ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರತ್ವ ಕಾನೂನು; ಸಿಎಂ ಇಬ್ರಾಹಿಂ ಸಿಡಿಸಿದ್ರು ನಗೆ ಬಾಂಬ್!

|
Google Oneindia Kannada News

ಬೆಂಗಳೂರು, ಡಿಸೆಂಬರ್ 21: ರಾಷ್ಟ್ರೀಯ ಪೌರತ್ವ ಕಾನೂನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ತಮ್ಮನ್ನೆ ತಾವು ವಿಡಂಬನೆ ಮಾಡಿಕೊಳ್ಳುವ ಮೂಲಕ ನಗೆ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೋದಿ, ಅಮಿತ್ ಷಾ, ಪಾಕಿಸ್ತಾನ, ಬಾಂಗ್ಲಾದಿಂದ ಬಂದವರನ್ನು ಹಿಡಿದು ದಾಖಲೆ ಕೇಳಲಿ, ಅದು ಬಿಟ್ಟು ಇಲ್ಲಿರುವ ಸಾಬರಿಗೆ (ಮುಸ್ಲಿಂರಿಗೆ) ದಾಖಲೆ ಕೊಡು ಅಂತಾ ಕೇಳಿದ್ರೆ ಎಲ್ಲಿಂದ ತಂದು ಕೊಡುವುದು, ಇವಾಗ ಯಾರಾದರೂ ನನಗೇ ಎಷ್ಟು ಮಕ್ಕಳು ಅಂತಾ ಕೇಳಿದರೆ, ಸರಿಯಾಗಿ ಗೊತ್ತಿಲ್ಲ ನೋಡಿ' ಎನ್ನೋ ಮೂಲಕ ತಮ್ಮನ್ನೇ ತಾವು ವಿಡಂಬನೆ ಮಾಡಿಕೊಂಡು ಪೌರತ್ವ ಕಾನೂನನ್ನು ಖಂಡಿಸಿದ್ದಾರೆ.

ಸಿಎಂ, ಡಿಸಿಎಂ ನಡುವೆ 'ತಂದಿಡುವ' ಎಂ.ಪಿ.ರೇಣುಕಾಚಾರ್ಯ ಹೇಳಿಕೆ ಸಿಎಂ, ಡಿಸಿಎಂ ನಡುವೆ 'ತಂದಿಡುವ' ಎಂ.ಪಿ.ರೇಣುಕಾಚಾರ್ಯ ಹೇಳಿಕೆ

'ಅಮಿತ ಷಾ, ಪ್ರಧಾನಿ ಮೋದಿ ದಾರಿ ತಪ್ಪಿಸುತ್ತಿದ್ದಾರೆ. ಮಾಡಲು ಕೆಲಸವಿಲ್ಲದೇ ಈ ಕಾನೂನನ್ನು ತಂದಿದ್ದಾರೆ. ಹಾಗೆ ನೋಡಿದರೆ, ದ್ರಾವಿಡರು ಭಾರತದ ಮೂಲ ನಿವಾಸಿಗಳು. ಆರ್ಯರೇ ಹೊರಗಿನವರು. ಬೇಕಾದರೆ ಅವರೇ ನಮ್ಮ ದೇಶ ಬಿಟ್ಟು ಹೋಗಲಿ. ಹಿಂದೂ ಮುಸ್ಲಿಂ ಎಲ್ಲರೂ ಭಾರತೀಯರು. ನಾವೆಲ್ಲ ಸಹೋದರರು. ಕಾನೂನನ್ನು ರದ್ದು ಮಾಡಬೇಕು' ಎಂದು ಹೇಳಿದರು.

Congress Leader CM Ibrahim Speaks About CAA

'ತರಕಾರಿ, ದಿನಸಿ ಬೆಲೆಗಳ ಜಾಸ್ತಿ ಆಗಿವೆ. ಉದ್ಯೋಗಗಳು ಇಲ್ಲ. ಜಿಡಿಪಿ ಕುಸಿದಿದೆ, ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಮೋದಿಯವರು ಕೆಲಸಕ್ಕೆ ಬಾರದ ಕಾಯ್ದೆ ಕಾನೂನುಗಳನ್ನು ಮಾಡಿಕೊಂಡು ಯಾವಾಗಲೂ ಅಧಿಕಾರದಲ್ಲಿ ಉಳಿಯಬೇಕು ಎಂಬ ದುರಾಲೋಚನೆಯಲ್ಲಿ ಇದ್ದಾರೆ' ಎಂದು ಖಂಡಿಸಿದರು.

English summary
Congress Leader CM Ibrahim Speaks About CAA In Bengaluru, its goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X