತ್ತಿದ್ದರಿಂದ ಅವರಿಗೆ ಡಿಕೆಶಿ ಅವರನ್ನು ನೋಡಲು ಅವಕಾಶ ದೊರಕಿರಲಿಲ್ಲ. ಆದರೆ ಅವರನ್ನು ನೋಡದೆ ವಾಪಸ್ಸಾಗಲು ಪರಮೇಶ್ವರ್ ಸಿದ್ಧರಿರಲಿಲ್ಲ.

ಸೂಟು , ಬೂಟು ಹಾಕಿ ಡಾಕ್ಟರ್ ವೇಷ!

ಸೂಟು , ಬೂಟು ಹಾಕಿ ಡಾಕ್ಟರ್ ವೇಷ!

ಗೊಂದಲದಲ್ಲಿ, ನಿರಾಶೆಯಲ್ಲಿದ್ದ ಪರಮೇಶ್ವರ್ ಅವರಿಗೆ ಆಸ್ಪತ್ರೆಯಲ್ಲಿದ್ದ ಆಪ್ತರೊಬ್ಬರು ಹೊಸ ಉಪಾಯ ಹೇಳಿದರು. ಅದರಂತೆಯೇ ಪರಮೇಶ್ವರ್ ಸೂಟು ಬೂಟು ತೊಟ್ಟು. ಡಾಕ್ಟರ್ ಕೋಟ್ ಧರಿಸಿ, ಸ್ಕೆತಸ್ಕೋಫ್ ಹಾಕಿಕೊಂಡು ಬಂಡು ಡಿಕೆಶಿ ಅವರನ್ನು ಭೇಟಿ ಮಾಡಿ, ಮಾತು ಕತೆ ನಡೆಸಿದ್ದರು! ಈ ವಿಷಯವನ್ನು ಸ್ವತಃ ಡಿಕೆಶಿ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಿದ್ದರಾಮಯ್ಯಗೆ ಅನುಮತಿ ದೊರಕಲಿಲ್ಲ!

ಸಿದ್ದರಾಮಯ್ಯಗೆ ಅನುಮತಿ ದೊರಕಲಿಲ್ಲ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನನ್ನ ಭೇಟಿಗೆಂದು ದೆಹಲಿಯ ಆಸ್ಪತ್ರೆಗೆ ಬಮದಿದ್ದರು ಆದರೆ ಅವರಿಗೆ ಭೇಟಿಗೆ ಅವಕಾಶ ದೊರೆಯಲಿಲ್ಲ. ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಅವರೂ ಹೇಗೋ ಬೇರೆ ಬಾಗಿಲಿನಿಂದ ಬಂದು ಮಾತನಾಡಿಸಿಕೊಂಡು ಹೋಗಿದ್ದರು ಎಂದು ಡಿಕೆಶಿ ಆ ದಿನಗಳನ್ನು ಮೆಲಕು ಹಾಕಿದರು.

ದೇವೇಗೌಡರಿಗೂ ನಿರಾಶೆ

ದೇವೇಗೌಡರಿಗೂ ನಿರಾಶೆ

"ತಿಹಾರ್ ಜೈಲಿನಲ್ಲಿದ್ದ ನನ್ನ ಭೇಟಿಗೆಂದು ಹಲವು ಬಾರಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ದೆಹಲಿಗೆ ಬಂದಿದ್ದರು. ಆದರೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಜೈಲಿನಲ್ಲಿ ತಿಂಗಳಿಗೆ ಎರಡು ದಿನ ಮಾತ್ರವೇ ನಮಗೆ ಬೇಕಾದವರನ್ನು ಭೇಟಿ ಮಾಡಲು ಅವಕಾಶವಿತ್ತು. ಆದ್ದರಿಂದಲೇ ಹಲವರಿಗೆ ಭೇಟಿಗೆ ಅವಕಾಶ ದೊರಕಲಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಅದಕ್ಕಾಗಿಯೇ ಒಂದೇ ಬಾರಿ ಜೈಲಿಗೆ ಆಗಮಿಸಬೇಕಾಯ್ತು" ಎಂದು ಡಿಕೆ ಶಿವಕುಮಾರ್ ಅವರು ಹೇಳಿದರು.

English summary
Congress Leader G Parameshwar Met DK Shivakumar In Hospital In Doctor Costume!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X